ಬಂಟ್ವಾಳ: ಅಮ್ಮುಂಜೆ ವಲಯ ಕಾಂಗ್ರೆಸ್ ಸಮಿತಿಯ ವತಿಯಿಂದ ಕಲಾಯಿಯಲ್ಲಿ ನೂತನ ಹೆಲ್ಪ್ಲೈನ್ ಕಚೇರಿಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಉದ್ಘಾಟಿಸಿದರು.
ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಮೊಹಮ್ಮದ್ ಸೋಹಿಲ್, ಮೊಹಮ್ಮದ್ ಆಶ್ರರ್, ರಝಕ್ ಕಲಾಯಿ, ನಾಸೀರ್ ಗರಡಿ, ಯಾಸಿನ್ ಹೊಸನಗರ, ತಮೀಮ್ ಹೊಸನಗರ ಅವರನ್ನು ಪಕ್ಷದ ಶಾಲು ಹೊದಿಸಿ ಧ್ವಜ ನೀಡಿ ಸ್ವಾಗತಿಸಿದರು.
ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ.ಮಾಜಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್‌ಕುಮಾರ್ ಶೆಟ್ಟಿ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೆÊಲು, ವಲಯ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಗ್ರಾ.ಪಂ.ಸದಸ್ಯ ಅಬ್ದುಲ್ ರಜಾಕ್, ಕಾಂಗ್ರೆಸ್ ಹೆಲ್ಪ್ಲೈನ್ ಅಧ್ಯಕ್ಷ ಇಲಿಯಾಸ್ ಕಲಾಯಿ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾಕರ ಘಟಕದ ಸಂಘಟನಾ ಕಾರ್ಯದರ್ಶಿ ರಮ್ಲಾ ಒಬೊರು ,ಬೂತ್ ಅಧ್ಯಕ್ಷರಾದ ಗೋಡ್‌ಫ್ರೆ ಬೆಂಜನಪದವು, ಮಜೀದ್ ತಾಳಿಪಾಡಿ, ಬಿ.ಎಂ.ಹಮೀದ್, ಅಬ್ದುಲ್ ಲತೀಫ್, ಮಹಮ್ಮದ್ ಇರ್ಷಾದ್, ಹಕೀಮ್ ತಾಳಿಪಾಡಿ, ಗ್ರಾ.ಪಂ.ಮಾಜಿ ಸದಸ್ಯ ಸಲಾಂ, ಕಾಂಗ್ರೆಸ್ ಪ್ರಮುಖರಾದ ಇಕ್ಬಾಲ್ ಕೆ.ಟಿ, ಹನೀಫ್, ಲತೀಫ್, ಹಾಮದ್ ಎಂ.ಆರ್, ಅಲ್ತಾಫ್, ಅಬ್ದುಲ್ ರೆಹಮಾನ್, ನಾಸಿರ್ ಹೊಸನಗರ ಮೊದಲಾದವರು ಉಪಸ್ಥಿತರಿದ್ದರು.