ಬಂಟ್ವಾಳ : ಕಳ್ಳಿಗೆ, ಅಮ್ಮುಂಜೆ, ಕರಿಯಂಗಳ, ತೆಂಕಬೆಳ್ಳೂರು, ಬಡಗಬೆಳ್ಳೂರು, ಕುರಿಯಾಳ, ಅಮ್ಟಾಡಿ ಮತ್ತು ಅರಳ ವಲಯ ಕಾಂಗ್ರೆಸ್ ಸಮಿತಿ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ಇವರ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ , ಉಚಿತ ಕಣ್ಣಿನ ಮತ್ತು ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಆರೋಗ್ಯ ಕಾರ್ಡು ವಿತರಣಾ ಕಾರ್ಯಕ್ರಮವು ಶನಿವಾರ ಪಚ್ಚಿನಡ್ಕ ತೊಡಂಬಿಲ ಚರ್ಚ್ ಹಾಲ್ ನಲ್ಲಿ ನಡೆಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಹಾತ್ಮಾಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.
ಬಳಿಕ ಮಾತನಾಡಿದ ಅವರು, ಸುಂದರ ಹಾಗೂ ಸಾಮರಸ್ಯದ ಭಾರತದ ಕನಸನ್ನು ಕಂಡ ಗಾಂಧೀಜಿಯವರನ್ನು ಅಪಮಾನಿಸುವ ಘಟನೆಗಳು ನಡೆಯುತ್ತಿದ್ದು ಇದು ಖಂಡನೀಯ ಎಂದರು. ಈ ಬಗ್ಗೆ ಪ್ರಜ್ಞಾವಂತರು ಮೌನವಾಗಿರದೆ ಅದನ್ನು ವಿರೋಧಿಸುವ ಕೆಲಸ ಮಾಡಬೇಕು ಎಂದರು. ದೇಶ ಎಂದರೆ ಒಂದು ವ್ಯಕ್ತಿ, ಪಕ್ಷ ಅಲ್ಲ. ಹುತಾತ್ಮರಾದವರಿಗೆ ಅಗೌರವ ಕೊಡುವ ಕೆಲಸ ಮಾಡಬಾರದು ಎಂದ ಅವರು,ಗಾಂಧೀಜಿಯ ಆಶಯದಂತೆ ಮತೀಯವಾದಕ್ಕೆ ಜಾತ್ಯಾತೀತವಾದ ಉತ್ತರವಾಗಲಿ ಎಂದರು. ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ವಂ.ಫಾದರ್ ವಿನ್ಸೆಂಟ್ ಲೋಬೋ,
ಬಿಲ್ಲವ ಮುಖಂಡ ಸೇಸಪ್ಪ ಕೋಟ್ಯಾನ್, ಫಾದರ್ ಮುಲ್ಲರ್ ಆಸ್ಪತ್ರೆ ರಕ್ತನಿಧಿ ಕೇಂದ್ರದ ಚಾರು ಕೋಸ್ಲಾ ವೇದಿಕೆಯಲ್ಲಿದ್ದರು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಬೇಬಿಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಸುದರ್ಶನ್ ಜೈನ್, ಅಬ್ಬಾಸ್ ಅಲಿ, ಸಂಜೀವ ಪೂಜಾರಿ, ಜಯಂತಿ ವಿ.ಪೂಜಾರಿ, ಮಲ್ಲಿಕಾ ಶೆಟ್ಟಿ, ಫ್ಲೋಸಿ ಡಿಸೋಜ, ಮಲ್ಲಿಕಾ ಪಕ್ಕಳ ಮೊದಲಾದವರು ಉಪಸ್ಥಿತರಿದ್ದರು.
ಚಂದ್ರಶೇಖರ ಭಂಡಾರಿ ಸ್ವಾಗತಿಸಿದರು. ನವಾಜ್ ವಂದಿಸಿದರು. ಹಕೀಂ ಕಲಾಯಿ ಕಾಯಕ್ರಮ ನಿರ್ವಹಿಸಿದರು.