ಪ್ರಧಾನಿ ನರೇಂದ್ರ ಮೋದಿವರ 71 ನೇ ಹುಟ್ಟು ದಿನದ ಅಂಗವಾಗಿ ಸೇವೆ ಹಾಗೂ ಸಮರ್ಪಣಾ ಕಾರ್ಯಕ್ರಮದ ಪ್ರಯುಕ್ತ ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿ ಹಾಗೂ ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಅವರ ವತಿಯಿಂದ ಕನ್ಯಾನ ಭಾರತ ಸೇವಾಶ್ರಮದ ಆಶ್ರಮವಾಸಿಗಳಿಗೆ ಅ ದಿನದ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕನ್ಯಾನ ಭಾರತ ಸೇವಾಶ್ರಮಕ್ಕೆ ಬೇಟಿ ನೀಡಿ ಆಶ್ರಮ ವಾಸಿಗಳ ಜೊತೆಯಲ್ಲಿ ಆರೋಗ್ಯ ಕ್ಷೇಮ ವಿಚಾರಿಸಿದ ಬಳಿಕ ಸಹಭೋಜನ ಮಾಡಿದರು.

ಆ ಬಳಿಕ ವಿಟ್ಲ ಮೈತ್ರೇಯಿ ಗುರುಕುಲಕ್ಕೆ ಬೇಟಿ ನೀಡಿ ಅಲ್ಲಿನ ಪ್ರಮುಖರ ಜೊತೆ ಕೆಲವೊಂದು ಪ್ರಮುಖ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದರು.

ಇಲ್ಲಿ ಅಗತ್ಯವಾಗಿ ಬೇಕಾದ ಮೂಲಭೂತ ಸೌಕರ್ಯಗಳನ್ನು ಅತೀ ಶೀಘ್ರವಾಗಿ ಒದಗಿಸುವ ಬಗ್ಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಭಾರತ್ ಸೇವಾಶ್ರಮದ ಮುಖ್ಯಸ್ಥ ಈಶ್ವರ ಭಟ್, ಗುರುಕುಲದ ಪ್ರಮುಖರಾದ ಜಗನ್ನಾಥ, ಶ್ರೀಮತಿ ಭಟ್, ರಮೇಶ್, ಹರೀಶ್, ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಗಳಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಕಾರ್ಯ ದರ್ಶಿಗಳಾದ ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು , ಸೀತರಾಮ ಪೂಜಾರಿ, ಹರ್ಷಿಣಿಪುಷ್ಪಾನಂದ, ಉಪಾಧ್ಯಕ್ಷ ರಾದ ರೊನಾಲ್ಡ್ ಡಿ.ಸೋಜ, ಚಂದ್ರವಾತಿ, ಜಯರಾಮ ನಾಯ್ಕ, ಪ್ರಮುಖ ರಾದ ಭಾರತಿ ಚೌಟ, ಕಮಲಾಕ್ಷಿ ಕೆ.ಪೂಜಾರಿ, ಆನಂದ ಶಂಭೂರು, ಅರವಿಂದ ರೈ, ಜಿನರಾಜ್ ಕೋಟ್ಯಾನ್, ಪ್ರಶಾಂತ್ ಅಗರಿ, ರಘರಾಮ ಶೆಟ್ಟಿ ಕನ್ಯಾನ, ಶಿವಪ್ರಸಾದ್ ಶೆಟ್ಟಿ, ರಘರಾಮ್ ಶೆಟ್ಟಿ ಪಟ್ಲ, ವಿನೋದ್ ಪಟ್ಲ, ಉದಯರಮಣ ಭಟ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here