ಬಂಟ್ವಾಳ: ಸಂಸ್ಕಾರ ಭಾರತಿ ಬಂಟ್ವಾಳ ಇದರ ವತಿಯಿಂದ ಸಮಾಜದ ಅನನ್ಯ ಕ್ಷೇತ್ರದ ಸಾಧಕರನ್ನು ಗುರುತಿಸುವ ಗುರುವಂದನಾ ಕಾರ್ಯಕ್ರಮ ಅ.24 ರಂದು ಮಧ್ಯಾಹ್ನ 2 ಗಂಟೆಗೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.
ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದೇಜಪ್ಪ ಬಾಚಕೆರೆ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ದಿಕ್ಸೂಚಿ ಭಾಷಣಗೈಯಲಿದ್ದಾರೆ.ಸಂಸ್ಕಾರ ಭಾರತೀಯ ದಕ್ಷಿಣ ಪ್ರಾಂತ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ,ಸಂಸ್ಕಾರ ಭಾರತಿ ಬಂಟ್ವಾಳ ಸಂಚಾಲಕ ಸರಪಾಡಿ ಆಶೋಕ ಶೆಟ್ಟಿ ಅತಿಥಿಯಾಗಿ ಭಾಗವಹಿಸುವರು.
ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ಶೀನಶೆಟ್ಟಿ ಬಾರಿಂಜೆ,ನಾಟಿ ವೈದ್ಯರಾದ ಶೀನ ಪೂಜಾರಿ ಬಡಗಬೆಳ್ಳೂರು,ರಂಗಭೂಮಿಯ ಹಿರಿಯ ಕಲಾವಿದ ಪ್ರೇಮಾನಂದ ಭಟ್ ವಿಟ್ಲ,ಗ್ರಾಮೀಣಪ್ರಸೂತಿ ತಜ್ಞೆ ಗೌರಿ ಸಾಲೆತ್ತೂರು ಅವರನ್ನು ಅಭಿನಂದಿಸಲಾಗುತ್ತಿದ್ದು,ಬಳಿಕ ಡಾ.ವಾರಿಜ ನಿರ್ಬೈಲ್ ತಂಡದಿಂದ ಗಮಕವಾಚನ ಹಾಗೂ ಚಿನ್ಮಯಿ ಶೆಟ್ಟಿ,ಸಂಜನ ಮೊಡಂಕಾಪು ತಂಡದಿಂದ ನೃತ್ಯ ಕಾರ್ಯಕ್ರಮ ಜರಗಲಿದೆ ಎಂದು ಸಂಚಾಲಕ ಸರಪಾಡಿ ಅಶೋಕ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ