ಭಾರತೀಯ ಜನತಾ ಪಕ್ಷ ಬಾಳ್ತಿಲ ಮತ್ತು ನರಿಕೊಂಬು ಮಹಾಶಕ್ತಿ ಕೇಂದ್ರಗಳ ಪಂಚಾಯತ್ ಸದಸ್ಯರ ಪ್ರಶಿಕ್ಷಣ ವರ್ಗದ ಉದ್ಘಾಟನಾ ಕಾರ್ಯಕ್ರಮ ಕಲ್ಲಡ್ಕದ ಪಂಚವಟಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಮಾಜಿ ಶಾಸಕರಾದ ಶ್ರೀ ರುಕ್ಮಯ ಪೂಜಾರಿ ಅವರು ಬಿಜೆಪಿ ಜನಸಂಘದಿಂದ ಕಾಲದಿಂದ ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದರು. ಪ್ರತೀ ಪಂಚಾಯತ್ ಸದಸ್ಯರು ಪಕ್ಷದ ಜವಾಬ್ದಾರಿ ಶಿಸ್ತನ್ನು ತಿಳಿದು ವೈಯಕ್ತಿಕ ಬೆಳವಣಿಗೆಯ ಜೊತೆಗೆ ಪಕ್ಷವನ್ನು ಬೆಳೆಸಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕ್ಷೇತ್ರದ ಅಧ್ಯಕ್ಷರಾದ ದೇವಪ್ಪ ಪೂಜಾರಿ ಅವರು ಪಕ್ಷದ ಸಿದ್ಧಾಂತದ ಅಡಿಯಲ್ಲಿ ಆಯ್ಕೆಯಾದ ಪಂಚಾಯತ್ ಸದಸ್ಯರು ತಮ್ಮ ಪಂಚಾಯತ್ ಜವಾಬ್ದಾರಿಯ ಜೊತೆಗೆ ಪಕ್ಷದ ಸಿದ್ಧಾಂತಕ್ಕೂ ಒತ್ತು ನೀಡಿ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಪ್ರಶಿಕ್ಷಣ ವರ್ಗದ ಜಿಲ್ಲಾ ಸಂಚಾಲಕರಾದ ನಾರಾಯಣ ಭಂಡಾರಿ, ಸಹ ಸಂಚಾಲಕ ವೇದಾನಂದ ಕಾರಂತ, ನರಿಕೊಂಬು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಯಶೋಧರ ಕರ್ಬೆಟ್ಟು , ಉಪಸ್ಥಿತರಿದ್ದರು. ಕಾರ್ಯಕ್ರಮದ ಉದ್ಘಾಟನೆ ನಂತರ ಪಂಚಾಯತ್ ಸದಸ್ಯರಿಗೆ ಅವಧಿಯನ್ನು ನಡೆಸಲಾಯಿತು .ಪ್ರಥಮ ಅವಧಿ ಪಂಚ ಸದಸ್ಯರ ಅಧಿಕಾರ ಮತ್ತು ಕರ್ತವ್ಯ ಈ ಅವಧಿಯನ್ನು ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ರವರು ನೀಡಿದರು . ಎರಡನೇ ಅವಧಿ ನಮ್ಮ ವಿಚಾರ ಮತ್ತು ಪರಿವಾರ ಈ ವಿಚಾರದ ಬಗ್ಗೆ ಡಾಕ್ಟರ್ ಪ್ರಭಾಕರ ಭಟ್ ( ಹಿರಿಯ ಸ್ವಯಂಸೇವಕರು ಅಧ್ಯಕ್ಷರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ) ಹಾಗೂ ಮೂರನೇ ಅವಧಿ ಬಿಜೆಪಿ ನಡೆದು ಬಂದ ಹಾದಿ ಈ ವಿಷಯದ ಬಗ್ಗೆ ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್ ರವರು ನಡೆಸಿಕೊಟ್ಟರು . ಸಮಾರೋಪ ಕಾರ್ಯಕ್ರಮವು ಬೂಡದ ಅಧ್ಯಕ್ಷರಾದ ದೇವದಾಸ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಜರಗಿತು .ಸಮಾರೋಪ ಕಾರ್ಯಕ್ರಮದಲ್ಲಿ ಜಿಲ್ಲಾ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಮೋಹನ್ ಪಿ ಎಸ್ ಯಶೋಧರ ಕರ್ಬೆಟ್ಟು ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಕಮಲಾಕ್ಷಿ ಕೆ ಪೂಜಾರಿ ರಾಜ್ಯ ಎಸ್ಸಿ ಮೋರ್ಚಾ ಕಾರ್ಯಕಾರಣಿ ಸದಸ್ಯರಾದ ದಿನೇಶ್ ಅಮ್ಟೂರು ಉಪಸ್ಥಿತರಿದ್ದರು .
ಬಾಳ್ತಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಮೋಹನ್ ಪಿ ಎಸ್ ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ಬರಿಮಾರು ವಂದಿಸಿ, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯಮತ್ತು ಪುರುಷೋತ್ತಮ ಸಾಲ್ಯಾನ್ ನರಿಕೊಂಬು ನಿರೂಪಿಸಿದರು.