ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಅನಂತಾಡಿ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿದರು.
ಗ್ರಾಮದ ಪುಂಜಾವಿನಿಂದ ಕೊಂಬಿಲವರೆಗಿನ ಸಂಪರ್ಕ ರಸ್ತೆಗೆ ೧.೫೦ ಕೋ.ರೂ.ಗಳ ಕಾಂಕ್ರೀಟ್ ಕಾಮಗಾರಿಗೆ ಶಿಲಾನ್ಯಾಸ, ಅನಂತಾಡಿ ಗ್ರಾ.ಪಂ.ರಾಜೀವ ಗಾಂಧಿ ಸೇವಾ ಕೇಂದ್ರ ಶಿಲಾನ್ಯಾಸ ಹಾಗೂ ಕರಿಂಕ ದೇವಸ್ಥಾನದ ಬಳಿಯ ೫೦ ಲಕ್ಷ ರೂ. ಗಳ ಸೇತುವೆ ಉದ್ಘಾಟನೆ ನೆರವೇರಿಸಲಾಯಿತು.
ಸೇವಾ ಕೇಂದ್ರದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಈಗಾಗಲೇ ಕಟ್ಟಡಕ್ಕೆ ೨೯ ಲಕ್ಷ ರೂ. ಮಂಜೂರಾಗಿದ್ದು, ಇನ್ನೂ ೧೦ ಲಕ್ಷ ರೂ.ಗಳ ಬೇಡಿಕೆ ಇದೆ. ಸಂಬಂಧಿಸಿದ ಇಲಾಖೆಯ ಮೂಲಕ ಅದನ್ನು ತರಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ಜಿ.ಪಂ.ಮಾಜಿ ಅಧ್ಯಕ್ಷೆ ಶೈಲಜಾ ಭಟ್ ಕೆ.ಟಿ, ಮಾಜಿ ಸದಸ್ಯೆ ಮಂಜುಳಾ ಮಾವೆ, ತಾ.ಪಂ.ಮಾಜಿ ಸದಸ್ಯರಾದ ಮಾಧವ ಮಾವೆ, ಗೀತಾ ಚಂದ್ರಶೇಖರ,
ನೇರಳಕಟ್ಟೆ ಸಿಎ ಬ್ಯಾಂಕ್ ಅಧ್ಯಕ್ಷ ಪುಷ್ಪರಾಜ್ ಚೌಟ, ಪ್ರಮುಖರಾದ ನಂದರಾಮ್ ರೈ, ಗಣೇಶ್ ರೈ ಮಾಣಿ, ಯಶವಂತ ನಾಯ್ಕ್ ನಗ್ರಿ, ತನಿಯಪ್ಪ ಗೌಡ, ಉಗ್ಗಪ್ಪ ಶೆಟ್ಟಿ, , ಶಕೀಲ, ಹರೀಶ್ ಮಾಣಿ, ನಾರಾಯಣ ಶೆಟ್ಟಿ ಮಾಣಿ, ರತ್ನಾಕರ್ ರೈ,
ಗ್ರಾ.ಪಂ.ಅಧ್ಯಕ್ಷ ಗಣೇಶ್ ಪೂಜಾರಿ ಬಂಟ್ರಿಂಜ, ಉಪಾಧ್ಯಕ್ಷ ಕುಸುಮಾಧರ ಗೌಡ, ಸದಸ್ಯರಾದ ಸಂಧ್ಯಾ, ಮಮಿತಾ, ಸುಜಾತ ಸುರೇಶ್, ಅರವಿಂದ ಮೂರ್ಜೆಬೆಟ್ಟು, ಶಿವರಾಮ್ ಪ್ರಸಾದ್ ಶೆಟ್ಟಿ ಕರಿಂಕ, ಹೇಮಂತ್ ತಾಳಿಪಡ್ಪು, ಪ್ರವೀಣ್ ಗೌಡ, ನಾಗೇಶ್ ಭಂಡಾರಿ ಕರಿಂಕ, ರಮೇಶ್ ಗೌಡ, ಸಂತೋಷ, ದಿನೇಶ್ ಪಿಲಿಚಂಡಿಗುಡ್ಡೆ, ಲೋಕೋಪಯೋಗಿ ಎಇಇ ಷಣ್ಮುಗಂ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಪಂಕಜ ಶೆಟ್ಟಿ, ಕಾರ್ಯದರ್ಶಿ ಜಯರಾಮ್, ಎಂಜಿನಿಯರ್ ಪ್ರಸನ್ನ, ಅಶ್ವಿನ್ ಉಪಸ್ಥಿತರಿದ್ದರು.
ಗ್ರಾ.ಪಂ.ಮಾಜಿ ಅಧ್ಯಕ್ಷ ಸನತ್ ಕುಮಾರ್ ರೈ ಸ್ವಾಗತಿಸಿದರು.