ವಿಟ್ಲ : ಬೆಂಗಳೂರಿನ ಶಿವಾನಂದ ಸರ್ಕಲ್ ನಲ್ಲಿರುವ ಬೆಂಗಳೂರು ಚಿತ್ರಕಲಾ ಪರಿಷತ್ ಆಯೋಜನೆ ಮಾಡಿರುವ ವುಡ್ ಕಟ್ ಪ್ರಿಂಟ್ ಪ್ರದರ್ಶಣದಲ್ಲಿ ಬಂಟ್ವಾಳ ತಾಲೂಕಿನ ಬೊಳಂತಿಮೊಗರು ನಿವಾಸಿ ದಂಪತಿಗಳ ಕೈಚಳಕದಲ್ಲಿ ಮೂಡಿಬಂದ ಅನಿಶ್ಚಿತತೆ ಪರಿಕಲ್ಪನೆಯ ಕಲಾಕೃತಿ ನೋಡುಗರ ಮನಸೂರೆಗೊಳಿಸಿದೆ.
ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮದ ಬೊಳಂತಿಮೊಗರು ಕಾಯರ್ ಮಾರ್ ನಿವಾಸಿ ತಾರನಾಥ ಹಾಗೂ ಪುಷ್ಪವತಿ ದಂಪತಿಗಳ ಪುತ್ರ ಶಿವಪ್ರಸಾದ್ ಕೆ.ಟಿ.ರವರು ಉನ್ನತ ಅಧ್ಯಯನಕ್ಕಾಗಿ ಬೆಂಗಳೂರಿಗೆ ತೆರಳಿ ತಮ್ಮ ಕಲಾ ಅಭ್ಯಾಸವನ್ನು(ಮಾಸ್ಟರ್ಸ್ ಡಿಗ್ರಿ )ಪೂರೈಸಿ ಕೊಂಡಿದ್ದಾರೆ .ದೃಶ್ಯಕಲಾ ಮತ್ತು ಪ್ರದರ್ಶನ ಕಲೆಗಳಂತಹ ಪ್ರಕಾರದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡು ತಮ್ಮ ಬದುಕನ್ನು ಕಟ್ಟಿಕೊಂಡವರು ಇಂದು ಜಗತ್ತಿನಲ್ಲಿಯೇ ಒಂದು ಅದ್ಭುತ ಇತಿಹಾಸವನ್ನು ರಚಿಸಿ ಬದಲಾವಣೆಯನ್ನುಂಟು ಮಾಡಿದ್ದಾರೆ. ಶಿವಪ್ರಸಾದ್ ಕೆ.ಟಿ.ರವರ ಪತ್ನಿ ಅರ್ಪಿತ ಆರ್. ಜಿ ರವರು ಲಲಿತ ಕಲಾ ಅಕಾಡೆಮಿಯಿಂದ ಫಿಲೋಶಿಫ್ ಪಡೆದುಕೊಂಡು ಪತಿಗೆ ಸಾಥ್‌ನೀಡುತ್ತಿದ್ದಾರೆ. ಅವರ ಯೋಚನೆಯಂತೆ ಈ ಅನಿಶ್ಚಿತತೆ ಪರಿಕಲ್ಪನೆ ಮೂಡಿಬಂದಿದೆ.
ಕಳೆದ ಎರಡು ವರ್ಷಗಳಿಂದ ಕೊರೋನಾ ಹಾವಳಿಗೆ ತತ್ತರಿಸಿಹೋದ ಕಲಾಪ್ರಪಂಚ ಮತ್ತು ಕಲಾಸಕ್ತರಿಗೆ ಒಂದು ಪ್ರಕಾರದ ಮುದ್ರಣಕಲೆ (ವುಡ್ ಕಟ್ ಪ್ರಿಂಟ್ ) ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಇದರ ಉದ್ಘಾಟನಾ ಸಮಾರಂಭ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಇದೀಗಾಲೇ ನಡೆದಿದೆ. ಈ ಚಿತ್ರಕಲಾ ಪ್ರದರ್ಶಣವು ಅ.3ರರ ವರೆಗೆ ಮುಂದುವರೆಯಲಿದೆ. ಚಿತ್ರಕಲಾ ಪ್ರದರ್ಶಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಕಾರ್ಕಳ ಸಹಿತ ಕರಾವಳಿಯ ಹಲವಾರು ಶಾಸಕರು ಭೇಟಿನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬೃಹತ್ತಾಕಾರದ ಕಲಾ ಪ್ರದರ್ಶನದಲ್ಲಿ ಕರ್ನಾಟಕದ 75 ಕಲಾವಿದರು ಭಾಗವಹಿಸಿದ್ದಾರೆ .ಇದರಲ್ಲಿ 25 ವರ್ಷದಿಂದ 60 ವರ್ಷದ ವಯಸ್ಸಿನ ಕಲಾವಿದರು ಭಾಗವಹಿಸಿದ್ದಾರೆ. ಜೊತೆಗೆ ಇತರ ಕಲಾಪ್ರಕಾರಗಳಲ್ಲಿ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡವರು ಪ್ರಥಮಬಾರಿಗೆ ಮುದ್ರಣ ಕಲೆಯಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ.
ಈ ಪ್ರದರ್ಶನದಲ್ಲಿ 4 ಅಡಿ ಅಗಲ ಹಾಗೂ 8 ಅಡಿ ಎತ್ತರದ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಿರುವುದು ಭಾರತದಲ್ಲಿ ಪ್ರಥಮವಾಗಿದ್ದು . ಪ್ರದರ್ಶನವು ಇಡೀ ದೇಶದ ಕಲಾ ವಲಯಕ್ಕೆ ರೋಮಾಂಚನವನ್ನು ಉಂಟು ಮಾಡಿದೆ.
ನಮಗೆ ತುಂಬಾ ಖುಷಿ ಕೊಟ್ಟಿದೆ:
ಉನ್ನತ ವ್ಯಾಸಾಂಗಕ್ಕೆ ತೆರಳಿದ ನಾನು ಆ ಬಳಿಕ ಕಲಾ ಅಭ್ಯಾಸವನ್ನು(ಮಾಸ್ಟರ್ಸ್ ಡಿಗ್ರಿ )ಪೂರೈಸಿ ಕೊಂಡು ದೃಶ್ಯಕಲಾ ಮತ್ತು ಪ್ರದರ್ಶನ ಕಲೆಗಳಂತಹ ಪ್ರಕಾರದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ. ಈ ಮಧ್ಯೆ ಸಮಯ ನ್ಯೂಸ್ ಚಾನಲ್ ಹಾಗೂ ನಿನಾಸಂ ತಿರುಗಾಟ ನಾಟಕ ತಂಡ ಹಾಗೂ ಕೆಲ ಚಲನಚಿತ್ರಗಳಲ್ಲಿ ಚಿತ್ರಕಲಾ ನಿರ್ದೇಶಕನಾಗಿ ಕೆಲಸಮಾಡಿದ್ದೇನೆ. ನನ್ನ ಚಿತ್ರಕಲೆಗಳಿಗೆ ಸ್ಪೂರ್ತಿಯಾಗಿ ನನ್ನ ಪತ್ನಿ ಅರ್ಪಿತಾ ಆರ್.ಜಿ. ಸಾಥ್ ನೀಡುತ್ತಿದ್ದಾರೆ. ಎಪ್ಪತೈದು ಆರ್ಟಿಸ್ಟ್ ಗಳನ್ನು ಒಂದೇ ಜಾಗದಲ್ಲಿ ಒಟ್ಟುಮಾಡಿ ಒಂದೇ ಫ್ರೇಮ್ ನಲ್ಲಿ ವಿವಿದ ಕಲಾಕೃತಿ ಪ್ರದರ್ಶಣ ಆಗುತ್ತಿರುವುದು ಇದೇ ಮೊದಲು. ಒಟ್ಟು ವುಡ್ ಕಟ್ ಪ್ರಿಂಟ್ ಪ್ರದರ್ಶಣದ ಜನರಲ್ಲಿ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ. ನಮಗೆ ತುಂಬಾ ಖುಷಿಕೊಟ್ಟಿದೆ.
ಶಿವಪ್ರಸಾದ್ ಕೆ.ಟಿ.