ಬಂಟ್ವಾಳ: ಕೆಂಪು ಕಲ್ಲಿನ ಕೋರೆಗೆ ಬಿದ್ದು 6 ನೇ ತರಗತಿ ವಿದ್ಯಾರ್ಥಿಯೊರ್ವ ಮೃತಪಟ್ಟ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಬಾರೆಕಾಡು ಎಂಬಲ್ಲಿ ನಡೆದಿದೆ.
ಸಾಧಿಕ್ ಎಂಬವರ ಪುತ್ರ ಸವಾದ್ (12) ಮೃತಪಟ್ಟ ಬಾಲಕ.
ಸ್ಥಳೀಯ ಮಕ್ಕಳು ಸೇರಿಕೊಂಡು ಆಟ ಆಡಲು ತೆರಳಿದ ವೇಳೆ ಓರ್ವ ಬಾಲಕ ಕಾಲು ಜಾರಿ ಕೋರೆ ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಸ್ಥಳೀಯ ರು ತಿಳಿಸಿದ್ದಾರೆ.
ಆಟ ಆಡುತ್ತಿದ್ದ ಬಾಲಕ ಕಾಲು ಜಾರಿ ನೀರಿಗೆ ಬಿದ್ದ ಕೂಡಲೇ ಉಳಿದ ಮಕ್ಕಳು ಮನೆಯವರಿಗೆ ತಿಳಿಸಿದ್ದು ಕೂಡಲೇ ಸ್ಥಳಕ್ಕೆ ಬಂದು ನೀರಿನಲ್ಲಿ ಬಿದ್ದಿದ್ದ ಬಾಲಕನನ್ನು ಖಾಸಗಿ ಆಸ್ಪತ್ರೆ ಗೆ ದಾಖಲು ಮಾಡಿದ್ದಾರೆ.
ಆದರೆ ಅದಾಗಲೇ ಬಾಲಕ ಮೃತಪಟ್ಟ ಬಗ್ಗೆ ವೈದ್ಯಾಧಿಕಾರಿ ಗಳು ಮಾಹಿತಿ ನೀಡಿದ್ದು , ಬಾಲಕ ನ ಮರಣೋತ್ತರ ಪರೀಕ್ಷೆಯನ್ನು ಬಂಟ್ವಾಳ ಸರಕಾರಿ ಆಸ್ಪತ್ರೆ ಯಲ್ಲಿ ನಡೆಸಲಾಗಿದೆ.
ಸ್ಥಳಕ್ಕೆ ಬಂಟ್ವಾಳ ನಗರ ಪೋಲೀಸ್ ಠಾಣಾ ಎಸ್ ಐ.ಅವಿನಾಶ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾರೆಕಾಡು ಎಂಬಲ್ಲಿ ಅಕ್ರಮವಾಗಿ ಕೆಂಪು ಕಲ್ಲಿನ ಕೋರೆ ನಡೆಯುತ್ತಿದ್ದು ಇದೀಗ ಗುಂಡಿ ಮುಚ್ಚದೆ ಹಾಗೆಯೇ ಬಿಟ್ಟಿದ್ದಾರೆ.
ಸುಮಾರು 20 ಅಡಿಗಿಂತಲೂ ಹೆಚ್ಚು ಆಳವಾಗಿರುವ ಕೆಂಪು ಕಲ್ಲಿನ ಕೋರೆಯಲ್ಲಿ ಮಳೆ ನೀರು ತುಂಬಿಕೊಂಡಿದೆ.
ಕೋರೆ ನಡೆಸುವವರು ಕೆಂಪು ಕಲ್ಲು ತೆಗೆದ ಬಳಿಕ ಗುಂಡಿ ಮುಚ್ಚದೆ ಇಟ್ಟಿರುವುದೆ ದುರಂತಕ್ಕೆ ಕಾರಣವಾಗಿದೆ ಎಂದು ಸ್ಥಳೀಯ ರು ಆರೋಪ ವ್ಯಕ್ತಪಡಿಸಿದ್ದಾರೆ.
ತಾಲೂಕಿನಲ್ಲಿ ಇದೇ ರೀತಿ ಅನೇಕ ಕಡೆಗಳಲ್ಲಿ ಕೆಂಪು ಕಲ್ಲಿನ ಕೋರೆಗಳು ಗುಂಡಿ ಮುಚ್ಚದೆ ಅಪಾಯಕರ ರೀತಿಯಲ್ಲಿ ಇದೆ ಎಂಬ ದೂರುಗಳು ಕೇಳಿ ಬರುತ್ತಿದೆ.