Wednesday, October 18, 2023

ಸರಕಾರದ ಸೌಲಭ್ಯ ಸಹಕಾರ ಕ್ಷೇತ್ರದ ಮೂಲಕ ತಳಮಟ್ಟದಲ್ಲಿ ಎಲ್ಲರಿಗೂ ತಲುಪಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಹಿರಿದಾಗಿದೆ: ಡಾ| ಪ್ರಭಾಕರ ಭಟ್ 

Must read

ಸರಕಾರವು ಉನ್ನತ ಮಟ್ಟದಲ್ಲಿ ಜನರನ್ನು ಸಂಪರ್ಕ ಮಾಡುವ ವ್ಯವಸ್ಥೆಯಾದರೆ,ಸಹಕಾರವು ತಳಮಟ್ಟದಲ್ಲಿ ಎಲ್ಲರು ಸೇರಿಸಿಕೊಂಡು ಸಹಕರಿಸುವ ವ್ಯವಸ್ಥೆಯಾಗಿದೆ.
ಈ ನಿಟ್ಟಿನಲ್ಲಿ ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘವು ಸಹಕಾರ ತತ್ವದಡಿಯಲ್ಲಿ ಸಮಾಜ ಮುಖಿಯಾದ ಹಲವಾರು ಯೋಜನೆ ಗಳನ್ನು ರೂಪಿಸಿಕೊಂಡು ಜನಸಾಮಾನ್ಯರ ಸೇವೆಗಳನ್ನು ಮಾಡುತ್ತಾ ಬಂದಿರುತ್ತದೆ. ಇದರಿಂದ ಸಹಕಾರ ಸಂಘಗಳು ಕೇವಲ ಸಾಲ ನೀಡಲು ಮಾತ್ರ ಸೀಮಿತವಾಗಿಲ್ಲ ಎಂದು ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ ತೋರಿಸಿಕೊಟ್ಟು ಇತರ ಸಂಘ ಸಂಸ್ಥೆ ಗಳಿಗೆ ಮಾದರಿಯಾಗಿದೆ ಎಂದು ಕಲ್ಲಡ್ಕ ಡಾ| ಪ್ರಭಾಕರ ಭಟ್  ಹೇಳಿದರು.

ಅವರು ಇಂದು ಪ್ರಧಾನಿ ಮಂತ್ರಿ ನರೇಂದ್ರ ಮೋದಿಜಿ ಯವರ ಕೇಂದ್ರ ಸರಕಾರದ ಬಹು ಸೇವಾ ಕೇಂದ್ರ ಯೋಜನೆ ಅಡಿಯಲ್ಲಿ ನಬಾರ್ಡ್ ಸಹಕಾರದಲ್ಲಿ.ರೂ 1 ಕೋಟಿ ವೆಚ್ಚದಲ್ಲಿ ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ನಿರ್ಮಿಸಲಿರುವ ಬಹು ಸೇವಾ ಕೇಂದ್ರ ಹಾಗೂ ರೈತರ ಸೇವಾ ಕೇಂದ್ರ ಕಟ್ಟಡ ನಿರ್ಮಾಣದ ಅಡಿಗಲ್ಲು ಹಾಕಿ ಮಾತಾನಾಡಿದರು..
ಭೂಮಿ ಪೂಜೆಯನ್ನು ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಪ್ರಧಾನ ಆರ್ಚಕ ಪ್ರಭಾಕರ್ ಐಗಳ್ ನೆರೆವೇರಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಎ. ಪಿ. ಎಂ. ಸಿ. ಸದಸ್ಯ ರತ್ನಕುಮಾರ್ ಚೌಟ, ಸಹಕಾರ ಸಂಘದ ಮಾಜಿ ಅಧ್ಯಕ್ಷ ಗೋಪಿನಾಥ್ ರೈ,ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಸಂಘದ ಉಪಾಧ್ಯಕ್ಷ ಸತೀಶ್ ಪೂಜಾರಿ, ಸಹಕಾರ ಸಂಘಗಳ ಇಲಾಖೆಯ ಸಹಕಾರಿ ಅಭಿವೃದ್ಧಿ ಅಧಿಕಾರಿ ಗೋಪಾಲ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆರ್ಥಿಕ ಪ್ರತಿನಿಧಿ ಹಾಗೂ ಸಂಘದ ನಿರ್ದೇಶಕ ಕೇಶವ ಕಿಣಿ, ಅರಳ ಗ್ರಾ. ಪಂಚಾಯತ್ ಅಧ್ಯಕ್ಷ ಲಕ್ಷ್ಮಿಧರ ಶೆಟ್ಟಿ, ರಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ, ಕುಕ್ಕಿಪಾಡಿ ಗ್ರಾ. ಪಂಚಾಯತ್ ಉಪಾಧ್ಯಕ್ಷ ಯೋಗೀಶ್ ಆಚಾರ್ಯ, ಸಂಘದ ನಿರ್ದೇಶಕರಾದ ಸಂದೇಶ ಶೆಟ್ಟಿ ಪೊಡುಂಬ,ರಾಜೇಶ್ ಶೆಟ್ಟಿ ಕೊನೆರಬೆಟ್ಟು,ಹರೀಶ್ ಆಚಾರ್ಯ ರಾಯಿ,ದಿನೇಶ್ ಪೂಜಾರಿ ಹುಲಿಮೇರು,ಉಮೇಶ್ ಗೌಡ, ದೇವರಾಜ್ ಸಾಲಿಯಾನ್. ವೀರಪ್ಪ ಪರವ, ಜಾರಪ್ಪ ನಾಯ್ಕ, ಮಾಧವ ಶೆಟ್ಟಿಗಾರ್, ಮಂದಾರತಿ ಶೆಟ್ಟಿ,ಮಾಜಿ ನಿರ್ದೇಶಕ ಜಗದೀಶ್ ಆಳ್ವ ಅಗೊಂಡೆ,
ರಾಷ್ಟ್ರ ಸೇವಾ ಸಮಿತಿಯ ಕಾರ್ಯದರ್ಶಿ ಮೀನಾಕ್ಷೀ, ರಾಯಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಸುಂದರ ಭಂಡಾರಿ,ಪ್ರಮುಖರಾದ ರಮಾನಾಥ ರಾಯಿ,ನಾರಾಯಣ ನಾಯಕ್ ಕರ್ಪೆ, , ಸಂಘದ ಕಾನೂನು ಸಲಹೆಗಾರ ಸುರೇಶ ಶೆಟ್ಟಿ, ಪ್ರಮುಖರಾದ ಡೊಂಬಯ ಅರಳ, ರಾಮಣ್ಣ ರೈ ಮಾವಂತುರು,ಶ್ರೀಧರ.ಎಸ್. ಪಿ., ಪ್ರಭಾಕರ ಹುಲಿಮೇರು ಆರಂಬೊಡಿ ,ಗಣೇಶ್ ಶೆಟ್ಟಿ, , ಗ್ರಾಮ ಪಂಚಾಯತ್ ಸದಸ್ಯರಾದ ಲಿಂಗಪ್ಪ ಪೂಜಾರಿ, ವಿದ್ಯಾ ಪ್ರಭು, ಸುರೇಶ್ ಕುಲಾಲ್, ಚಂದ್ರ ಕೊರ್ಯಾರು, ಶೇಖರ್ ಶೆಟ್ಟಿ ಬದ್ಯಾರು, ದಿನೇಶ್ ಶೆಟ್ಟಿ ರಾಯಿ, ಸಂತೋಷ ರಾಯಿ,,ಸಂತೋಷ ಕುಮಾರ್ ರಾಯಿ ಬೆಟ್ಟು, ಪೂರ್ಣಿಮಾ , ಪ್ರಮುಖರಾದ ,ದಿನೇಶ್ ಶೆಟ್ಟಿ ದಂಬೆದಾರ್,, ಪುರುಷೋತ್ತಮ ಶೆಟ್ಟಿ ವಾಮದಪದವು,ವಸಂತ ಕುಮಾರ್ ಅಣ್ಣಳಿಕೆ, ಸಂತೋಷ ಚೌಟ, ಹೇಮಚಂದ್ರ ಗೌಡ, ರಾಜೇಂದ್ರ ಪೂಜಾರಿ ಕರ್ಪೆ, ಕಟ್ಟಡ ಗುತ್ತಿಗೆದಾರ ರಾಜೇಶ್ ಸಪಲ್ಯ ಗೋವಿಂದಬೆಟ್ಟು, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಸ್ವಾಗತಿಸಿ, ಪ್ರಸ್ತಾವನೆ ಗೈದರು. .ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ಧನ್ಯವಾದವಿತ್ತರು.

More articles

Latest article