ಬಂಟ್ವಾಳ: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಇದರ ವತಿಯಿಂದ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರ ನೇತೃತ್ವದಲ್ಲಿ ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಮಲಕೋಡಿ ಪುಂಚಮೆ, ಬಡಕಬೈಲ್, ಪೊಳಲಿ ಈ ಎಲ್ಲಾ ಬೂತ್ ಅಧ್ಯಕ್ಷರ ಮನೆಯಲ್ಲಿ “ನಮ್ಮ ನಡೆ ಬೂತ್ ಕಡೆ ” ಕಾರ್ಯಕ್ರಮನ್ನು ಬೂತ್ ಅಧ್ಯಕ್ಷರ ಮನೆಗೆ ಭೇಟಿ ನೀಡಿ ಕಲ್ಪವೃಕ್ಷವಾದ ತೆಂಗಿನ ಸಸಿಯನ್ನು ನೆಡುವುದರ ಮುಖಂತರ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವರು ಬಿಜೆಪಿಯ ಅಪಪ್ರಚಾರಕ್ಕೆ ಬೂತ್ ಮಟ್ಟದ ಕಾರ್ಯಕರ್ತರಿಂದಲೆ ಪ್ರತ್ಯುತ್ತರ ನೀಡಬೇಕೆಂದು ಈ ಸಂದರ್ಭದಲ್ಲಿ ಕರೆನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಾಜಿ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ,ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಇಬ್ರಾಹಿಂ ನವಾಝ್ ಬಡಕಬೈಲ್,ದ. ಕ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಉಮೇಶ್ ಆಚಾರ್ಯ,ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಪಲ್ಲಿಪಾಡಿ, ಉಪಾಧ್ಯಕ್ಷರಾದ ಶ್ರೀಮತಿ ವೀಣಾ ಆಚಾರ್ಯ, ಬೂತ್ ಅಧ್ಯಕ್ಷರಾದ ಬಷೀರ್ ಬಡಕಬೈಲ್,ಪ್ರಶಾಂತ್ ಪೂಜಾರಿ, ಲೋಕೇಶ್ ಪೂಜಾರಿ, ಪ್ರೇಮಾನಾಥ್ ಚೇರ,ಪಂಚಾಯತ್ ಸದಸ್ಯರಾದ ಶ್ರೀಮತಿ ಗೀತಾ, ಶ್ರೀಮತಿ ನಾಗವೇಣಿ,ಲಕ್ಷ್ಮೀಶ ಶೆಟ್ಟಿ, ಲೆತಿಫ್ ಕಲ್ಕುಟ, ಶ್ರೀಮತಿ ರಾಧಾ ಲೋಕೇಶ್,ರಾಜು ಕೋಟ್ಯಾನ್,ಪ್ರಮುಖರಾದ ವಲಯ ಕಾಂಗ್ರೆಸ್ ಉಪಾಧ್ಯಕ್ಷರಾದ ಹರಿಪ್ರಸಾದ್, ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಬಷೀರ್ ಅಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.