ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ರೋಟರಿ ಕ್ಲಬ್ ಬಂಟ್ವಾಳ ಹಾಗೂ ಬಿ ಕಸಬಾ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ,,*ಪೋಷಣಾ ಮಾಸಾಚರಣೆ*2021ರ ಅಂಗವಾಗಿ ಪೌಷ್ಟಿಕ ಆಹಾರ ಪ್ರಾತ್ಯಕ್ಷತೆ, ಮತ್ತು ಮಾಹಿತಿ ಶಿಬಿರ , ಕಿಶೋರಿಯರಿಗೆ ಪೌಷ್ಟಿಕ ಆಹಾರ ಚಿತ್ರಕಲಾ ಸ್ಪರ್ಧೆ, ಸಾಧಾರಣ ಕಡಿಮೆ ತೂಕದ ಮಕ್ಕಳ ಆರೋಗ್ಯ ತಪಾಸಣೆ ಹಾಗೂ ವಿತರಣೆ, ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ರೋಟರಿ ಕ್ಲಬ್ ಸಭಾಂಗಣ ಬಿಸಿರೋಡ್ ಇಲ್ಲಿ ಏರ್ಪಡಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭೆಯ ಅಧ್ಯಕ್ಷ ಮಹಮ್ಮದ್ ಶರೀಫ್ ವಹಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ರವೀಂದ್ರ ಕಂಬಳಿ ಪೋಷನ್ ಮಾಸಾಚರಣೆಯ ಉದ್ದೇಶಗಳು ಹಾಗೂ ಸಾಧಿಸಬೇಕಾದ ಗುರಿಗಳು ಹಾಗೂ ಪೋಷಣೆ ಯೋಜನೆಯ ಸದುದ್ದೇಶವನ್ನು ಎಲ್ಲ ಜನರಿಗೆ ಸಾಮುದಾಯಿಕವಾಗಿ ತಲುಪಿಸಬೇಕಾದ ಇಲಾಖೆ ಗುರಿ ಹೊಂದಿರುವುದರಿಂದ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಸಹಕರಿಸಬೇಕೆಂದು ತಿಳಿಸಿದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ಮಹಮ್ಮದ್ ವಳವೂರು ನೆರವೇರಿಸಿ ಇಲಾಖೆಯ ಅಂಗನವಾಡಿ ಕೇಂದ್ರಗಳ ಮುಖಾಂತರ ನಡೆಯುವ ಕಾರ್ಯಕ್ರಮಕ್ಕೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು. ಡಾಕ್ಟರ್ ಶಶಿಕಲಾ ಸೋಮಯಾಜಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ *ಪೌಷ್ಟಿಕ ಆಹಾರದ ಅಗತ್ಯತೆ ಪ್ರಯೋಜನಗಳು ಗರ್ಭಿಣಿ ಭಾಣಂತಿಯರು ತೆಗೆದುಕೊಳ್ಳಬೇಕಾದ ಕ್ರಮಗಳು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು ಎದೆಹಾಲಿನ ಮಹತ್ವ ಹಾಗೂ ಶರೀರಕ್ಕೆ ಬೇಕಾದ ವಿವಿಧ ರೀತಿಯ ಪೌಷ್ಟಿಕ ಆಹಾರ ಕುರಿತಾಗಿ ಸಭೆಯನ್ನುದ್ದೇಶಿಸಿ ಸಭಿಕರಿಗೆ ಮಾಹಿತಿ ನೀಡಿದರು. ಹಾಗೂ ತಾಲೂಕು ಸಂರಕ್ಷಣಾಧಿಕಾರಿ ಭಾರತಿ ಬಿ ಮಹಿಳೆಯರಿಗೆ ಸಂರಕ್ಷಣೆ ದೃಷ್ಟಿಯಿಂದ ಇಲಾಖೆಯಿಂದ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ ವೇದಿಕೆಯಲ್ಲಿ ಪುರಸಭೆಯಉಪಾಧ್ಯಕ್ಷರಾದ ಜೆಸಿಂತಾ, ರೋಟರಿ ಆನ್ಸ್ ನ ಕಾರ್ಯದರ್ಶಿಯವರಾದ ವಹಿದಾ ರೋಟರಿ ಕ್ಲಬ್ ನ ಕಾರ್ಯದರ್ಶಿಯಾದ ರಿತೇಶ್ ಬಾಳಿಗ ಹಾಗೂ ಎಲ್ಐಸಿ ಬ್ರಾಂಚ್
ಮ್ಯಾನೇಜರ್ ಸುಂದರ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಪೌಷ್ಟಿಕಾಹಾರ ಗಳ ಪ್ರಾತ್ಯಕ್ಷತೆ ನಡೆಸಲಾಯಿತು, ಹಾಗೆಯೇ ಕಿಶೋರಿಯರಿಗೆ *ಪೌಷ್ಟಿಕ ಕರ್ನಾಟಕ *ಚಿತ್ರ ಸ್ಪರ್ಧೆಯನ್ನು ನಡೆಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹಾಗೆಯೇ ಸಾಧನ ಕಡಿಮೆ ತೂಕದ ಮಕ್ಕಳಿಗೆ ಪ್ರೊಟೀನ್ ಪೌಡರ್ ವಿತರಿಸಲಾಯಿತು. ಹಾಗೂ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ವಸಂತಿ ಇವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಹಾಗೂ ಬಂದಂತ ಎಲ್ಲಾ ಸಭಿಕರ ಆರೋಗ್ಯ ತಪಾಸಣೆಯನ್ನು ಸೋಮಯಾಜಿ ಆಸ್ಪತ್ರೆಯ ವೈದ್ಯರ ತಂಡ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಶಾಲಿನಿ ಸ್ವಾಗತಿಸಿ. ಭಾರತಿ ವಂದಿಸಿದರು.
ವಿಜಯವಾಣಿ ಶೆಟ್ಟಿ ನಿರೂಪಿಸಿದರು.