ವಿಟ್ಲ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೇರಳ ಗಡಿ ಭಾಗದಲ್ಲಿ ಸಾಲೆತ್ತೂರು ಗ್ರಾಮದ ವಾಲ್ತಾಜೆ ಪರಂಬೋಕು ಹೊಳೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ ಸ್ಥಳಕ್ಕೆ ವಿಟ್ಲ ಪೊಲೀಸರು ದಾಳಿ ನಡೆಸಿ ಹತ್ತು ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಲೆತ್ತೂರು ಗ್ರಾಮದ ವಾಲ್ತಾಜೆ ಎಂಬಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರವಾಗಿ ಮರಳು ನಡೆಸಲು ತಯಾರಿ ಮಾಡುತ್ತಿದ್ದ ಬಗ್ಗೆ ದಾಳಿ ನಡೆಸಲಾಗಿದೆ. ಈ ಸಂದರ್ಭ ಸೊತ್ತುಗಳಾದ ಹಿಟಾಚಿ-1, ಡ್ರಜಿಂಗ್ ಮಿಷನ್-1, ಡ್ರಮ್ -08, ಪ್ಲಾಸ್ಟಿಕ್ ಪುಟ್ ಬಾಲ್ -01, ಕಬಿಣ್ಣದ ಪೈಪ್ -01 ಗಳನ್ನು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಎಲ್ಲಾ ಸ್ವತ್ತುಗಳ ಅಂದಾಜು ಮೌಲ್ಯ 10 ಹತ್ತು ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣವನ್ನು ಕಾನೂನು ಕ್ರಮದ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಸ್ತಾಂತರಿಸಲಾಗಿದೆ.