Saturday, April 6, 2024

ಮದುವೆ ದಿನದ ವಧು ವರರಲ್ಲಿ ಹಾಗೂ ಅವರ ಪೋಷಕರಲ್ಲಿ ವಿನಮ್ರ ವಿನಂತಿ

ಮದುವೆ ದಿನದ ವಧು ವರರಲ್ಲಿ ಹಾಗೂ ಅವರ ಪೋಷಕರಲ್ಲಿ ವಿನಮ್ರ ವಿನಂತಿ , ನಿಮ್ಮ ಮನೆ ಮದುವೆ ಸಮಾರಂಭದಲ್ಲಿ ನೀವು ಊಟಕ್ಕೆ ಖರ್ಚು ಮಾಡಿರಬಹುದು, ಹಾಲ್ ಖರ್ಚು ಮಾಡಿರಬಹುದು , ಗ್ರಾಂಡ್ ಡೆಕೋರೇಷನ್ ಗೆ ಖರ್ಚು ಮಾಡಿ ಹಾಗೂ ಇನ್ಯಾವುದೇ ಬಟ್ಟೆ ಬರೆಗೇ ಖರ್ಚು ಮಾಡಿ ಆ ದಿನ ಖುಷಿ ಯಾಗಿ ಇರಬಹುದು ಇರೀ ಸಂತೋಷನೇ ಯಾಕೆಂದರೆ ನಿಮ್ಮ ಮನಸಿನಲ್ಲಿ ಅದು ಜೀವನದ ಪ್ರಾಮುಖ್ಯ ಅತ್ಯಮೂಲ್ಯ ಕ್ಷಣ , ಬದುಕಿನಲ್ಲಿ ಒಮ್ಮೆ ಮಾತ್ರ ಅದಕ್ಕಾಗಿ ಯಾವುದಕ್ಕೆಯು ಖರ್ಚುಮಾಡಲು ಹಿಂದೇಟು ಹಾಕುವುದಿಲ್ಲ, ನಿಜವು ಕೂಡ ಅದು ಸಂತೋಷವು ನಮಗೆ , ಆವಾಗ ನಡೆಯುವ ಆ ನಿಮ್ಮ ಜೀವನದ ಬಹು ಮೂಲ್ಯ ಸಂದರ್ಭದಲ್ಲಿ ನಡೆಯುವ ನೆನಪು ನಿಮಗೆ ಕೇವಲ ಅಂದು ಚಿತ್ರೀಕರಿಸಿದ ಪೋಟೋ ಹಾಗೂ ವೀಡಿಯೋ ಮಾತ್ರ ನಿಮ್ಮ ಜೀವನಕ್ಕೂ ಹಾಗೂ ನಿಮ್ಮ ಮುಂದಿನ ಪೀಳಿಗೆಗೆಗೂ ನೆನಪು ತರಿಸಿ ಜೀವಂತವಾಗಿರಿಸುವುದು , ಇದು ನೂರಕ್ಕೆ ನೂರರಷ್ಟು ಸತ್ಯ. ಮತ್ತೆ ಯಾವುದಕ್ಕೆ ಹಣ ವ್ಯಯಮಾಡಿ ಅದು ಅ ಒಂದು ದಿನಕ್ಕೆ ಮಾತ್ರ, ಅ ವ್ಯಯ ತಪ್ಪು ಅಲ್ಲ ಮಾಡಿ ಜೀವನದಲ್ಲಿ ಒಮ್ಮೆ ಬರುವುದು ಅಂತ ಸಂದರ್ಭ. ಅದರೆ ಒಂದು ಪೋಟೋ ಗ್ರಾಫರ್ ಗೇ ಸಮಯ ನೀಡಿ , ಅಲ್ಲಿ ಬಂದ ಸಂಬಂಧಿಕರು ಅಥವಾ ಇನ್ಯಾರೋ ತುರ್ತು ಮಾಡಿದರೆಂದು ನಿಮ್ಮ ಜೀವನದ ಮಧುರ ಕ್ಷಣವನ್ನು ಸೆರೆಹಿಡಿಯುವ ಛಾಯಾಗ್ರಾಹಕನ ಮೇಲೆ ಸಿಟ್ಟಾಗಬೇಡಿ. ಆ ಛಾಯಾಗ್ರಾಹಕನೀಗೆ ನೀವು ನೀಡೂ ಹಣಕ್ಕಾಗಿ ಅತಾ ಉತ್ತಮ ವಾದ ಚಿತ್ರ ನಿಮಗೆ ನೀಡಲು ಅನ್ನ ನೀರು ಬಿಟ್ಟು ಬೆಳಗ್ಗೆಯಿಂದ ಸಂಜೆಯವರೆಗೆ ನಿಂತು ನಿಂತು ಸುಸ್ತಾಗಿ ಕಷ್ಟ ಪಡುತ್ತಾನೆ. ಅವನಿಗೆ ಏನಿಲ್ಲ ಅವನು ಸಿಕ್ಕಿದ್ದು ಸಾಕು ಅಂತ ಬಿಟ್ಟು ಬಿಡಬಹುದು , ಪೋಟೋ ವೀಡಿಯೋ ಅವನ ಮನೆಯಲ್ಲಿ ಇಡಲು ಸಲುವಾಗಿ ಆತ ಅಷ್ಟು ಕಷ್ಟ ಪಡುವುದಲ್ಲ.., ನಿಮ್ಮ ಜೀವನದ ಮಧುರ ಕ್ಷಣವನ್ನು ನಿಮ್ಮ ಮುಂದಿನ ಜೀವನಕ್ಕೆ ,ಮುಂದಿನ ಪೀಳಿಗೆಗೆ ಆತ ಬೇವರು ಹರಿಸಿ ಕಷ್ಟ ಪಡುತ್ತಾನೆ. ಯಾವ ಛಾಯಾಗ್ರಾಹಕನು “ತಿಕಿಜ್ಜಿಂಡ ಸಯ್ಯಾಡಿಯಾ” ಅಂತ ಬಿಟ್ಟು ಬರುದಿಲ್ಲ. ಅತನಿಗೆ ಸರಿಯಾಗಿ ಪೋಟೋ ಸಿಗದಿದ್ದರೆ ವಧುವರರ ಊಟ ಆದಾ ಬಳಿಕವು ಕಾದು “ಅಣ್ಣ ಒಂಜೀ ರಡ್ಡ್ ಪೋಟೋ ದೆಪ್ಪುಗನೇ” ಅಂತ ಕೇಳುತ್ತಾನೆ. ಒಂದು ನೆನಪಿಟ್ಟು ಕೊಳ್ಳಿ ಯಾವ ಛಾಯಾಗ್ರಾಹಕ ನು ನಿಮ್ಮ ಕಾರ್ಯಕ್ರಮ ದ ಮುಹೂರ್ತ ಕ್ಕೆ ನಿಮ್ಮ ಕ್ರಮಕ್ಕೆ ಅಡ್ಡಿಪಡಿಸುದಿಲ್ಲ , ಅತನಿಗೂ ಸಮಯ ಪ್ರಜ್ಞೆ ಅನ್ನೋದು ಇದೆ. ನೀವು ಆತ ಲೈಟ್ ಸೆಟ್ ಮಾಡಿ ಒಂದು ಪೋಟೋ ತೆಗೆಯುವ ಮೊದಲೆ ಮಾತು ಅರಂಬಿಸುತ್ತಿರಿ “ದಾದ ಆಯಿಜ ನನಲಾ ಏತ್ ಪೊರ್ತು ನಿಕ್ಲೇನಾ ದಾರೆಗ್ ಪೊರ್ತು ಆಂಡ್ ನನ ಬೊಕ್ಕ ದೆಪ್ಪುಲೇ” ಹೀಗೆ ಒಂದು ಜಾಸ್ತಿ ತೆಗೆಯಲು ನಿಂತರೆ ಮಾತ್ರ ಛಾಯಾಗ್ರಾಹಕನನ್ನು ಆರೋಪಿಯಾಗಿ ಕಾಣುತ್ತಿರಿ. ಅದು ಗಂಡಸರಿರಲಿ ಹೆಂಗಸರಿರಲಿ ಅಲ್ಲಿ ಬಂದಿರುವ ಗುರುಕಾರರು ಇರಲಿ ಮಾತೆ ಮಾತು ಒಟ್ಟಾರೆ ಪೋಟೋ ಗ್ರಾಫರ್ ಪೋಟೋ ತೆಗೆಯುತ್ತಿರಬಾರದು ಅಷ್ಟೇ. ಮದುವೆಮನೆಯವರು ಕ್ರಮ ಮುಂದುವರಿಸದೆ ಸಮಯ ಎಷ್ಟು ಬೇಕಾದರೂ ಹಾಳೂ ಮಾಡಬಹುದು ,ಅದರೆ ಛಾಯಾಗ್ರಾಹಕ ಪೋಟೋ ತೆಗೆಯಬಾರದು ಅಷ್ಟೇ, ಎಲ್ಲಾರಂತು ಅಲ್ಲಾ ಕೆಲವರು ತುಂಬಾನೇ ಸಹಕರಿಸುತ್ತಾರೆ ಮನೆಯವರು ಇರಬಹುದು , ಪುರೋಹಿತರು ಹಾಗೂ ಗುರಿಕಾರರು ತುಂಬಾನೇ ಸಹಕಾರ ಕೊಟ್ಟವರು ಇದ್ದಾರೆ. ಇಲ್ಲಿ ತಪ್ಪು ಅವರದು ಇವರದು ಅಂತ ಅಲ್ಲ , ಇಲ್ಲಿ ಮಾಡಬೇಕಿರುವುದು ಇಷ್ಟೇ ನೀವು ನೀವು ಮನೆಯಲ್ಲಿ ಮಾತಾಡಿಕೊಂಡಿರಬೇಕು , ಸ್ವಲ್ಪ ನಾವು ಹೊಂದಿಕೊಂಡು ಹೋಗೋಣ ಅಂತ ನೀವು ನಿಮ್ಮ‌ ಹಿರಿಯ ತಲೇಮಾರಿನವರು ಇದ್ದರೆ ಅವರ ಹತ್ತಿರ ಮಾತಾಡಬೇಕು ಯಾಕೆಂದರೆ ಅವರ ಕಾಲದಲ್ಲಿ ಹಾಗೇ ಇದ್ದಿರುವುದಿಲ್ಲ, ಅವಾಗ ಈಗೀನ ಕಾಲದಷ್ಟು ತಂತ್ರಜ್ಞಾನ ಇದ್ದಿರಲಿಲ್ಲ. ಅವರಿಗೆ ಇದನ್ನು ಕಂಡಾಗ ಅರ್ಥವಾಗುದಿಲ್ಲ , ಅದಕ್ಕೆ ನೀವು ಮೊದಲೇ ಮನದಟ್ಟು ಮಾಡಿರಬೇಕು, ಗುರಿಕಾರರು ಇದ್ದರೆ ನೀವು ಅವರಿಗೂ ತಿಳಿಹೇಳಿ. ಮತ್ತೆ ಮದುವೆ ಮಂಟಪದಲ್ಲಿ ಯಾರಾದರೂ ಅಡ್ಡಿ ಬಂದಾಗ ನೀವು ಮಾಡಬೇಕು ಅಂದರೆ ವಧು ವರರು ಅದು ಬಿಟ್ಟು ಛಾಯಾಗ್ರಾಹಕ ಮಾತಾಡುದಲ್ಲ, ಅವನು “ಅಣ್ಣ ಒಂಜೀ 5 ,10 ನಿಮಿಷಡ್ ಬುಡ್ಪೆ” ಅಂತ ರಿಕ್ವೆಸ್ಟ್ ಮಾಡುವುದಲ್ಲ. ಅವನಿಗೆ ನಾಲ್ಕು ಹಿಂದಿಗಡೆ ಶಾಪ ಬೈಗುಳವೇ ಸೀಗೋದು ಕೊನೆಗೆ. ಅಂತಹ ಸಂದರ್ಭದಲ್ಲಿ ವಧುವರರು ಅವರ ಮನೆಯವರು ಮಾತಾಡಿ. ನಿಮ ಮನೆಯವರು ನಿಮ್ಮ ಬಂಧುಗಳು ನಿಮ್ಮ ಮಾತು ಕೇಳುತ್ತಾರೆ. ಅದು ಬಿಟ್ಟು ನಮ್ಮ ಮಾತು ಕೇಳಲು ಅವರು ರೆಡಿ ಇರುವುದಿಲ್ಲ. ಎರಡು ಕಡೆಯ ಛಾಯಾಗ್ರಾಹಕರು ಇದ್ದರೆ ಇಬ್ಬರಿಗೂ ಫೋಟೋ ಸಿಗಬೇಕಲ್ಲವೇ ಈಗೀನ ಗೋಡೆಕ್ಸ್ , ಸಾಪ್ಟ್ ಬಾಕ್ಸ್ ಅಂತ ಉಪಯೋಗಿಸುವಾಗ ಸ್ವಲ್ಪ ಸಮಯ ಹೋಗುತ್ತೆ ಹಾಗಂತ ಹೇಳಿ ಅತ ಜಾಸ್ತಿ‌ ಅಂದರೆ ಅರ್ಧ ಘಂಟೆ ಹೆಚ್ವುವರಿಯಾಗೀ ತೆಗೆದುಕೊಳ್ಳಬಹುದು ಅಷ್ಟೇ. ಕೆಲವು ಪಾಪದ ಛಾಯಾಗ್ರಾಹಕ ಇದ್ದರೆ ಕೆಲವು ಮುಂದಿನ ಕಡೆಯ ಛಾಯಾಗ್ರಾಹಕ ಅಂತ ತಿಳಿದು ಅವನಿಗೆ ಸ್ವಲ್ಪ ಉಪದ್ರ ಕೊಡುವ ಛಾಯಾಗ್ರಾಹಕರೂ ಇದ್ದರೆ ಪಾಪ ಅತದನ್ನೆಲ್ಲ ಮೆಟ್ಟಿ ಮುಂದೆ ಹಿಂದೆ ಆಕಡೇ ಈಕಡೆ ಹೋಗಿ ತೆಗೆಯುವಾಗ ಸ್ವಲ್ಪ ಸಮಯ ಹೊಗುತ್ತೆ , ಒಂದು ವಿನಂತಿ ಯಾವ ಛಾಯಾಗ್ರಾಹಕ ನೇ ಆಗಿರಲಿ ಆತ ನಮ್ಮ “opposite ” ಛಾಯಾಗ್ರಾಹಕ ಅಂತ ನಿಮ್ಮ ನಿಮ್ಮಲ್ಲಿ ಇಟ್ಟುಕೊಂಡು ಆತನೀಗೆ ಉಪದ್ರ ಮಾಡಲು ಅತನಿಗೆ ಅಡ್ಡಬರಲು ಹೋಗಬೇಡಿ ಅವನು ಪಾಪ ನಿಮ್ಮ ಹಾಗೇ ದುಡಿಯಲು ಬಂದಿರುತ್ತಾನೆ. ನಿಮ್ಮಂತೆ ಆತನಿಗೂ ಮನೆ ಹೆಂಡತಿ ಮಕ್ಕಳು ಇದ್ದಾರೆ , ಅವನು ಸ್ವಲ್ಪ ಪ್ರಾಮಾಣಿಕ ಹಾಗೂ ಪಾಪದವನು ಆಗೀರಬಹುದು ಹಾಗಂತ ಅವನಿಗೇ ಉಪದ್ರ ಮಾಡಲು ಹೋಗಬೇಡಿ ಛಾಯಾಗ್ರಾಹಕ ಮಿತ್ರರೇ , ಕೆಲವೇ ಕೆಲವು ಛಾಯಾಗ್ರಾಹಕ ರು ಹೀಗೆ ಇದ್ದರೆ ನಿಮ್ಮನ್ನು ನೀವು ಸರಿಪಡಿಸಿಕೊಳ್ಳಿ. ಅವರ ನೋವಿನ ಶಾಪಕ್ಕೆ ನೀವು ಬಳಿಯಾಗಬೇಡಿ, ಅಗುವುದಾದರೆ ಅವರಿಗೆ ಉಪಕರಿಸಿ ಅದುಬಿಟ್ಟು ಉಪದ್ರಕೊಡಬೇಡಿ. ಅವನೇನು ಪಾಕಿಸ್ತಾನದಿಂದ ಬಂದು ಛಾಯಾಗ್ರಾಹಕನಲ್ಲ. ಇದೆಲ್ಲ ನಾನು ಕಂಡು ಅನುಭವಿಸಿದ ಅನುಭವ ಎಲ್ಲಾ ಛಾಯಾಗ್ರಾಹಕನಿಗೂ ಅದು ಅನುಭವ ಆಗೀರಬಹುದು. ಕೊನೆಯದಾಗಿ ವಧು ವರರೆ ಹಾಗೂ ಅವರ ಮನೆಯವರೆ ನೀವು ಛಾಯಾಗ್ರಾಹಕನನ್ನು ನಿಮ್ಮ ಮನೆಯವರಂತೆ ನೋಡಿಕೊಳ್ಳಿ ಅತ ನಿಮಗೆ ನಮ್ಮ ನಗುವಿಗೆ ಕಾರಣಕರ್ತನಾಗುವನು ನಿಮ್ಮ ಜೀವನದ ಅಮೂಲ್ಯ ನೆನಪಿಗೆ ಸಾಕ್ಷಿಯಾಗುವನು. ನನ್ನ ಬರಹದಲ್ಲಿ ತಪ್ಪು ಇದ್ದರೆ ತಿದ್ದಿ ಹೇಳಿ. ವಂದನೆಗಳೊಂದಿಗೆ ನಾನು ನಿಮ್ಮ ಪ್ರೀತಿಯ ಹರಿಪ್ರಸಾದ್ ಪೆರಿಂಜೆ.

More from the blog

ಮತದಾನ ಜಾಗೃತಿ ಅಂಗವಾಗಿ ಸೆಲ್ಫಿ, ಸಹಿ ಅಭಿಯಾನಕ್ಕೆ ಚಾಲನೆ

ಮತದಾರರರಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಬಂಟ್ವಾಳ ತಾಲೂಕು ಪಂಚಾಯತ್, ತಾಲೂಕು ಆಡಳಿತ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಎ‌.5ರಂದು ಸೆಲ್ಫಿ, ಸಹಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸಹಾಯಕ ಚುನಾವಣಾಧಿಕಾರಿ ಉದಯ ಕುಮಾರ್...

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪ್ರಮುಖರ ಮನೆಗೆ ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಭೇಟಿ

ಬಂಟ್ವಾಳ: ರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದ, ವಿಕಸಿತ ಭಾರತದ ಸಂಕಲ್ಪಕ್ಕೆ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕು, ಈ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಂದು ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಗೆಲುವು ಸಾಧಿಸಬೇಕಾಗಿದೆ ಎಂದು ಮಂಗಳೂರು ಲೋಕಸಭಾ ಅಭ್ಯರ್ಥಿ ಬ್ರಿಜೇಶ್...

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ : ಇಬ್ಬರು ಗಂಭೀರ

ಬಂಟ್ವಾಳ: ಮುಂಜಾನೆ ವೇಳೆ ರಾಷ್ಟ್ರೀಯ ಹೆದ್ದಾರಿಯ ಬಿಸಿರೋಡಿನ ಕೈಕಂಬ ಎಂಬಲ್ಲಿ ಬೈಕ್ ಒಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಸವಾರ ಹಾಗೂ ಸಹಸವಾರ ಇಬ್ಬರು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ...

ನೀತಿ ಸಂಹಿತೆ ಉಲ್ಲಂಘನೆ : ಕೋಟಾ ಶ್ರೀನಿವಾಸ್‌ ಪೂಜಾರಿಗೆ ಕೋರ್ಟ್‌ ಸಮನ್ಸ್‌

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿ ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ. ಕೋಟಾ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ, ಲಾಲಾಜಿ ಮೆಂಡನ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳ ವಿಶೇಷ...