ಬಂಟ್ವಾಳ: ಕಳ್ಳಿಗೆ ಗ್ರಾಮದ ಪಚ್ಚಿನಡ್ಕ ಪ್ರದೇಶದಲ್ಲಿ ಬಂಟ್ವಾಳ ಬಿಜೆಪಿ ಯುವಮೋರ್ಚಾ ವತಿಯಿಂದ ಸೇವಾಹೀ ಸಂಘಟನ್ ಕಾರ್ಯಕ್ರಮದ ಭಾಗವಾಗಿ ಕಳ್ಳಿಗೆ ಗ್ರಾ.ಪಂ. ಹಾಗೂ ಬಿಜೆಪಿ ಕಾರ್ಯಕರ್ತರ ಸಹಕಾರದೊಂದಿಗೆ ಸಾರ್ವಜನಿಕರು ನಡೆದಾಡುವ ದಾರಿಗೆ ಕೆಂಪುಕಲ್ಲು ಹಾಸುವ ಕಾರ್ಯ ನಡೆಸಿದರು.
ಯುವ ಮೋರ್ಚಾ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು, ಬಂಟ್ವಾಳ ಭೂಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಅರುಣ್ ರೋಶನ್ ಡಿಸೋಜಾ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಕಾರ್ಯಕಾರಿಣಿ ಸದಸ್ಯ ಕಿಶೋರ್ ಪಲ್ಲಿಪ್ಪಾಡಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಶೆಟ್ಟಿ, ಅಶ್ವಥ್ ರಾವ್ ಬಾಳಿಕೆ, ಉಪಾಧ್ಯಕ್ಷ ಕಾರ್ತಿಕ್ ಬಲ್ಲಾಳ್, ಕುಶನ್‌ಕುಮಾರ್, ಕಾರ್ಯದರ್ಶಿ ಹೇಮಂತ್ ಮಾಣಿ, ರಂಜಿತ್ ನರಿಕೊಂಬು, ಕಳ್ಳಿಗೆ ಗ್ರಾ.ಪಂ.ಉಪಾಧ್ಯಕ್ಷ ದಾಮೋದರ ನೆತ್ತರಕೆರೆ, ಸದಸ್ಯ ಮನೋಜ್ ವಳವೂರು, ಮನೋಹರ ಕಂಜತ್ತೂರು, ದೇವಿಪ್ರಸಾದ್ ಎಂ, ಅಮ್ಟಾಡಿ ಮಹಾಶಕ್ತಿಕೇಂದ್ರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಹುಲ್ ರೈ ಪಚ್ಚಿನಡ್ಕ, ಸಚಿನ್, ಜಯನಂದ ಅಲ್ಲಿಪಾದೆ, ಅಭಿಲಾಷ್ ಶೆಟ್ಟಿ, ಮಹೇಶ್ ಅಜ್ಜಿಬೆಟ್ಟು, ರಾಜೇಶ್ ಬೋಳಂತೂರು, ಲೋಕೇಶ್ ಪಲ್ಲಿಪ್ಪಾಡಿ, ಭರತ್ ಶೆಟ್ಟಿ, ಸಂದೇಶ್ ಕೂರಿಯಾಳ, ಅಕೇಶ್ ಬೆಂಜನಪದವು, ಗ್ಲೆನ್ಸನ್ ಡಿಸೋಜ, ಪ್ರತೀಕ್ ಪಚ್ಚಿನಡ್ಕ, ಮಿತ್ರೇಶ್ ಪಚ್ಚಿನಡ್ಕ ಮೊದಲಾದವರು ಶ್ರಮದಾನದಲ್ಲಿ ಭಾಗವಹಿಸಿದ್ದರು.