ಶ್ರೀರಾಮ ಮಂದಿರದ ದ್ವಾರದ ಮುಂಭಾಗದಲ್ಲಿ ವಿಶ್ವಹಿಂದೂ ಪರಿಷದ್ ಬಜರಂಗದಳ ಕಲ್ಲಡ್ಕ ವಲಯದ ನೇತೃತ್ವದ ದತ್ತಪೀಠ ಹೋರಾಟದ ಗೆಲುವಿನ ವಿಜಯೋತ್ಸವ.
ಚಿಕ್ಕಮಗಳೂರು ದತ್ತಪೀಠದ ಪೂಜೆ ಪುನಷ್ಕಾರಗಳಿಗೆ ಸಂಬಂಧಿಸಿದಂತೆ ಮುಜಾವರ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಈ ಹಿಂದೆ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಸರ್ಕಾರದ ಆದೇಶವನ್ನು ಪ್ರಶ್ನಿಸಿ ಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸರ್ಕಾರದ ಆದೇಶವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ವಿಶೇಷ ಸಮತಿಯ ವರದಿಯನ್ನು ಪರಿಗಣಿಸದೆ ಪ್ರಕರಣವನ್ನು ಹೊಸದಾಗಿ ಪರಿಶೀಲಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ. *ಇನ್ನು ಮುಂದೆ ದತ್ತ ಪೀಠದಲ್ಲಿ ಹಿಂದೂ ಅರ್ಚಕರನ್ನು ಪೂಜಾ ಕೈಂಕರ್ಯಕ್ಕೆ ನೇಮಿಸುವಂತೆಯೂ ಸರ್ಕಾರಕ್ಕೆ ನ್ಯಾಯಾಲಯ ಸೂಚನೆ ನೀಡಿದೆ.
ಈ ಸಂದರ್ಭ ಸುಜಿತ್ ಕೊಟ್ಟಾರಿ ( ರಾಷ್ಟ್ರೀಯ ಸ್ವಯಂಸೇವಕ ಸಂಘ ವಿಟ್ಲ ತಾಲೂಕು ಕಾರ್ಯವಾಹ ) ಮಿಥುನ್ ಪೂಜಾರಿ ಕಲ್ಲಡ್ಕ (ಸಂಚಾಲಕರು ಬಜರಂಗದಳ ವಿಟ್ಲ ಪ್ರಖಂಡ ) ಅಮಿತ್ ಕಲ್ಲಡ್ಕ ( ಗೋರಕ್ಷಾ ಪ್ರಮುಖ್ ಬಜರಂಗದಳ ವಿಟ್ಲ ಪ್ರಖಂಡ) ಪುಷ್ಪರಾಜ್ ಶೆಟ್ಟಿಗಾರ್ ( ಅಧ್ಯಕ್ಷರು ವಿಶ್ವಹಿಂದೂ ಪರಿಷತ್-ಬಜರಂಗದಳ ಕಲ್ಲಡ್ಕ ಮೋಹನದಾಸ್ ಪೂಜಾರಿ (ಸಂಚಾಲಕರು ಬಜರಂಗದಳ ಕಲ್ಲಡ್ಕ ವಲಯ) ಉಪಸ್ಥಿತರಿದ್ದರು .