ಬಂಟ್ವಾಳ: ಸಾರ್ವಜನಿಕ ಕಚೇರಿಗಳುಳ್ಳ ಮಿನಿ ವಿಧಾನ ಸೌಧದ ಓಳ ಅವರಣಕ್ಕೆ ಯಾವುದೇ ಪೂರ್ವಾನುಮತಿ ಇಲ್ಲದೆ 50 ರಿಂದ 60 ಜನರ ಗುಂಪು ನುಗ್ಗಿ ಸಾರ್ವಜನಿಕ ಆಸ್ತಿ ಪಾಸ್ತಿ ಗಳಿಗೆ ಹಾನಿಯುಂಟು ಮಾಡಿದ್ದು ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್. ಆರ್. ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಗಸ್ಟ್ 31 ಮಂಗಳವಾರ ಬೆಳಿಗ್ಗೆ 11.30 ರ ವೇಳೆ ಬಂಟ್ವಾಳ ಮಿನಿ ವಿಧಾನ ಸೌಧದ ಕಚೇರಿಗೆ ಸುಮಾರು 50 ರಿಂದ 60 ಜನರ ತಂಡ ಕೋವಿಡ್ 19 ಕ್ಕೆ ಸಂಬಂಧಿಸಿದಂತೆ ವ್ಯಾಕ್ಸಿನ್ ಹಾಗೂ ಕಾರ್ಮಿಕ ವರ್ಗದವರಿಗೆ ಉಚಿತ ಕಿಟ್ ವಿತರಿಸುವ ಸಂದರ್ಭದಲ್ಲಿ ಏಕಪಕ್ಷೀಯ ವಾದ ತೀರ್ಮಾನಗಳನ್ನು ತೆಗೆದುಕೊಂಡು ದುರುಪಯೋಗ ಪಡಿಸಲಾಗುತ್ತಿದೆ ಎಂಬ ಆರೋಪ ಇಟ್ಟುಕೊಂಡು ಯಾವುದೇ ಪೂರ್ವಾನು ಮತಿ ಇಲ್ಲದೆ ಭದ್ರತೆ ಗೆ ಅವಕಾಶವನ್ನು ನೀಡದೆ ಏಕಾಏಕಿಯಾಗಿ ಕಚೇರಿ ಗೆ ಪ್ರವೇಶ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಘೋಷಣೆ ಗಳನ್ನು ಕೂಗುತ್ತ ತಾಲೂಕು ಕಚೇರಿ ಗಳ ದಿನನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆಯನ್ನುಂಟು ಮಾಡಿರುವುದಲ್ಲದೆ ಅಶಾಂತಿ ಸೃಷ್ಟಿಸಿದ್ದಾರೆ.
ಕಚೇರಿಯ ಆವರಣದಲ್ಲಿ ದ್ದ ಸಾರ್ವಜನಿಕ ಆಸ್ತಿಪಾಸ್ತಿ ಗಳಿಗೆ ಹಾನಿಯುಂಟು ಮಾಡಿದ ಗುಂಪು ಸರಕಾರದ ಕೋವಿಡ್ 19 ಮಾರ್ಗಸೂಚಿಗಳನ್ನು ಹಾಗೂ ಪರಿಷ್ಕೃತ ಆದೇಶ ಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಲ್ಲದೆ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆಯೂ ತಿಳಿಸಿದ್ದಾರೆ.