ಉಳಿ ಗ್ರಾ.ಪಂ.ಹಾಗೂ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಉಳಿ ಇವರ ಜಂಟಿ ಆಶ್ರಯದಲ್ಲಿ ಉಳಿ ಗ್ರಾ.ಪಂ.ಸಭಾ ಭವನದಲ್ಲಿ ಉಚಿತ ಅಂಬ್ಯುಲೆನ್ಸ್ ನ ಉದ್ಘಾಟನೆ ಸಮಾರಂಭ ನಡೆಯಿತು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಜನರ ಆರೋಗ್ಯ ವೇ ನನಗೆ ಮುಖ್ಯ ವಾಗಿದ್ದು,
ತಾಲೂಕಿನ ಪ್ರತಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು, ತಾಲೂಕಿನ ಬಹುತೇಕ ಎಲ್ಲಾ ಆಸ್ಪತ್ರೆ ಗಳಲ್ಲಿ ಆರೋಗ್ಯ ರಕ್ಷಣೆಗೆ ಬೇಕಾದ ಆಧುನಿಕ ತಂತ್ರಜ್ಞಾನದ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಗಳನ್ನು ಮಾಡಿದ್ದು, ಜೊತೆಗೆ ಕೊರತೆಯಿರುವ ವೈದ್ಯರು ಗಳ ನೇಮಕ ಮಾಡಲಾಗಿದೆ.
ಆರೋಗ್ಯ ರಕ್ಷಣೆಯ ಜವಾಬ್ದಾರಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯೇ ಪ್ರಥಮವಾಗಿ ಬಂಟ್ವಾಳ ದಲ್ಲಿ ಐಸಿಯು ಬಸ್ ಕಾರ್ಯನಿರ್ವಹಿಸುತ್ತಿದ್ದು, ಜನರ ಬಳಿಗೆ ವೈದ್ಯರು ಹೋಗಿ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲು ಪ್ರಾರಂಭವಾಗಿದೆ.ಇದರ ಪ್ರಯೋಜನ ಪಡೆಯಲು ಅವರು ತಿಳಿಸಿದರು.
ಜನರ ಸೇವೆ ಯೇ ಜನ ಪ್ರಮುಖ ಗುರಿಯಾಗಿದ್ದು ಅ ನಿಟ್ಟಿನಲ್ಲಿ ಕೆಲಸ ಮಾಡುವ ಭರವಸೆ ನೀಡಿದರು.
ಕೋವಿಡ್ ಸಂದರ್ಭದಲ್ಲಿ ಪ್ರತಿ ಗ್ರಾ.ಪಂ.ಗಳಿಗೆ ಬೇಟಿ ನೀಡಿ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ ಸೊಂಕು ನಿಯಂತ್ರಣ ಕ್ಕಾಗಿ ಕ್ರಮಕೈಗೊಂಡಿದ್ದೇವೆ.
ಕೋವಿಡ್ ನಿರ್ವಹಣೆ ಮಾಡಲು ಆರೋಗ್ಯ ಇಲಾಖೆಯ ಜೊತೆ ಎಲ್ಲಾ ಅಧಿಕಾರಗಳು, ಗ್ರಾಮ ಮಟ್ಟದ ಜನಪ್ರತಿನಿಧಿಗಳ ಸಹಕಾರ ನೀಡಿದೆ.
ಹಿರಿಯ ವೈದ್ಯ ಡಾ| ಕೆ.ಜಿ.ಭಟ್, ಅವರು ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿದ್ದರು.
ಅನಾರೋಗ್ಯ ಪೀಡಿತ ವ್ಯಕ್ತಿ ಗಳಿಗೆ ಗೋಲ್ಡನ್ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಲು ಅಂಬ್ಯುಲೆನ್ಸ್ ಅತ್ಯಂತ ಅವಶ್ಯಕವಾಗಿದೆ ಎಂದು ಅವರು ಹೇಳಿದರು.
ಮೋದಿಯವರ ಜನ ಔಷಧಿ ಕೇಂದ್ರ ಯೋಜನೆ ಬಡವರ ಪಾಲಿಗೆ ಅತ್ಯಂತ ಹೆಚ್ಚು ಪರಿಣಾಮಕಾರಿ ಯೋಜನೆ ಯಾಗಿದೆ.
ಕೋವಿಡ್ ಸಂದರ್ಭದಲ್ಲಿ ತಾಲೂಕಿನ ಲ್ಲಿ ನಿಯಂತ್ರಣ ಕ್ಕಾಗಿ ಕೈಗೊಂಡ ಶಾಸಕರ ಕ್ರಮ ಮಾದರಿಯಾಗಿದೆ.
ಉಳಿ ಗ್ರಾಮದಲ್ಲಿ ಸರಕಾರಿ ಆಸ್ಪತ್ರೆಯ ಬೇಡಿಕೆಯನ್ನು ಶಾಸಕರಿಗೆ ನೀಡಿದ್ದು, ಶಾಸಕರು ಸಕಾರಾತ್ಮಕ ಭರವಸೆ ನೀಡಿದರು.
ವೇದಿಕೆಯಲ್ಲಿ ಬೂಡ ಆದ್ಯಕ್ಷ ದೇವದಾಸ್ ಶೆಟ್ಟಿ,ಗ್ರಾ.ಪಂ ಅಧ್ಯಕ್ಷ ಸುರೇಶ್ ಮೈರ, ಉಪಾಧ್ಯಕ್ಷ ಚಿದಾನಂದ ರೈ ಕಕ್ಯೆ, ಗ್ರಾ.ಪಂ.ಸದಸ್ಯರಾದ ವಸಂತ ಸಾಲಿಯಾನ್, ಚೇತನ್ ಪೂಜಾರಿ, ಸಂಜೀವ ಗೌಡ, ರೇವತಿ, ಗುಲಾಬಿ, ಶಾಂತ, ವಿಶಾಲಾಕ್ಷಿ, ರಕ್ಷಿತಾ, ಶಾರದ,
ಕಕ್ಯೆಬೀಡು ಶ್ರೀ ಪಂಚ ದುರ್ಗಾ ದೇವಿ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಡಾ! ಸತ್ಯಶಂಕರ್ ಶೆಟ್ಟಿ, ಗೋಪಾಲಕೃಷ್ಣ ದೇವಸ್ಥಾನ ದ ಅಧ್ಯಕ್ಷ ವಿಠಲರಾಜ್ ಬರ್ಕಟ,
ಉಳಿ ಸಹಕಾರಿ ಬ್ಯಾಂಕ್ ನಿರ್ದೇಶಕ ರಂಜಿತ್ ಮೈರ, ಪ್ರಮುಖರಾದ ಗಣೇಶ್ ಕೋಗುಜೆ, ಡೀಕಯ್ಯ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಉಪತಹಶೀಲ್ದಾರ್ ಪದೋನ್ನತಿ ಹೊಂದಿದ ನವೀನ್ ಬೆಂಜನಪದವು ಅವರನ್ನು ಕಾರ್ಯಕ್ರಮ ದಲ್ಲಿ ಅಭಿನಂದಿಸಲಾಯಿತು.
ಉಳಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಮೈರ, ಸ್ವಾಗತಿಸಿ, ಉಪಾಧ್ಯಕ್ಷ ಚಿದಾನಂದ ರೈ ಕಕ್ಯ ವಂದಿಸಿದರು.
ಗ್ರಾ.ಪಂ.ಸದಸ್ಯ ವಸಂತ ಕಾರ್ಯಕ್ರಮ ನಿರೂಪಿಸಿದರು.