ಮುಂಬಯಿ (ಆರ್‌ಬಿಐ), ಆ.೧೧: ಎ.ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತುಳುನಾಡಿನ ಸಂಸ್ಕöÈತಿಯ ಕೊಡುಗೆಯಾದ ಕಂಬಳದ ಕುರಿತಾದ ಬಿರ್ದ್ದ ಕಂಬುಲವನ್ನು ಚಲನಚಿತ್ರ ನಿರ್ಮಿಸಲಾಗುತ್ತಿದೆ ಎಂದು ಕನ್ನಡದ ಖ್ಯಾತ ನಿರ್ದೇಶಕ ಎಸ್.ವಿ.ಬಾಬು ರಾಜೇಂದ್ರ ಸಿಂಗ್ ತಿಳಿಸಿದರು.
ಇಂದಿಲ್ಲಿ ಬುಧವಾರ ಮಂಗಳೂರುನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜೇಂದ್ರಸಿAಗ್ ಸಿನಿಮಾದ ಕಥೆ-ಚಿತ್ರಕಥೆ ನಿರ್ದೇಶನದ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದೇನೆ. ಸಿನಿಮಾ ತುಳು-ಕನ್ನಡದಲ್ಲಿ ನಿರ್ಮಾಣವಾಗಿ ತೆಲುಗು, ಹಿಂದಿ, ಮಲಯಾಳಕ್ಕೆ ಡಬ್ಬಿಂಗ್ ಮಾಡಲಾಗುವುದು. ಕರಾವಳಿ ಕರ್ನಾಟಕದ ರೈತಾಪಿ ವರ್ಗದ ಬದುಕಿನ ಆಧಾರಸ್ಥಂಭ-ಕAಬಳ ಗದ್ದೆಗಳು. ಅದರ ಸುತ್ತ ಇರುವ ಕಟ್ಟಪುಣಿ (ಅಗಲ ಹಾಗೂ ಎತ್ತರವಾದ)ಯಲ್ಲಿ ತೆಂಗು, ಕಂಗುಗಳ ಬೆಳೆ ಕರಾವಳಿಯಲ್ಲಿ ಪ್ರಮುಖವಾಗಿ ಮೂರು ತರದ ಭತ್ತದ ಗದ್ದೆಗಳು- ಕಾರ್ತಿ, ಸುಗ್ಗಿ ಮತ್ತು ಕೊಳಕ್ಕೆ. ಈ ಪೈಕಿ ಎರಡನೆಯದಾಗಿ ಸುಗ್ಗಿ ಬೆಳೆಯ ಸಂದರ್ಭದಲ್ಲಿ ನೂರಾರು ಜತೆ ಕೋಣಗಳು, ಎತ್ತುಗಳನ್ನು ಉಳುಮೆಗಾಗಿ ಬಳಸುವುದು ಅನಿವಾರ್ಯ. ಗುತ್ತು, ಭಾವ, ಬರ್ಕೆ, ಬೂಡು, ಸೀಮೆ ಹೀಗೆ ಅವರವರ ಅಂತಸ್ತಿಗೆ ಅನುಗುಣವಾಗಿ ಕಂಬಳ ಗದ್ದೆಗಳ ವಿಸ್ತೀರ್ಣ, ಉಳುಮೆಯ ಕೊನೆಯಲ್ಲಿ ಭಾಗವಹಿಸಿದ ಕೋಣಗಳಲ್ಲಿ ಸಮರ್ಥವಾದವುಗಳನ್ನು ಸಾಲಾಗಿ ಓಡಿಸುವ ಪದ್ಧತಿಯೇ ವೀರ ಕಂಬಳ. ಕಂಬಳದ ಕುರಿತಾದ ಅನೇಕ ಕತೆಗಳಿವೆ, ಇವುಗಳಲ್ಲಿ ಒಂದನ್ನು ಕೇಂದ್ರೀಕರಿಸಿ ಸಿನಿಮಾ ಮಾಡಲಾಗುವುದು ಎಂದರು.
ತುಳುನಾಡಿನ ಆಚಾರ, ವಿಚಾರ, ಸಂಪ್ರದಾಯಗಳನ್ನು ತುಳುವಿನ ವಿದ್ವಾಂಸರಿAದ ಮಾಹಿತಿ ಪಡೆದು, ನಿವೃತ್ತ ಪ್ರಾಚಾರ್ಯ ಕಂಬಳದ ಕಡಂಬರೆAದೇ ಖ್ಯಾತರಾದ ಗುಣಪಾಲ ಕಡಂಬರ ಮಾರ್ಗದರ್ಶನದೊಂದಿಗೆ ಯುವ ಉದ್ಯಮಿ ಅರುಣ್ ರೈ ತೋಡಾರ್ ಅವರ ಎ.ಆರ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಅದ್ದೂರಿಯಾಗಿ ಬಿರ್ದ್ದ ಕಂಬುಲ ಮತ್ತು ವೀರ ಕಂಬಳ ಎನ್ನುವ ಶೀರ್ಷಿಕೆಯಡಿಯಲ್ಲಿ ತುಳು-ಕನ್ನಡ ಚಲನಚಿತ್ರ ನಿರ್ಮಾಣಕ್ಕೆ ಅಣಿಯಾಗಿದ್ದೇವೆ. ಶ್ರೀಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಖಾತೆ ಸಚಿವ ಎಸ್.ಅಂಗಾರರವರು ಶೀರ್ಷಿಕೆ ಬಿಡುಗಡೆಗೊಳಿಸಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ಚಿತ್ರೀಕರಣ ಆರಂಭಗೊಳಿಸಲು ಅಣಿಯಾಗಿದ್ದೇವೆ. ತುಳು ರಂಗಭೂಮಿಯ ಲೇಖಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಈ ಚಿತ್ರಕ್ಕೆ ಸಂಭಾಚಣೆ ರಚಿಸಿದ್ದು, ಖ್ಯಾತ ನಟ-ನಟಿಯರ ಸಮ್ಮಿಲನದೊಂದಿಗೆ ತುಳು ರಂಗಭೂಮಿಯ ಹಾಗೂ ಕನ್ನಡ ರಂಗಭೂಮಿಯ ಕಲಾವಿದರನ್ನು ಬಳಸಿ ಉತ್ತಮ ಚಲನಚಿತ್ರವನ್ನು ನೀಡುವ ಉದ್ದೇಶ ಇದೆ, ಡಿಸೆಂಬರ್ ವೇಳೆಗೆ ಸಿನಿಮಾ ಬಿಡುಗಡೆಯಾಗಲಿದೆ ಎಂದೂ ಸಿಂಗ್ ಮಾಹಿತಿಯಿತ್ತರು.
6 ತಿಂಗಳುಗಳಿAದ ಸಂಪೂರ್ಣ ಅಧ್ಯಯನ
ಕನ್ನಡ, ತೆಲುಗು, ಹಿಂದಿ ಚಿತ್ರಗಳನ್ನು ನಿರ್ದೇಶಿಸಿ ಹೆಸರು ಮಾಡಿರುವ ಖ್ಯಾತ ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಅವರು ತುಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತುಳುನಾಡಿನ ಜಾನಪದ ಕ್ರೀಡೆ ಕಂಬಳದ ಕಥಾವಸ್ತು ಒಳಗೊಂಡ ಚಿತ್ರ ಕನ್ನಡ ಮತ್ತು ತುಳು ಭಾಷೆಯಲ್ಲಿ ತಯಾರಾಗಲಿದೆ. ಕನ್ನಡದಲ್ಲಿ “ವೀರ ಕಂಬಳ” ಮತ್ತು ತುಳುವಿನಲ್ಲಿ “ಬಿರ್ದ್ ದ ಕಂಬುಲ” ಎಂದು ಟೈಟಲ್ ಇಡಲಾಗಿದ್ದು ಮುಂದಿನ ಡಿಸೆಂಬರ್ ತಿಂಗಳ ಒಳಗೆ ಚಿತ್ರೀಕರಣ ಮುಗಿಸುವ ಇರಾದೆಯಿದೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಂಬಳವೆAದರೆ ಅಲ್ಲಿ ಪ್ರಾಣಿ ಹಿಂಸೆ ಮಾತ್ರವೇ ನಡೆಯುತ್ತದೆ ಅನ್ನುವುದು ತಪುö್ಪ. ನಾನು ತುಳುನಾಡಿನ ಉದ್ದಗಲಕ್ಕೂ ಸಂಚಾರ ಮಾಡಿದ್ದೇನೆ. ಕಂಬಳಕ್ಕೆ ಸಂಬAಧಪಟ್ಟ ಅನೇಕ ಮಂದಿ ಹಿರಿಯರನ್ನು ಭೇಟಿ ಮಾಡಿದ್ದೇನೆ. ೬ ತಿಂಗಳುಗಳಿAದ ಸಂಪೂರ್ಣ ಅಧ್ಯಯನ ಮಾಡಿಕೊಂಡು ಚಿತ್ರಕತೆ ಬರೆದಿದ್ದೇನೆ. ಈ ಚಿತ್ರ ಮತ್ತೊಂದು ದಾಖಲೆ ಬರೆಯಲಿದೆ ಎಂದು ಬಾಬು ಆಶಯ ವ್ಯಕ್ತಪಡಿಸಿದರು.
ಚಿತ್ರದ ಸಂಭಾಷಣೆ ಪ್ರಸಿದ್ಧ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಬರೆದಿದ್ದು, ಈ ಬಗ್ಗೆ ಮಾಹಿತಿ ನೀಡಿದ ಕೊಡಿಯಾಲ್‌ಬೈಲ್, ತುಳು ಚಿತ್ರರಂಗದಲ್ಲಿ ರಾಜೇಂದ್ರ ಸಿಂಗ್ ಅವರು ಚಿತ್ರ ಮಾಡಲು ಒಪ್ಪಿಕೊಂದಿರುವುದೇ ದೊಡ್ಡ ಸಂತಸದ ವಿಚಾರ. ಅವರಿಂದ ತುಳು ಚಿತ್ರರಂಗ ಮತ್ತು ತುಳುನಾಡಿಗೆ ಸಾಕಷ್ಟು ಸಹಾಯವಾಗಲಿದೆಎಂದರು. ಚಿತ್ರಕ್ಕೆ ಅರುಣ್ ರೈ ತೋಡಾರ್ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಆಡಿಷನ್ ಮೂಲಕ ಹೊಸ ಪ್ರತಿಭೆಗಳ ಅನ್ವೇಷಣೆ ಮಾಡಲಿದ್ದು ಕೆಲವೇ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್, ಅರುಣ್‌ರೈ ಕೋಡಾರ್, ಗುಣಪಾಲ ಕಡಂಬ, ರಾಜೇಶ್ ಕುಡ್ಲ ಉಪಸ್ಥಿತರಿದ್ದರು.