ಬೆಂಗಳೂರು: ಸಂಚಾರ ಪೋಲೀಸರು ನಿಯಮ ಜಾರಿ ಮಾಡಲು ಉಪಯೋಗಿಸುವ ಪಿ.ಡಿ.ಎ ಉಪಕರಣಗಳನ್ನು ವಾಪಸ್ ಪಡೆದಿದ್ದಾರೆ, ಜೊತೆಗೆ ಸಂಚಾರ ನಿಯಮ ಉಲ್ಲಂಘನೆ ದಾಖಲಿಸಬಾರದು ಎಂಬುದು ಸುಳ್ಳು ಸುದ್ದಿ ಎಂದು ಬೆಂಗಳೂರು ಸಂಚಾರ ಜಂಟಿ ಆಯುಕ್ತ ಡಾ! ಬಿ.ಆರ್.ರವಿಕಾಂತೇ ಗೌಡ ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಕೆಲವು ಮಾಧ್ಯಮಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸಂಚಾರ ಪೊಲೀಸರು ನಿಯಮ ಜಾರಿ ಮಾಡಲು ಉಪಯೋಗಿಸುವ ಪಿ ಡಿ ಎ ಉಪಕರಣಗಳನ್ನು ವಾಪಸ್ಸು ಪಡೆದಿರುವುದಾಗಿ ಮತ್ತು ಯಾವುದೇ ಸಂಚಾರ ನಿಯಮ ಉಲ್ಲಂಘನೆಗಳನ್ನು ದಾಖಲಿಸ ಬಾರದಾಗಿ ತಿಳಿಸಿರುತ್ತಾರೆಂದು ಸುದ್ದಿ ಬರುತ್ತಿದೆ.
ಇಂತಹ ಯಾವುದೇ ಸೂಚನೆಯನ್ನು ನೀಡಿರುವುದಿಲ್ಲ. ಹಾಗೂ ಪಿ ಡಿ ಎ ಗಳನ್ನು ವಾಪಸ್ಸು ಪಡೆದಿರುವುದಿಲ್ಲ. ಜಂಟಿ ಪೊಲೀಸ್ ಆಯುಕ್ತರು, ಸಂಚಾರ ರವರು ಪಿಡಿ ಎ ಗಳನ್ನು ವಾಪಸ್ಸು ಪಡೆದಿರುವ ಬಗ್ಗೆ ಹೇಳಿಕೆ ನೀಡಿರುತ್ತಾರೆಂದು ಕೆಲವು ಮಾಧ್ಯಮಗಳು ಪ್ರತಿಬಿಂಬಿಸಿ ಪ್ರಚಾರ ಮಾಡುತ್ತಿರುವುದು ಸತ್ಯಕ್ಕೆ ದೂರವಾಗಿರುತ್ತದೆ. ಈ ವಿಚಾರದ ಬಗ್ಗೆ ಜಂಟಿ ಪೊಲೀಸ್ ಆಯುಕ್ತರು, ಸಂಚಾರ ರವರನ್ನು ಯಾವ ಮಾಧ್ಯಮದ ಪ್ರತಿನಿಧಿಯೂ ಸಂಪರ್ಕಿಸಿ ರುವುದಿಲ್ಲ. ಕೆಲವು ಪ್ರಚಾರ ವಾಗುತ್ತಿರುವ ಈ ವಿಚಾರಗಳು ಸಂಪೂರ್ಣ ಸುಳ್ಳು.