ಬಂಟ್ವಾಳ: ಮೂಕ ಪ್ರಾಣಿಗಳ ರೋಧನಕ್ಕೆ ಪೋಲೀಸ್ ಸಿಬ್ಬಂದಿಯ ಸ್ಪಂದನೆ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹರೀಶ್ ಮಂಜೊಟ್ಟಿ ಎಂಬವರು ತನಗೆ ರಾತ್ರಿ ಕರ್ತವ್ಯ ದ ವೇಳೆ ಹಸಿವಾದಗ ತಿನ್ನಲು ಎಂದು ತಂದಿದ್ದ ತಿಂಡಿಯನ್ನು ಶ್ವಾನಗಳಿಗೆ ತಿನ್ನಲು ಹಾಕಿ ಮೂಕ ಪ್ರಾಣಿಗಳ ಹಸಿವು ನೀಗಿಸುವ ಸಣ್ಣ ಪ್ರಯತ್ನ ಮಾಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ದಿನ ಕಬಕದಲ್ಲಿ ಉಂಟಾದ ಅಶಾಂತಿ ಯ ವಾತಾವರಣ ದ ಹಿನ್ನೆಲೆಯಲ್ಲಿ ಹೆಚ್ಚಿನ ಬಂದೋಬಸ್ತ್ ಗಾಗಿ ಇವರನ್ನು ರಾತ್ರಿ ವೇಳೆ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.
ಕಳೆದ ಮೂರು ದಿನಗಳಿಂದ ಕಬಕ ಬಸ್ ನಿಲ್ದಾಣ ದಲ್ಲಿ ರಾತ್ರಿ ಕರ್ತವ್ಯ ನಿರತರಾಗಿದ್ದಾರೆ.
ಈ ವೇಳೆ ಬಸ್ ನಿಲ್ದಾಣ ದ ಹೊರಗಡೆ ಸುತ್ತಮುತ್ತ ಅನೇಕ ಶ್ವಾನ ಗಳು ಹಸಿವಿನಿಂದ ಇರುವುದನ್ನು ಮನಗಂಡ ಹರೀಶ್ ಮಂಜೊಟ್ಟಿ ಅವರು ತನಗಾಗಿ ತಿನ್ನಲು ತಂದಿದ್ದ ತಿಂಡಿಯನ್ನು ಶ್ವಾನಗಳಿಗೆ ಹಾಕುವುದನ್ನು ನೋಡಿ ವಾಹನ ಸವಾರೋರ್ವರು ವಿಡಿಯೋ ಮೂಲಕ ಸೆರೆ ಹಿಡಿದು , ಇದೀಗ ಪೋಲೀಸ್ ಸಿಬ್ಬಂದಿ ಯ ಪ್ರಾಣಿ ಪ್ರೇಮದ ವಿಡಿಯೋ ವೈರಲ್ ಆಗಿದೆ.
ಹರೀಶ್ ಮಂಜೊಟ್ಟಿ ಅವರು ಓರ್ವ ಕವಿ ಮಾತ್ರವಲ್ಲದೆ ಇವರ ಅನೇಕ ಸ್ವರಚಿತ ಪುಸ್ತಕಗಳು ಮಾರುಕಟ್ಟೆಯಲ್ಲಿ ಇವೆ.
ಸಮಾಜಿಕ ಕಳಕಳಿಯುಳ್ಳ ಹರೀಶ್ ನಾಟಕಕಾರ ,ವಿಮರ್ಶಕ, ಧಾರ್ಮಿಕ ವಿಚಾರಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸುವುತ್ತಿರುವ ಯುವಕ ಪೋಲೀಸ್ ಇಲಾಖೆಯಲ್ಲಿ ಯೂ ಉತ್ತಮ ಹೆಸರು ಗಳಿಸುತ್ತಿದ್ದಾರೆ.