2020-21ನೇ ಸಾಲಿನ ಎಸ್.ಎಸ್.ಎಲ್.ಸಿಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇಲ್ಲಿ ಪರೀಕ್ಷೆಗೆ ಹಾಜರಾದ 290 ವಿದ್ಯಾರ್ಥಿಗಳೂ ಉತ್ತೀರ್ಣರಾಗಿ ಶೇ.100 ಫಲಿತಾಂಶ ಗಳಿಸಿರುತ್ತದೆ. ಶೇ.80 ಗುಣಾತ್ಮಕ ಫಲಿತಾಂಶಗಳಿಸಿಂಗ್ರೇಡ್ ಪಡೆದಿರುತ್ತದೆ. ರಿಧೀಶ 625 ರಲ್ಲಿ 615 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಹಾಗೂ ಗಣಿತ & ತೃತೀಯ ಕನ್ನಡ ವಿಷಯದಲ್ಲಿ 100 ಅಂಕಗಳನ್ನು ಪಡೆದಿರುತ್ತಾಳೆ, ತೃಪ್ತಿ ಮತ್ತು ಭೂಮಿಕ ಇಬ್ಬರು 615 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಹಾಗೂತೃಪ್ತಿ ತೃತೀಯಕನ್ನಡ & ಗಣಿತ ವಿಷಯದಲ್ಲಿ 100 ಅಂಕಗಳು ಮತ್ತು ಭೂಮಿಕಗಣಿತ & ವಿಜ್ಞಾನ ವಿಷಯದಲ್ಲಿ 100 ಅಂಕಗಳನ್ನು ಪಡೆದಿರುತ್ತಾರೆ, ಧನ್ಯಶ್ರೀ 614 ಅಂಕಗಳನ್ನು ಪಡೆದು ತೃತೀಯ ಸ್ಥಾನ ಹಾಗೂ ಇಂಗ್ಲೀಷ್,ತೃತೀಯ ಕನ್ನಡ & ವಿಜ್ಞಾನ ವಿಷಯದಲ್ಲಿ 100 ಅಂಕಗಳನ್ನು ಪಡೆದಿರುತ್ತಾಳೆ, ಹಾಗೂ ಪೂರ್ಣಶ್ರೀ ರೈ ಸಂಸ್ಕೃತ 125 ಹಾಗೂ ಇಂಗ್ಲೀಷ್ & ಗಣಿತ ವಿಷಯದಲ್ಲಿ 100 ಅಂಕಗಳು, ಸುಶ್ರುತ್ ಎಸ್.ಕೊಟ್ಟಾರಿ ವಿಜ್ಞಾನ & ಸಮಾಜ ವಿಷಯದಲ್ಲಿ 100 ಅಂಕಗಳು, ಗೌತಮಿ & ಕೀರ್ತನಾ ಕನ್ನಡ ವಿಷಯದಲ್ಲಿ 125 ಅಂಕಗಳು, ಪಲ್ಲವಿ, ಶಮಾತ್ಮಿಕ, ಶಿಪಾಲಿ, ಸ್ವಸ್ತಿಕಾ, ಮಿಥೇಶ್ ವಿ.ನಾಯ್ಕ, ಸೃಜನ್ ತೃತೀಯ ಕನ್ನಡ ವಿಷಯದಲ್ಲಿ 100 ಅಂಕಗಳು, ಶರಣ್ಯ ಕೆ & ಯಜ್ಞೇಶ್ ಸಮಾಜ ವಿಷಯದಲ್ಲಿ 100 ಅಂಕಗಳು,ಶಿವಾನಿ &ರಾಹುಲ್ ವಿಜ್ಞಾನ ವಿಷಯದಲ್ಲಿ 100 ಅಂಕಗಳು, ಹಾಗೂ ಪ್ರಜ್ಞಾ ಹಿಂದಿ ವಿಷಯದಲ್ಲಿ 100 ಅಂಕಗಳನ್ನು ಪಡೆದಿರುತ್ತಾರೆ. 9 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರುತ್ತಾರೆ. ಒಟ್ಟು 41 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 143 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 85 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು 21 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರಿಗೆ ಶ್ರೀರಾಮ ವಿದ್ಯಾಕೇಂದ್ರ-ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಶಾಲಾಭಿವೃದ್ಧಿ ಸಮಿತಿ, ಮುಖ್ಯೋಪಾಧ್ಯಾಯರು, ಅಧ್ಯಾಪಕರು, ಹಾಗೂ ಅಧ್ಯಾಪಕೇತರರುಅಭಿನಂದನೆ ಸಲ್ಲಿಸಿರುತ್ತಾರೆ.