ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ವತಿಯಿಂದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಆಚರಣೆಯನ್ನು ನೆರಿವೇರಿಸಲಾಯಿತು.
ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ದ್ವಜಾರೋಹಣ ಮಾಡುವ ಮೂಲಕ ಶುಭಾಶಯ ನೀಡಿ ಮಾತಾಡಿ ಬ್ರಿಟಿಷ್ ದಾಸ್ಯದಿಂದ ಗಳಿಸಿಕೊಟ್ಟ ಸ್ವಾತಂತ್ರ್ಯಕ್ಕಾಗಿ ಹೋರಾಟಮಾಡಿದ ಹಿರಿಯರ ತ್ಯಾಗ ಬಲಿದಾನ ಸ್ಮರಣೆ ಮಾಡುವುದರೊಂದಿಗೆ ಮುಂದೊಂದು ದಿನ ದೇಶಕ್ಕೆ ಅಪಾಯ ವಾಗದಂತೆ ಯುವ ಜನತೆ ಎಚ್ಚರದಿಂದಿರಬೇಕು ಎಂದರು.
ಸಂಘದ ಉಪಾಧ್ಯಕ್ಷ ಸತೀಶ್ ಪೂಜಾರಿ, ನಿರ್ದೇಶಕರಾದ ಸಂದೇಶ ಶೆಟ್ಟಿ ಪೊಡುಂಬ, ದೇವರಾಜ್ ಸಾಲಿಯಾನ್, ಜಾರಪ್ಪ ನಾಯ್ಕ,ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ, ಸಿಬ್ಬಂದಿಗಳಾದ ಸಚಿನ್ ಜೈನ್ ,ಶಶಿಧರ ನಾಯ್ಕ, ಉಮೇಶ್ ಉಪಸ್ಥಿತರಿದ್ದರು.ಪ್ರಭಾರ
ಬ್ರಾಂಚ್ ಮೆನೇಜರ್ ಜೈಶನ್ ಸ್ವಾಗತಿಸಿ, ವಂದಿಸಿದರು.