ಬಂಟ್ವಾಳ: ಏಕಾಂಗಿಯಾಗಿ ವಾಸ ಮಾಡುತ್ತಿದ್ದ 52 ರ ಹರೆಯದ ಮಹಿಳೆಯನ್ನು ಮನೆಯೊಳಗೆ ಕೂಡಿ ಹಾಕಿ ಹಲ್ಲೆ ನಡೆಸಿ ಬಲಾತ್ಕಾರವಾಗಿ ಅತ್ಯಾಚಾರ ಮಾಡಿದ್ದಲ್ಲದೆ ಕೊಲೆ ಬೆದರಿಕೆ ಒಡ್ಡಿದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಸಿದ್ದಕಟ್ಟೆ ಎಂಬಲ್ಲಿ ನಡೆದಿದ್ದು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಆರೋಪಿ ವಿರುದ್ದ ದೂರು ದಾಖಲಾಗಿದೆ.
ಸಿದ್ದಕಟ್ಟೆ ಅನಿಲ್ ಎಂಬಾತ ಅತ್ಯಾಚಾರ ಆರೋಪಿಯಾಗಿದ್ದು , ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ.
ಅಗಸ್ಟ್ 11 ರಂದು ಘಟನೆ ನಡೆದಿದ್ದು ತಡವಾಗಿ ಮಾಹಿತಿ ಲಭ್ಯವಾಗಿದೆ.
ಅತ್ಯಾಚಾರಕ್ಕೊಳಗಾದ ಮಹಿಳೆ ಸಿದ್ದಕಟ್ಟೆ ಸಂಗಬೆಟ್ಟು ನಿವಾಸಿಯಗಿದ್ದು ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಬಡಪಾಯಿ ಮಹಿಳೆ.
ಇವರು ಗಂಡನನ್ನು ಕಳೆದುಕೊಂಡು ಬಳಿಕ ಮಗಳೊಂದಿಗೆ ವಾಸವಾಗಿದ್ದರು ಆದರೆ ಕೆಲ ವರ್ಷಗಳ ಹಿಂದೆ ಮಗಳಿಗೆ ಮದುವೆಯಾಗಿದ್ದು ಒಬ್ಬಂಟಿಯಾಗಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.
ಅಂತಹ ಬಡಪಾಯಿ ಮಹಿಳೆಗೆ ಹಲ್ಲೆ ನಡೆಸಿ ,ಅತ್ಯಾಚಾರ ಮಾಡಿ ಬಳಿಕ ಯಾರ ಬಳಿಯಲ್ಲಿ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಅತ್ಯಾಚಾರ ಕ್ಕೊಳಗಾದ 52 ಹರೆಯದ ಮಹಿಳೆ ಕೂಲಿ ಕೆಲಸ ಮಾಡಿ ಮನೆಗೆ ಬಂದು ಬಚ್ಚಲಿನಲ್ಲಿ ಬಿಸಿ ನೀರು ಕಾಯಿಸಲು ಎಂದು ಹೋದಾಗ ಆರೋಪಿ ಅನಿಲ್ ಬಂದು ಮಹಿಳೆಯನ್ನು ಬಲಾತ್ಕಾರವಾಗಿ ಮನೆಯೊಳಗೆ ಎಳೆದುಕೊಂಡು ಹೋಗಿ ಮನೆಯೊಳಗೆ ಕೂಡಿ ಹಾಕಿ ವಿರೋಧ ವ್ಯಕ್ತಪಡಿಸಿದ ಸಂದರ್ಭದಲ್ಲಿ ಹಲ್ಲೆ ನಡೆಸಿ ಬಳಿಕ ಅತ್ಯಾಚಾರ ಮಾಡಿದ್ದಾನೆ.
ಅತ್ಯಾಚಾರ ಮಾಡಿದ ಬಳಿಕ ಯಾರಿಗೂ ತಿಳಿಸಿದರೆ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ.
ಆ ಬಳಿಕ ಅತ್ಯಾಚಾರ ಕ್ಕೊಳಗಾದ ಮಹಿಳೆ ಮಗಳಿಗೆ ಹಾಗೂ ಅಳಿಯನಿಗೆ ಪೋನ್ ಕರೆ ಮಾಡಿ ತಿಳಿಸಲಾಗಿ ಅವರ ಜೊತೆ ಗ್ರಾಮಾಂತರ ಪೋಲೀಸ್ ಸ್ಟೇಷನ್ ಆಗಮಿಸಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಬಂಟ್ವಾಳ ಪೋಲೀಸರು ಅತ್ಯಾಚಾರ ಎಸಗಿ ಪರಾರಿಯಾಗಿರುವ ಆರೋಪಿಗೆ ಬಲೆ ಬೀಸಿದ್ದಾರೆ.