75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತೋತ್ಸವದ ಪ್ರಯುಕ್ತ ಶ್ರೀದೇವಿ ಯುವಕ ಸಂಘ ಸೆರ್ಕಳ(ರಿ) ಇದರ ವತಿಯಿಂದ ಸೆರ್ಕಳ ಮಾರಿಗುಡಿ ಶ್ರೀ ಮಹಮ್ಮಾಯಿ ದೈವಸ್ಥಾನದ ವಠಾರ ಹಾಗೂ ಅಂಗನವಾಡಿಕೇಂದ್ರ ಸೆರ್ಕಳ ಇಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಸ್ವಚ್ಛ ಭಾರತದ ಸಂಕಲ್ಪದೊಂದಿಗೆ ಕಾರ್ಯಕ್ರಮವು ಚಾಲನೆಗೊಂಡಿತು.
ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶ್ರೀಧರ್ ಸೆರ್ಕಳ, ಧನು ಸೆರ್ಕಳ, ಉಮೇಶ್ ಸೆರ್ಕಳ, ಸತೀಶ್ ಸೆರ್ಕಳ, ವೆಂಕಪ್ಪ ಸೆರ್ಕಳ, ಸಚಿನ್, ತಾರಾನಾಥ್, ನಾಗರಾಜ, ದಯಾನಂದ, ಕಾರ್ತಿಕ್, ಕೌಶಿಕ್, ಚೇತು, ಬಾಬಾ, ಪ್ರಶಾಂತ್, ಪವನ್, ಶ್ರೇಯಸ್ ಉಪಸ್ಥಿತರಿದ್ದರು.