ಬಂಟ್ವಾಳ: ಯಕ್ಷಮಿತ್ರರು ಕೂರಿಯಾಳ ಇವರ 4ನೇ ವರ್ಷದ ಯಕ್ಷಗಾನವು ಕುರಿಯಳದೊಂಪದಬಲಿ ವಠಾರದಲ್ಲಿ ಜರುಗಿತು. ಕೊರೋನಾ ಸಂದರ್ಭ ದಲ್ಲಿ ಜನರ ಸೇವೆ ಮಾಡಿದ ನಮ್ಮ ಗ್ರಾಮದ ಆಶಾಕಾರ್ಯಕರ್ತೆಯರಾದ ಗೀತಾ ಮತ್ತು ಕಸ್ತೂರಿ ಹಾಗೂ ಸೇವಾ ಭಾರತಿ ಯ ಆ್ಯಂಬುಲೆನ್ಸ್ ಚಾಲಕರಾದ ಸಂತೋಷ್ ಸುವರ್ಣ ದುರ್ಗಾನಗರ ರವರಿಗೆ ಈ ಸಂದರ್ಭದಲ್ಲಿ ಎಲ್ಲರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು ಈ ಸಂದರ್ಭದಲ್ಲಿ ವೇದಿಕೆ ಯಲ್ಲಿ ಯಕ್ಷಮಿತ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು.