Wednesday, April 10, 2024

ಸಲ್ ಸಬೀಲ್ ಎಕ್ಸೆಲೆನ್ಸ್ ಪ್ರಶಸ್ತಿಗಾಗಿ ಲೇಖನ ಆಹ್ವಾನ

ಸಲ್ ಸಬೀಲ್ ವಿದ್ಯಾರ್ಥಿ ಸಂಘಟನೆ ಪಾಣೆಮಂಗಳೂರು ಇದರ ವತಿಯಿಂದ ನೀಡಲಾಗುವ 2021 ನೇ ಸಾಲಿನ ಸಲ್ ಸಬೀಲ್ ಎಕ್ಸೆಲೆನ್ಸ್ ಪ್ರಶಸ್ತಿಗಾಗಿ ಲೇಖನವನ್ನು ಆಹ್ವಾನಿಸಲಾಗಿದ್ದು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕರಿಗೆ ಭಾಗವಹಿಸಲು ಮುಕ್ತ ಅವಕಾಶವಿರುತ್ತದೆ.

 

ಲೇಖನದ ವಿಷಯ :
ಭಾರತದ ಸಾಮರಸ್ಯದ ಪರಂಪರೆಯನ್ನು ಭವಿಷ್ಯದಲ್ಲಿ ಭದ್ರಗೊಳಿಸುವ ಬಗೆ.
THE WAY OF SECURING INDIA’S HARMONIOUS HERITAGE IN FUTURE

ನಿಯಮಗಳು :

🔰 ದ.ಕ. ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕರಿಗೆ ಲೇಖನ ಕಳುಹಿಸಲು ಮುಕ್ತ ಅವಕಾಶವಿರುತ್ತದೆ.

🔰 A4 ಅಳತೆಯ ಖಾಲಿ ಹಾಳೆಯಲ್ಲಿ ಗರಿಷ್ಠ ಮೂರು ಪುಟಗಳಿಗೆ ಮೀರದಂತೆ ಲೇಖನವಿರಬೇಕು.

🔰 ಲೇಖನವು ಕನ್ನಡ ಅಥವಾ ಇಂಗ್ಲೀಷ್ ಭಾಷೆಯಲ್ಲಿರಬಹುದು.

🔰 ಲೇಖನವು ಲೇಖಕರ ಸ್ವತಂತ್ರ ಬರಹವಾಗಿರಬೇಕು.

🔰 ವಿಷಯಾಧಾರಿತ ಲೇಖನ / ಬರಹಗಳ ಪೈಕಿ ಅತ್ಯುತ್ತಮ ಲೇಖನದ ಬರಹಗಾರನಿಗೆ ಸಲ್ ಸಬೀಲ್ ಎಕ್ಸೆಲೆನ್ಸ್ ಪ್ರಶಸ್ತಿ ಪ್ರದಾನ ಮಾಡಲಾಗುವುದು‌ ಹಾಗೂ ನಗದು ಬಹುಮಾನ ನೀಡಿ ಪುರಸ್ಕರಿಸಲಾಗುವುದು.

🔰 ಬರಹವನ್ನು ಈ ಕೆಳಗಿನ ಈಮೇಲ್ ಅಥವಾ ವ್ಯಾಟ್ಸ್ಯಾಪ್ ಸಂಖ್ಯೆಗೆ ಕಳುಹಿಸಬಹುದು.

📧email id :
[email protected]

Whatsapp No : 8904950313.

🔰 ಬರಹ ತಲುಪಬೇಕಾದ ಕೊನೆಯ ದಿನಾಂಕ : 22/08/2021 ರವಿವಾರ.

🔰 ಬರಹಗಾರರು ತಮ್ಮ ಪೂರ್ಣ ಹೆಸರು, ವಿಳಾಸ, ಸಂಪರ್ಕ ಸಂಖ್ಯೆಯನ್ನು ಲೇಖನದ ಹಾಳೆಯ ಕೊನೆಯ ಪುಟದಲ್ಲಿ ಸ್ಪಷ್ಟವಾಗಿ ಬರೆದಿರಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ : 8970406202./ 8904378986.

ಪ್ರಕಟಣೆ: 
ಕಾರ್ಯದರ್ಶಿ
ಸಲ್ ಸಬೀಲ್ ಸಂಸ್ಥೆ
ಪಾಣೆಮಂಗಳೂರು,
ಬಂಟ್ವಾಳ ತಾಲೂಕು.ದ .ಕ

More from the blog

ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ

2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಪಾಣೆಮಂಗಳೂರು, ನರಿಕೊಂಬುವಿನಲ್ಲಿರುವ ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಕು.ಕೀರ್ತನ ಶೇ.95.6% ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. 2024-25ನೇ...

ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಅಭಿಯಾನದ ಅಂಗವಾಗಿ ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಬೇಟಿ ನೀಡಿ...

ವಿಟ್ಲ ಕೇಂದ್ರ ಜುಮಾ ಮಸೀದಿ, ಈದುಲ್ ಫಿತರ್

ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಖತೀಬ್ ಮಹಮ್ಮದ್ ನಸೀಹ್ ದಾರಿಮಿ ಉಸ್ತಾದ್ ರವರು ಖುತುಬಾ ಹಾಗೂ ಈದ್ ನಮಾಝ್ ನಿರ್ವಹಿಸಿದರು. ಈದ್ ಸಂಸೇಶ ನೀಡಿದ ಖತೀಬರು "...

ನೋಟ ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ತಾ.ಪಂ.ಸದಸ್ಯ ಪ್ರಭಾಕರ್ ಪ್ರಭು ಒತ್ತಾಯ…

ನೋಟ (NOTA) ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ತಾ.ಪಂ‌.ಸದಸ್ಯ ಪ್ರಭಾಕರ್ ಪ್ರಭು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವೊಂದು ವ್ಯಕ್ತಿಗಳು ಮತ್ತು ಸಂಘಟನೆಗಳು...