ಮಂಗಳೂರು: ಮಂಗಳೂರು ಶಾಸಕರಾದ ಯುಟಿ ಖಾದರ್ ಅವರು ಸಜಿಪನಡು ಗ್ರಾಮದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಬಳಿಕ ಸರಕಾರಿ ಪ್ರೌಢಶಾಲೆಯ ಶಿಕ್ಷಕ ರಕ್ಷಕ ಸಭೆಯಲ್ಲಿ ಪಾಲ್ಗೊಂಡು ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೆ ಕಾರಣಕರ್ತರಾದ ಅಧ್ಯಾಪಕ ವರ್ಗದವರನ್ನು ಅಭಿನಂದಿಸಿದರು.
ಶೇಕಡಾ 100 ಫಲಿತಾಂಶ ಸಾಧಿಸಿದ ಪ್ರಸ್ತುತ ಶಾಲೆಯ ವಿದ್ಯಾರ್ಥಿಗಳನ್ನು ಶಾಲಾಭಿವೃದ್ಧಿ ಸಮಿತಿಯನ್ನು ಹಾಗೂ ಸಹಕರಿಸಿದ ಊರವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಬಳಿಕ ಬಂಟ್ವಾಳ ತಾಲೂಕಿನ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಜಿಪನಡು ಇಲ್ಲಿಗೆ ಭೇಟಿ ನೀಡಿದ ಶಾಸಕರು ಆಶಾ ಕಾರ್ಯಕರ್ತೆಯರೊಂದಿಗೆ ಮುಕ್ತವಾಗಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ಮೊಹಮ್ಮದ್ ತುಫೈಲ್ ರವರನ್ನು ಅಭಿನಂದಿಸಿ ಅಹವಾಲು ಸ್ವೀಕರಿಸಿದರು.
ನಂತರ ಬೊಳಮೆ ಮಸೀದಿ ಹಾಗೂ ಶ್ರೀ ಷಣ್ಮುಖ ಸುಬ್ರಮಣ್ಯ ದೇವಸ್ಥಾನ ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆಯನ್ನು ನೀಡಿದರು.
ಬಳಿಕ ಗ್ರಾಮದ ವಿವಿಧ ಪ್ರದೇಶಗಳಾದ ಬೈಲುಗುತ್ತು, ಬಸ್ತಿಗುಡ್ಡೆ, ಕುಂಟಾಲಗುಡ್ಡೆ ಹಾಗೂ ಗೋಳಿ ಪಡ್ಪು ಪ್ರದೇಶಗಳಲ್ಲಿ ಪ್ರಗತಿ ಪರಿಶೀಲನೆ ನಡೆಸಿದರು
ಈ ಸಂದರ್ಭದಲ್ಲಿ ಸಜೀಪ ನಡು ವಲಯ ಸಮಿತಿ ಅಧ್ಯಕ್ಷರಾದ ಅಬೂಬಕ್ಕರ್ ಸಜೀಪ, ಅಬ್ದುಲ್ ರಝಾಕ್ ಕುಕ್ಕಾಜೆ, ಪ್ರವೀಣ್ ಆಳ್ವಾ,
ಪಕ್ಷ ಪ್ರಮುಖರಾದ ಎಸ್.ಕೆ. ಮಹಮ್ಮದ್, ಸೋಮನಾಥ್ ಬಂಡಾರಿ, ಇಬ್ರಾಹಿಂ ,ಬಶೀರ್ ಬೋಲಮೆ ಪಂಚಾಯತ್ ಸದಸ್ಯರಾದ ಲತೀಫ್ ಬೋಲಮೆ, ರಫೀಕ್ ಗೋಳಿಪಡ್ಪು ಹಾಗೂ ಯುವ ಮುಖಂಡರಾದ ಆಸಿಫ್ ಸಜಿಪ, ನಿಸಾರ್ ಸಜಿಪ, ಹನಿಫ್ ಗೋಳಿಪಡ್ಪು ಜಸೀಮ್ ಸಜೀಪ, ಆಫ್ರಿಜ್ ಗೋಳಿಪಡ್ಪು, ಕಿಶೋರ್ ದೇರಾಜೆ, ಇಕ್ಬಾಲ್ ಗೋಳಿಪಡ್ಪು ಉಪಸ್ಥಿತರಿದ್ದರು.