ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಾವೂರ ಜಿಲ್ಲಾ ಪಂಚಾಯತ್ ಒಳಪಟ್ಟ ಪಕ್ಷದ ಮುಖಂಡರು, ಮಾಜಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕ್ ಪಂಚಾಯತ್ ಸದಸ್ಯರು, ವಲಯ ಕಾಂಗ್ರೆಸ್ ಅಧ್ಯಕ್ಷರು, ಬೂತ್ ಸಮಿತಿ ಅಧ್ಯಕ್ಷರು ,ಬೂತ್ ಸಮಿತಿ ಕಾರ್ಯದರ್ಶಿ, ಬೂತ್ ಸಮಿತಿ ಬಿ ಎಲ್ ಎ , ಹಾಗೂ ಮುಂಚೂಣಿ ಘಟಕದ ಅದ್ಯಕ್ಷರು, ಮಹಿಳಾ ಕಾಂಗ್ರೆಸ್, ಯೂತ್ ಕಾಂಗ್ರೆಸ್, ಗ್ರಾಮ ಪಂಚಾಯತ್ ಸದಸ್ಯರು , ಮುಖ್ಯ ಕಾರ್ಯಕರ್ತರ ಚುನಾವಣಾ ಪೂರ್ವ ತಯಾರಿ ಸಭೆಯು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಚಿವರಾದ ಬಿ ರಮಾನಾಥ ರೈಯವರ ನೇತೃತ್ವದಲ್ಲಿ ನಡೆಯಿತು. ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಎಲ್ಲರೂ ಜವಾಬ್ದಾರಿಯಿಂದ ಕಾರ್ಯ ಪ್ರವರ್ತರಾಗಿ ಪಕ್ಷಕ್ಕೆ ಶಕ್ತಿ ತುಂಬುವಂತೆ ಕರೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಅಧ್ಯಕ್ಷತೆ ವಹಿಸಿ ಕಾರ್ಯಕರ್ತರು ಯಾವುದೇ ಬಿನ್ನಾಭಿಪ್ರಾಯಕ್ಕೆ ಅವಕಾಶ ನೀಡದೆ ಒಗ್ಗಟ್ಟಿನಿಂದ ಪಕ್ಷವನ್ನು ಕಟ್ಟಿ ಬೆಳೆಸೋಣ ಎಂದು ಮನವಿ ಮಾಡಿದರು.ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮ ಶೇಖರ್ ಜೈನ್,ಚಂದ್ರ ಪ್ರಕಾಶ್ ಶೆಟ್ಟಿ, ಮಾಜಿ ತಾಲೂಕ್ ಪಂಚಾಯತ್ ಸದಸ್ಯರಾದ ಮಲ್ಲಿಕಾ ವಿ ಶೆಟ್ಟಿ, ಧನಲಕ್ಷ್ಮಿ ಸಿ ಬಂಗೇರ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಾಯಿಲಪ್ಪ ಸಾಲ್ಯಾನ್, ಬಂಟ್ವಾಳ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಲವೀನಾ ವಿಲ್ಮಾ ಮೊರಾಸ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಬ್ಬೀರ್ ಸಿದ್ಧಕಟ್ಟೆ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜನಾರ್ದನ ಚೆಂಡ್ತಿಮಾರ್,ಪುರಸಭಾ ಸದಸ್ಯರಾದ ಗಂಗಾಧರ್ ಪೂಜಾರಿ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಬಾಲಾಜಿ ರಾವ್, ವಿಶ್ವನಾಥ್ ಬಿತ್ತ, ಪ್ರಶಾಂತ್ ಜೈನ್, ಬಿ.ಆರ್ ಅಂಚನ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಸದಾನಂದ ಶೆಟ್ಟಿ, ಕಾರ್ಮಿಕ ವಿಭಾಗ ಅಧ್ಯಕ್ಷರಾದ ಮನೋಹರ್ ಕುಲಾಲ್, ಅಲ್ಪ ಸಂಖ್ಯಾತರ ಅಧ್ಯಕ್ಷರಾದ ಮೊಹಮ್ಮದ್ ಷರೀಫ್, ಪಂಚಾಯತ್ ಅಧ್ಯಕ್ಷರಾದ ಉಮೇಶ್ ಕುಲಾಲ್ ನಾವೂರು, ಅಸ್ಮಾ ಅಝೀಝ್ ಮುಖಂಡರಾದ ಜಗದೀಶ್ ಕೊಯಿಲ, ಸುಧಾಕರ ಶೆಣೈ, ಪ್ರಶಾಂತ್ ಕುಲಾಲ್,ಅಮ್ಮು ಅರ್ಬಿ ಗುಡ್ಡೆ,ವೆಂಕಪ್ಪ ಪೂಜಾರಿ,ಮೋಹನ್ ಸಾಲ್ಯಾನ್,ವಿಕ್ಟರ್ ಡಿಸೋಜ, ಮೊಹಮ್ಮದ್ ಸಂಗಬೆಟ್ಟು,ಇಸ್ಮಾಯಿಲ್ ಸಿದ್ದಿಕ್ ಕಾವಲಕಟ್ಟೆ ,ವಾಸು ಪೂಜಾರಿ ಕಜೆಕಾರು , ಅಬ್ದುಲ್ ರಹಿಮಾನ್ ಕಕ್ಕೆಪದವು ಹಾಗೂ
ಪಂಚಾಯತ್ ಸದಸ್ಯರು ಮತ್ತು ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.ಮಹಾಬಲ ಬಂಗೇರ ಧನ್ಯವಾದ ಗೈದರು.