ಬಂಟ್ವಾಳ: ರೋಟರಿ ಕ್ಲಬ್ ಮೊಡಂಕಾಪು ನೇತ್ರತ್ವದಲ್ಲಿ ನಮ್ಮ ನಾಡ ಒಕ್ಕೂಟದ ಸಹಯೋಗದೊಂದಿಗೆ ಬಿಸಿರೋಡು ಕೈಕಂಬ ಪರಿಸರದಲ್ಲಿ ಪುರಸಭಾ ಇಲಾಖೆಯ ಸಹಕಾರದೊಂದಿಗೆ ಎರಡನೇ ವಾರದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ಸ್ವಚ್ಚತೆ ರೋಟರಿ ಕ್ಲಬ್ ನ ಧ್ಯೇಯ ವಾಕ್ಯ ವಾಗಿದ್ದು, ಪ್ರತಿಯೊಬ್ಬರ ಸಹಕಾರ ಅತೀ ಅಗತ್ಯ ಎಂಬ ಸಂದೇಶವನ್ನು ತಾವೇ ಸ್ವಚ್ಚತಾ ಕಾರ್ಯವನ್ನು ಮಾಡುವ ಮೂಲಕ ಬಿಸಿರೋಡು ಪೇಟೆಯ ಜನರಲ್ಲಿ ಜನಜಾಗೃತಿ ಮೂಡಿಸುವ ಸಲುವಾಗಿ ವಿನೂತನ ಕಾರ್ಯಕ್ರಮ ಮೊಡಂಕಾಪು ರೋಟರಿ ಕ್ಲಬ್ ವಹಿಸಿದ್ದು ಎಲ್ಲರ ಸಹಕಾರ ಯಾಚಿಸಿದ್ದಾರೆ.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಮೊಡಂಕಾಪು ಇದರ ಅಧ್ಯಕ್ಷ ಎಲಿಯಾಸ್ ಸ್ಯಾನ್ಟಿಸ್ , ನಮ್ಮ ನಾಡ ಒಕ್ಕೂಟದ ಅಧ್ಯಕ್ಷ ಪಿ.ಎ.ರಹೀಂ, ಉಪಾಧ್ಯಕ್ಷ ಅಬ್ಬಾಸ್, ಪುರಸಭಾ ಇಂಜಿನಿಯರ್ ಡೊಮಿನಿಕ್ ಡಿ.ಮೆಲ್ಲೊ, ರೋ. ಕ್ಲಬ್ ಮಾಜಿ ಅಧ್ಯಕ್ಷ ನಾರಾಯಣ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.