ಬಂಟ್ವಾಳ: ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ಎನ್ನಲು ಹೆಮ್ಮೆ ಪಡುವ ಕಾಲ ಇದಾಗಿದ್ದು, ಇದರ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಪಕ್ಷವನ್ನು ಕಟ್ಟಿ ಬೆಳೆಸಿದವರ ತ್ಯಾಗ ಬಲಿದಾನದ ಶ್ರಮ ಇದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮಾಧ್ಯಮ ವಿಭಾಗದ ವತಿಯಿಂದ ಮನ್ ಕೀ ಬಾತ್, ರಕ್ಷಾ ಬಂಧನ ಹಾಗೂ ಎಸ್.ಸಿ.ಕಾಲೋನಿ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆನಂದ ಪಿಲಿಚಂಡಿಗುಡ್ಡೆ ಯವರ ಮನೆಯಂಗಳದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಜೆಪಿ ಕೇವಲ ಒಂದು ಕುಟುಂಬ ಅಥವಾ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ, ಇದಕ್ಕೆ ನಮ್ಮ ಹಾಲಿ ರಾಷ್ಟ್ರಪತಿಗಳೇ ಸಾಕ್ಷಿ ಎಂದ ಅವರು, ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ಭಾರತ ಕಂಡ ರಾಮರಾಜ್ಯದ ಕನಸು ನನಸಾಗುತ್ತಿದೆ ಮಾತ್ರವಲ್ಲದೆ ಭಾರತದ ನೈಜ ಶಕ್ತಿ ಅನಾವರಣಗೊಳ್ಳುತ್ತಿದೆ ಎಂದರು.
ಬಂಟ್ವಾಳ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿಯವರು ಮಾತನಾಡಿ, ಗ್ರಾಮ, ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಪ್ರತಿಯೋರ್ವ ಕಾರ್ಯಕರ್ತನೂ ಒತ್ತು ನೀಡಬೇಕು, ಜೊತೆಗೆ ಎಲ್ಲರ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕು ಎಂದರು.
ಜಿಲ್ಲಾ ಮಾಧ್ಯಮ ಪ್ರಮುಖ್ ಸಂದೇಶ್ ಶೆಟ್ಟಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾಕಾರ್ಯಕ್ರಮಗಳು ಜನರಿಗೆ ತಲುಪಬೇಕು ಹಾಗೂ ಕಷ್ಟಕಾಲದಲ್ಲಿ ಪಕ್ಷ ಯಾವತ್ತೂ ಜನರ ಜೊತೆಗೆ ಇರುತ್ತದೆ ಎಂಬ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಹಾಗೂ ಡೊಂಬಯ್ಯ ಅರಳ, ವಿಟ್ಲ ಪಡ್ನೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಸನತ್ ಕುಮಾರ್ ರೈ ಅನಂತಾಡಿ, ಪ್ರಧಾನ ಕಾರ್ಯದರ್ಶಿ ಅರವಿಂದ ರೈ ಮೂರ್ಜೆಬೆಟ್ಟು, ಬಂಟ್ವಾಳ ಮಾಧ್ಯಮ ಸಂಚಾಲಕರು ಪ್ರಮುಖ್ ರಂಜಿತ್ ಮೈರ, ಸಹ ಸಂಚಾಲಕರಾದ ದೇವಿಪ್ರಸಾದ್ ಶೆಟ್ಟಿ, ರಾಜ್ಯ ಎಸ್ಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ದಿನೇಶ್ ಅಮ್ಟೂರು, ಮಂಡಲ ಎಸ್ಸಿ ಮೋರ್ಚಾ ಅಧ್ಯಕ್ಷರು ಕೇಶವ ದೈಪಲ, ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಣೇಶ್ ಪೂಜಾರಿ ಹಾಗೂ ಬಿಜೆಪಿ ಪ್ರಮುಖರಾದ ಪುಷ್ಪರಾಜ್ ಚೌಟ, ಗಣೇಶ್ ರೈ ಮಾಣಿ, ಅಭಿಷೇಕ್ ರೈ, ಮಾಧವ ಮಾವೆ, ಗೀತಾ ಚಂದ್ರ ಶೇಖರ್ , ಸುಜಾತ ಪೂಜಾರಿ, ಮಮಿತ ಪೂಜಾರಿ, ಸಂಧ್ಯಾ, ಆನಂದ ಪಿಲಿಚಂಡಿಗುಡ್ಡೆ, ಅಣ್ಣಪ್ಪ ಪಿಲಿಚಂಡಿಗುಡ್ಡೆ ಮತ್ತು ಅನಂತಾಡಿಯ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದೇ ವೇಳೆ ದೊಡ್ಡಬೆಟ್ಟು ಹಾಗೂ ಪಿಲಿಚಂಡಿಗುಡ್ಡೆಯ ಕಾಲೋನಿಗಳಿಗೆ ಭೇಟಿ ನೀಡಿದ ಶಾಸಕ ರಾಜೇಶ್ ನಾಯ್ಕ್ ನೇತೃತ್ವದ ಬಿಜೆಪಿ ನಿಯೋಗ ನಿವಾಸಿಗಳ ಯೋಗಕ್ಷೇಮ ವಿಚಾರಿಸಿ, ರಕ್ಷಾಬಂಧನ ಆಚರಿಸಿದರು.