ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾವಳಪಡೂರು ಜಿಲ್ಲಾ ಪಂಚಾಯತ್ ಒಳಪಟ್ಟ ಕಾವಳಪಡೂರು ಪಂಚಾಯತ್ , ಪಂಜಿಕಲ್ಲು ಪಂಚಾಯತ್ ,ರಾಯಿ ಪಂಚಾಯತ್ ,ಸಂಗಬೆಟ್ಟ ಪಂಚಾಯತ್ ,ಕುಕ್ಕಿಪಾಡಿ ಪಂಚಾಯತ್,ಚೆನ್ನೈತೋಡಿ ಪಂಚಾಯತ್ ಒಳಪಟ್ಟ ಪಕ್ಷದ ಮುಖಂಡರ, ಮಾಜಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕ್ ಪಂಚಾಯತ್ ಸದಸ್ಯರ, ವಲಯ ಕಾಂಗ್ರೆಸ್ ಅಧ್ಯಕ್ಷರ, ಬೂತು ಸಮಿತಿ ಅಧ್ಯಕ್ಷರ, ಬೂತ್ ಸಮಿತಿ ಕಾರ್ಯದರ್ಶಿ,ಬೂತ್ ಸಮಿತಿ ಬಿ ಎಲ್ ಎ ಹಾಗೂ ಮುಂಚೂಣಿ ಘಟಕದ ಅಧ್ಯಕ್ಷರ,ಗ್ರಾಮ ಪಂಚಾಯತ್ ಅಧ್ಯಕ್ಷರ,ಉಪಾಧ್ಯಕ್ಷರ, ಚುನಾಯಿತ ಗ್ರಾಮ ಪಂಚಾಯತ್ ಸದಸ್ಯರ ,ಮುಖ್ಯ ಕಾರ್ಯಕರ್ತರ ಚುನಾವಣಾ ಪೂರ್ವ ತಯಾರಿ ಸಭೆಯು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಚಿವರಾದ ಬಿ ರಮಾನಾಥ ರೈ ಯವರ ನೇತೃತ್ವದಲ್ಲಿ ನಡೆಯಿತು.
ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಆಗುವ ದಬ್ಬಾಳಿಕೆಯನ್ನು ಖಂಡಿತ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಮುಂಬರುವ ಜಿಲ್ಲಾ ಹಾಗೂ ತಾಲೂಕ್ ಪಂಚಾಯತ್ ಚುನಾವಣೆಯಲ್ಲಿ ಎಲ್ಲಾ ಅಭ್ಯರ್ಥಿಗಳ ಗೆಲುವಿನಲ್ಲಿ ನಾವು ಸಂಪೂರ್ಣ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ವಿನಂತಿಸಿದರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಅಧ್ಯಕ್ಷತೆ ವಹಿಸಿ ಪ್ರತಿ ವಲಯ ಕಾಂಗ್ರೆಸ್ ಮಟ್ಟದಲ್ಲಿ ಕಡ್ಡಾಯವಾಗಿ ಸಭೆಗಳನ್ನು ನಡೆಸಿ ಪಕ್ಷದ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಮನವಿ ಮಾಡಿದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪದ್ಮಶೇಖರ್ ಜೈನ್ ,ಚಂದ್ರಪ್ರಕಾಶ್ ಶೆಟ್ಟಿ ,ತಾಲೂಕ್ ಪಂಚಾಯತ್ ಮಾಜಿ ಸದಸ್ಯರಾದ ಮಲ್ಲಿಕಾ ವಿ ಶೆಟ್ಟಿ,ಧನಲಕ್ಷ್ಮಿ ಸಿ ಬಂಗೇರ ,ಅಬ್ಬಾಸ್ ಆಲಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಮಾಯಿಲಪ್ಪ ಸಾಲ್ಯಾನ್,ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್ ,ಅಸಂಘಟಿತ ಕಾರ್ಮಿಕ ಸಂಘಟನೆಯ ಅಧ್ಯಕ್ಷರದ ರಾಮಚಂದ್ರ ಕಾಯರ್ ಮಾರ್, ಪ್ರದೇಶ ಕಾಂಗ್ರೆಸ್ ಕಾನೂನು ವಿಭಾಗದ ಕಾರ್ಯದರ್ಶಿಯಾದ ರಿಯಾಜ್ ಹುಸೈನ್,ಅಲ್ಪ ಸಂಖ್ಯಾತ ಸಮಿತಿ ಅಧ್ಯಕ್ಷರಾದ ಮಹಮ್ಮದ್ ಶರೀಫ್ ,ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಸದಾನಂದ ಶೆಟ್ಟಿ ,ಜಿಲ್ಲಾ ಸಹಕಾರಿ ಸಂಘದ ಸಂಚಾಲಕರಾದ ಸುದರ್ಶನ್ ಜೈನ್,ಹಿಂದುಳಿದ ವರ್ಗಗಳ ನೂತನ ಅಧ್ಯಕ್ಷರಾದ ತಿಮ್ಮಪ್ಪ ಪೂಜಾರಿ , ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ ಉಮೇಶ್ ಕುಲಾಲ್ ನಾವೂರ ,ರಜನಿ ಬಾಬು ಕುಲಾಲ್,ಉಪಾಧ್ಯಕ್ಷರುಗಳಾದ ಉದಯ್ ಕುಮಾರ್ ಶೆಟ್ಟಿ ,ವಲಯ ಕಾಂಗ್ರೆಸ್ ಅಧ್ಯಕ್ಷರುಗಳಾದ ದಿನೇಶ್ ಶೆಟ್ಟಿಗಾರ್,ನವೀನ್ ಶೆಟ್ಟಿ,ಸುರೇಶ್ ಶೆಟ್ಟಿ,ಚಂದ್ರಶೇಖರ್ ಕರ್ಣ ,ಸುಧೀರ್ ಶೆಟ್ಟಿ,ಗಣೇಶ್ ನಾಯಕ್ ಕಾರ್ಪೆ , ಮುಖಂಡರಾದ ಸುಧಾಕರ್ ಶೆಣೈ , ಮಹಮ್ಮದ್ ಸಂಗಬೆಟ್ಟು ,ಜಗದೀಶ್ ಕೊಯಿಲ ,ಮಹಾಬಲ ಬಂಗೇರ ,ವೆಂಕಪ್ಪ ಪೂಜಾರಿ , ಅಬ್ದುಲ್ ಲತೀಫ್ ವಗ್ಗ ,ಜಯಕರ ಶೆಟ್ಟಿ ,ದೇವಪ್ಪ ಪೂಜಾರಿ ಕರ್ಪೆ ,ಬಿ ಆರ್ ಅಂಚನ್ ,ತಿಲಕ್ ಪೂಜಾರಿ ,ಜಲಜ ಪೂಜಾರಿ ಸಿದ್ದಕಟ್ಟೆ,ವಾಸು ಪೂಜಾರಿ ಕಜೆಕಾರು ,ಕಿಶೋರ್ ಕುಮಾರ್ ವಾಮದಪದವು , ಬೂತ್ ಸ ಮಿತಿ ಅಧ್ಯಕ್ಷರುಗಳು,ಕಾರ್ಯದರ್ಶಿಗಳು,ಹಾಗೂ ಸದಸ್ಯರು ಮತ್ತು ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಮಿಕ ಸಂಘಟನೆಯ ಅಧ್ಯಕ್ಷರಾದ ಮನೋಹರ್ ಕುಲಾಲ್ ಧನ್ಯವಾದವಿತ್ತರು.