ಬಂಟ್ವಾಳ: ಶ್ರೀ ಕ್ಷೇ.ಧ. ಗ್ರಾ.ಯೋಜನೆ ಬಂಟ್ವಾಳ ತಾಲೂಕು , ಪೊಳಲಿ ವಲಯದ ಆಶ್ರಯದಲ್ಲಿ ಮಲ್ಲಿಗೆ ಕೃಷಿ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು.
ಕರಿಯಂಗಳ ಚಾರ್ಲಿ ಡಿಸೋಜ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮವನ್ನು ಯೋಜನೆಯ ಜಿಲ್ಲಾ ನಿರ್ದೇಶಕ ಶ್ರೀ ಸತೀಶ್ ಶೆಟ್ಟಿ ಅವರು ಉದ್ಘಾಟಿಸಿ “ಕೃಷಿ ವಿದ್ಯೆ ಅನ್ನುವುದು ಪ್ರಕೃತಿಯ ಜೊತೆ ಬೆರೆತು – ಅನುಭವಿಗಳ ಸಹವಾಸ, ಮಾರ್ಗದರ್ಶನದ ಮೂಲಕ ಸಿದ್ಧಿಸುವ ವಿದ್ಯೆ , ಪುಸ್ತಕದ ಶಿಕ್ಷಣ ಇದಕ್ಕೆ ಪೂರಕ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ” ಎಂದು ಹೇಳಿದರು. ತಾಲೂಕು ಯೋಜನಾಧಿಕಾರಿ ಜಯಾನಂದ. ಪಿ ಶುಭ ಹಾರೈಸಿದರು.
ನಿರ್ದೇಶಕ ಸತೀಶ್ ಶೆಟ್ಟಿ ಅವರು ಕೃಷಿ ತಾಕು ವಿನಲ್ಲಿ ಆಸಕ್ತ ರೈತರಿಗೆ ಪ್ರಾತ್ಯಕ್ಷಿಕೆ – ಮಾಹಿತಿ ನೀಡಿದರು. ಚಾರ್ಲಿ ಡಿಸೋಜ ದಂಪತಿ, ಒಕ್ಕೂಟ ಅದ್ಯಕ್ಷೆ ಪ್ರಮೀಳಾ, ತಾಲೂಕು ಕೃಷಿ ಅಧಿಕಾರಿ ಜನಾರ್ಧನ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸಪ್ನಾ, ಸೇವಾ ಪ್ರತಿನಿಧಿ ಅಶ್ವಿನಿ , ಸ್ಥಳೀಯ ಆಸಕ್ತ ರೈತರು ಭಾಗವಹಿಸಿದ್ದರು.
ವಲಯ ಮೇಲ್ವಿಚಾರಕಿ ಹರಿಣಾಕ್ಷಿ ರೈ ಸ್ವಾಗತಿಸಿ, ಸೇವಾ ಪ್ರತಿನಿಧಿ ರೇಖಾ ಶೆಟ್ಟಿ ವಂದಿಸಿದರು.