ಬಂಟ್ವಾಳ: ಪ್ರಾಥಮಿಕ ಆರೋಗ್ಯ ಕೇಂದ್ರ ಪುಂಜಾಲಕಟ್ಟೆ ಮತ್ತು ಪಿಲಾತಬೆಟ್ಟು ಗ್ರಾ.ಪಂ.ರ ಸಹಯೋಗದೊಂದಿಗೆ ನಯನಾಡು ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಕೋವಿಡ್ ಲಸಿಕೆ ಶಿಬಿರ ನಡೆಯಿತು.
ಒಟ್ಟು 302 ಜನರಿಗೆ ಉಚಿತ ಲಸಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಹರ್ಷಿಣಿ ಪುಷ್ಪಾ ನಂದ, ಉಪಾಧ್ಯಕ್ಷ ಲಕ್ಮೀನಾರಾಯಣ ಹೆಗ್ಡೆ, ಪಂ.ಸದಸ್ಯ ರಾದ ನೆಲ್ವಿಸ್ಟಾರ್ ಪಿಂಟೋ, ಶಾರದ, ಯೋಗೇಂದ್ರ ಕುಮಂಗಿಲ, ಶಾಂತಪ್ಪ ಪೂಜಾರಿ, ಹರೀಶ್ ಶೆಟ್ಟಿ ಸಿರಿಮನೆ ,
ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ಡಾ! ರಿತೇಶ್ , ಪಂ.ಅಭಿವೃದ್ಧಿ ಅಧಿಕಾರಿ ಮೋನಪ್ಪ , ಆರೋಗ್ಯ ಕಾರ್ಯಕರ್ತೆ ಸಮೀಳಾ ಪಿ.ವೈ, ಆಶಾ ಕಾರ್ಯ ಕರ್ತೆ ಪ್ರಮೀಳಾ, ಗುಣವತಿ, ಭವ್ಯ, ಗ್ರಾಮಪಂಚಾಯತ್ ಸಿಬ್ಬಂದಿ ಯರಾದ ಹೇಮಂತ್ ಕುಮಾರ್ ಪಿಲಾತಬೆಟ್ಟು, ಸುಹಾಸ್ ಮತ್ತು ದೀಕ್ಷಿತ್ ಶೆಟ್ಟಿ ಉಪಸ್ಥಿತರಿದ್ದರು