ಫಲ್ಗುಣಿ ಸೇವಾ ಸಮಿತಿ(ರಿ.) ಗಣೇಶ ಕಟ್ಟೆ , ಕಾಜಿಗುಳಿ , ಬಡಗಬೆಳ್ಳೂರು ಹಾಗೂ ಫಲ್ಗುಣಿ ಮಹಿಳಾ ವೇದಿಕೆ, ಇದರ ವತಿಯಿಂದ ಸಮಿತಿಯ ವಠಾರದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ದಲ್ಲಿ ಬೆಳ್ಳೂರು ಸೇವಾ ಸಂಘ(ರಿ.) ದ ಅಧ್ಯಕ್ಷ ರಾದ ನಂದರಾಮ ರೈ, ಹಾಗೂ ಬಂಟ್ವಾಳ ಬಿಜೆಪಿ ಯುವ ಮೋರ್ಚ ದ ಪ್ರಧಾನ ಕಾರ್ಯದರ್ಶಿ ಯಾದ ಅಶ್ವಥ್ ರಾವ್ ಬಾಳಿಕೆ ಇವರು ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು..ಧ್ವಜಾರೋಹಣ ವನ್ನು ನಂದರಾಮ ರೈ ಯವರು ಮಾಡಿದರು.ಈ ಸಂದರ್ಭದಲ್ಲಿ ಸಂಘದ ಅಧ್ಕಕ್ಷರಾದ ಸುಧೀರ್ ಸಾಲಿಯಾನ್ ಹಾಗೂ ಯಶೋಧ ಅಂಚನ್ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.