ರಾಜ್ಯ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾಗಿ 18 ಬಾರಿ ಪೂರ್ತಿ ರಾಜ್ಯ ಹಾಗೂ ರಾಜ್ಯದ 311 ಮಂಡಲಗಳಲ್ಲಿ 300 ಮಂಡಲದ ಪ್ರವಾಸ ಮಾಡಿ ತನ್ನ ಅಧಿಕಾರದ ಅವಧಿಯ ಎಲ್ಲ ಚುನಾವಣೆಗಳಲ್ಲಿ ಸಂಘಟನಾತ್ಮಕ ಗೆಲುವು ಸಾಧಿಸಿ ಯಶಸ್ವಿ 2 ವರ್ಷ ಪೂರೈಸಿದ ನಳಿನ್ ಕುಮಾರ್ ಕಟೀಲ್ ರವರು ಈ ದಿನ ಖಾಸಾಗಿ ಕಾರ್ಯಕ್ರಮಕ್ಕಾಗಿ ಪೆರಾಜೆಯ ಶ್ರೀ ರಾಘವೇಶ್ವರ ಮಠಕ್ಕೆ ಬೇಟಿ ನೀಡಿದರು.
ಈ ಸಂಧರ್ಭದಲ್ಲಿ ಸಂಘದ ಹಿರಿಯರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕರವರು ನಳಿನ್ ಕುಮಾರ್ ರವರನ್ನು ಶಾಲು ಹಾಕಿ ಗೌರವಿಸಿ ಆಶೀರ್ವಾದಿಸಿದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಡಾ.ಕಮಲ ಪ್ರ.ಭಟ್, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಕ್ಷೇತ್ರ ಕಾರ್ಯದರ್ಶಿಗಳಾದ ಗಣೇಶ್ ರೈ ಮಾಣಿ, ಪುರುಷೋತ್ತಮ ಶೆಟ್ಟಿ, ಕೊಂಕೋಡಿ ಪದ್ಮನಾಭ ಭಟ್, ಪುಷ್ಪರಾಜ್ ಚೌಟ, ರಾಜಾರಾಮ ಭಟ್, ನಾರಾಯಣ ಶೆಟ್ಟಿ, ವಿನೀತ್ ಮುಂತಾದವರು ಉಪಸ್ಥಿತರಿದ್ದರು.