ಹಾಡಿದೆ ಹಾಡಿವೆ ಶಿಲೆಗಳು ಸಂಗೀತ ಹಾಡಿದೆ
ನುಡಿದಿದೆ ನುಡಿದಿದೆ ಇತಿಹಾಸವನು ನುಡಿದಿದೆ//
ರಾಜರ ಕಾರ್ಯಕೆ ಪೌರುಷ ಸ್ಥೈರ್ಯಕೆ ನಾನಾದೆ
ನೋಡಲು ಬನ್ನಿರಿ ನನ್ನಯ ಧೈರ್ಯವ ಎನ್ನುತ್ತಿದೆ
ಸವಿಯನು ಆಡಿ ನೆಮ್ಮದಿ ನೀಡಿ
ಧೈರ್ಯವ ತುಂಬುತ ಮನದಲಿ ಹೀಗೇ…ಹಾಡಿದೆ..//
ಕಲ್ಲನು ಕೊರೆದು ಕನ್ನಡಿ ಮಾಡಿ
ಅಂದವ ತುಂಬಿ ಜೋಡಿಸಿ ಕೂಡಿ
ನಗುತಲಿ ನಿಂತಿಹ ದರ್ಪಣ ಸುಂದರಿ ನಾನಾದೆ..
ನೋಡಿರಿ ನನ್ನಯ ಅಂದದ ಚೆಲುವನು ನೀವಾಗಿ…ಹಾಡಿದೆ…//
ರಾಣಿಯ ನೃತ್ಯ ನೋಡಲು ಬೇಕು
ರಾಜನ ಬುದ್ಧಿ ಕಲಿಯಲು ಬೇಕು
ಪ್ರಜೆಗಳ ಹಿತವದು ರಾಜರ ಧರ್ಮವು ನೀ ಕೇಳು…
ಎಲ್ಲಕು ದೇವರ ಭಕ್ತಿಯೇ ಎಂದಿಗೂ ಮೇಲೂ…ಹಾಡಿದೆ…//
@ಪ್ರೇಮ್@