ಶ್ರೀರಾಮ ವಿದ್ಯಾಕೇಂದ್ರಕ್ಕೆ ನೂತನ ಸಚಿವರಾದ ಅಂಗಾರರವರು ಭೇಟಿ ನೀಡಿ ಡಾ ಪ್ರಭಾಕರ ಭಟ್ ರವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ಅವರನ್ನು ಶಾಲುಹೊದಿಸಿ ಸನ್ಮಾನಿಸಲಾಯಿತು.
ನಂತರ ಅವರೊಂದಿಗೆ ಕಚೇರಿಯಲ್ಲಿ ವಿವಿಧ ವಿಷಯಗಳ ಬಗ್ಗೆ ಮಾತುಕತೆ. ನಡೆಸಿದರು. ಈ ಸಂದರ್ಭದಲ್ಲಿ ಹಿರಿಯರಾದ ಡಾ ಕಮಲಾ ಪ್ರ.ಭಟ್, ಆಡಳಿತ ಮಂಡಳಿ ಸದಸ್ಯರಾದ ಗೋಪಾಲ ಶೆಣೈ, ಚೆನ್ನಪ್ಪ ಕೋಟ್ಯಾನ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಪುರುಷೋತ್ತಮ ಗಟ್ಟಿ, ಮುಖ್ಯೋಪಾಧ್ಯಾರಾದ ರವಿರಾಜ್ ಕನಂತೂರು ಉಪಸ್ಥಿತರಿದ್ದರು.