Friday, April 5, 2024

ಐಸಿಯು ಬಸ್ಸು ಹಾಗೂ ಕಿಟ್ ವಿತರಣೆಯಲ್ಲಿ ತಾರತಮ್ಯ ನೀತಿ: ಮಾಜಿ ಸಚಿವ ರಮಾನಾಥ ರೈ ನೇತ್ರತ್ವದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ

ಬಂಟ್ವಾಳ: ಬಂಟ್ವಾಳದಲ್ಲಿ ಐಸಿಯು ಬಸ್ಸು ಆರೋಗ್ಯ ಸೇವೆ ಹಾಗೂ ಕಾರ್ಮಿಕ ಕಿಟ್ ವಿತರಣೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಬಿ.ಸಿ.ರೋಡಿನಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಶಾಸಕರು ಸರಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸದೆ ತಾರತಮ್ಯ ಮಾಡುತ್ತಿದ್ದು, ಅವರ ವಿರುದ್ಧ ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಗೆ ದೂರು ನೀಡಿದ್ದೇವೆ. ಅದಕ್ಕೆ ಸ್ಪಂದನೆ ಸಿಗದೇ ಇದ್ದಲ್ಲಿ ಐಸಿಯು ಬಸ್ಸಿನ ಎದುರು ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸುವುದಾಗಿ ಮಾಜಿ ಸಚಿವ ರಮಾನಾಥ ರೈ ಎಚ್ಚರಿಸಿದರು.
ಐಸಿಯು ಬಸ್ಸು ಬಿಜೆಪಿ ಅಧಿಕಾರ ಇರುವ ಪಂಚಾಯತ್ ಗಳಲ್ಲಿ ಅಲ್ಲೇ ಆರೋಗ್ಯ ಸೇವೆ ನೀಡುತ್ತದೆ. ಅಧಿಕಾರ ಇಲ್ಲದ ಕಡೆ ತಮಗೆ ಬೇಕಾದಲ್ಲಿಗೆ ಹೋಗಿತ್ತದೆ. ಕಿಟ್ ಗಳನ್ನು ತಮಗೆ ಬೇಕಾದವರು ಕಾರಿನಲ್ಲಿ ಕೊಂಡುಹೋಗಿ ಕೊಡುತ್ತಿದ್ದಾರೆ. ೨ ಸಾವಿರ ರೂಪಾಯಿ ಮೌಲ್ಯದ ಕಿಟ್ ನಲ್ಲಿ ಫಲಾನುಭವಿಗಳಿಗೆ ತಲುಪುವಾಗ ೬೦೦-೭೦೦ ರೂ.ಗಳ ವಸ್ತುಗಳು ಮಾತ್ರ ಇರುತ್ತದೆ. ಉಳಿದವು ಎಲ್ಲಿಗೆ ಹೋಗಿದೆ ಎಂಬುದಕ್ಕೆ ಉತ್ತರಿಸಬೇಕಿದೆ.
ನಮ್ಮ ಅವಧಿಯಲ್ಲೂ ಸಾಕಷ್ಟು ಸೌಲಭ್ಯಗಳ ವಿತರಣೆಯಾಗಿದ್ದು, ಆದರೆ ಎಲ್ಲೂ ಕೂಡ ರಾಜಕೀಯ ಮಾಡಿಲ್ಲ. ರಾಜಧರ್ಮ ಎಂದು ಹೇಳುವವರ ಪ್ರಕಾರ ರಾಜಕೀಯ ಮಾಡುವುದೇ ರಾಜಧರ್ಮವಾಗಿದೆ.
೯೪ಸಿ ವಿತರಣೆಯಲ್ಲೂ ರಾಜಕೀಯ ಮಾಡುತ್ತಿದ್ದು, ಇವರ ಶಕ್ತಿಕೇಂದ್ರವರು ಹೇಳಿದವರಿಗೆ ಮಾತ್ರ ಹಕ್ಕುಪತ್ರ ನೀಡಲಾಗುತ್ತಿದೆ. ನಮ್ಮ ಅವಧಿಯಲ್ಲಿ ನಿಜವಾದ ಫಲಾನುಭವಿಗಳಿಗೆ ವಿತರಿಸಿದ್ದೇವೆ. ಯಾವ ಶಕ್ತಿಕೇಂದ್ರವೂ ಇರಲಿಲ್ಲ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ,ತಾ.ಪಂ.ಮಾಜಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಯಂತಿ ಪೂಜಾರಿ, ಲವೀನಾ ವಿಲ್ಮ ಮೊರಾಸ್ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.

More from the blog

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...

ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಭೇಟಿ

ಬಂಟ್ವಾಳ ತಾಲೂಕಿನ ಶಕ್ತಿಕೇಂದ್ರವಾದ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಬಿಜೆಪಿ...

ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್ “ಹೋಟೆಲ್ ಅನ್ನಪೂರ್ಣ” ಶುಭಾರಂಭ

ಬಂಟ್ವಾಳ ತಾಲೂಕಿನ ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ಅರುಣ್ ಕುಮಾರ್, ಮಹೇಶ್ ಕುಮಾರ್, ಜನಾರ್ಧನ್ ಪೊಸೊಳಿಗೆ ಮಾಲಕತ್ವದ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್. "ಹೋಟೆಲ್ ಅನ್ನಪೂರ್ಣ" ಶುಭಾರಂಭಗೊಂಡಿತು. ಶ್ರೀ...

ನಂದನಹಿತ್ಲು ವೈದ್ಯನಾಥ, ಅರಸು, ಜುಮಾದಿ ಬಂಟ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ

ಬಂಟ್ವಾಳ: ಇಲ್ಲಿನ ಪೇಟಯಲ್ಲಿರುವ ನಂದನಹಿತ್ಲು ವೈದ್ಯನಾಥ,ಅರಸು,ಜುಮಾದಿ ಬಂಟ ದೈವಸ್ಥಾನದಲ್ಲಿ ಕಾಲವಧಿಯ ನೇಮೋತ್ಸವವು ಗುರುವಾರ ಬೆಳಗ್ಗೆ ಸಂಪನ್ನಗೊಂಡಿತು. ಕ್ಷೇತ್ರದ ತಂತ್ರಿಗಳಾದ ಪೊಳಲಿ ಗಿರಿಪ್ರಕಾಶ್ ತಂತ್ರಿವರ ನೇತೃತ್ವದಲ್ಲಿ‌ ನಡೆದ ವಿವಿಧ ವೈಧಿಕ ವಿಧಿವಿಧಾನಗಳ ಬಳಿಕ ಮೊದಲದಿನ ಶ್ರೀ...