ಬಂಟ್ವಾಳ: ಯುವಕನೋರ್ವ ಬೈಕಿನಲ್ಲಿ ಸ್ನೇಹಿತ ನ ಜೊತೆ ಹೋಗುತ್ತಿರುವ ವೇಳೆ ಪುಂಜಾಲಕಟ್ಟೆ ಪೇಟೆಯಲ್ಲಿ ತಂಡವೊಂದು ಅಡ್ಡ ಕಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಪುಂಜಾಲಕಟ್ಟೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಿರಣ್ ಕುಮಾರ್ ಅವರು ಕುಕ್ಕಳ ಮನೆಯಿಂದ ಸ್ನೇಹಿತ ನಿತಿನ್ ಎಂಬವರ ಜೊತೆ ಬೈಕಿನಲ್ಲಿ ಹೋಗುತ್ತಿರುವಾಗ ಪುಂಜಾಲಕಟ್ಟೆ ಪೇಟೆಯಲ್ಲಿ ಹತ್ತು ಜನರ ಅಪರಿಚಿತ ತಂಡ ಅಡ್ಡಕಟ್ಟಿ ಬೈಕ್ ನಿಲ್ಲಿಸಿ ಅವ್ಯಾಚ್ಚ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ .
ಹಲ್ಲೆ ಗೊಳಗಾದ ಕಿರಣ್ ಅವರ ತಲೆಗೆ ಗಾಯಾವಾಗಿದ್ದು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೋಲಿಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.