ಬಂಟ್ವಾಳ: ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ಆರಾಧ್ಯ ದೈವದ ಬಗ್ಗೆ ಅಶ್ಲೀಲ ವಾಗಿ ಚಿತ್ರಿಸಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ವಿಶ್ವ ಹಿಂದೂ ಪರಿಷತ್ತ್ ಬಜರಂಗದಳ ಬಂಟ್ವಾಳ ಪ್ರಖಂಡ ಒತ್ತಾಯಿಸಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ಆರಾಧನೆಯ ದೈವ ದೇವರುಗಳ ಬಗ್ಗೆ ಅಶ್ಲೀಲವಾಗಿ ಚಿತ್ರಿಸಿ ಬಹುಸಂಖ್ಯಾತ ಹಿಂದೂಗಳ ಮನಸ್ಸಿಗೆ ಘಾಸಿ ಉಂಟಾಗಿದೆ. ಇಂತಹ ಸಂದೇಶಗಳು ಜಿಲ್ಲೆಯ ಕೋಮು ಸೌವಹಾರ್ದತೆಗೆ ದಕ್ಕೆ ತರುವಂತದ್ದಾಗಿದ್ದು ಈ ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಹಾಗೂ ಇನ್ನು ಮುಂದಕ್ಕೆ ಇಂತಹ ಅಶ್ಲೀಲ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಮಾರುಕಲಿಸದಂತೆ ಪೋಲೀಸರು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಬಜರಂಗದಳ ಜಿಲ್ಲಾ ಸಹ ಸಂಚಾಲಕರು ಗುರುರಾಜ್ ಬಂಟ್ವಾಳ, ವಿ. ಹಿಂ. ಪ ಬಂಟ್ವಾಳ ಪ್ರಖಂಡ ಕಾರ್ಯದರ್ಶಿ ಸುರೇಶ್ ಬೆಂಜನಪದವು, ಬಜರಂಗದಳ ಬಂಟ್ವಾಳ ಪ್ರಖಂಡ ಸಂಚಾಲಕರು ಶಿವಪ್ರಸಾದ್ ತುಂಬೆ, ಬಜರಂಗದಳ ಬಂಟ್ವಾಳ ಪ್ರಖಂಡ ಪ್ರಮುಖರಾದ ಪ್ರಸಾದ್ ಶಿವಾಜಿನಗರ, ರತೀಶ್ ರಾಮಲಕಟ್ಟೆ, ಕಿರಣ್ ಪೊಡಿಕಲ, ವಿನೀತ್ ತುಂಬೆ, ಹಾಗೂ ಬಜರಂಗದಳ ಬಂಟ್ವಾಳ ನಗರ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.