Saturday, April 6, 2024

ಕೊರೊನಾಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ದಂಪತಿ ಕೊನೆ ಗಳಿಗೆಯಲ್ಲಿ ಕಮೀಷನರ್ ಗೂ ಕೊಟ್ಟಿದ್ದರು ಮಾಹಿತಿ‼️ ಪೋಲಿಸರು ಲೊಕೇಷನ್ ಹುಡುಕಾಡುವ ಮೊದಲೇ ಇಬ್ಬರೂ ಸಾವಿಗೆ ಶರಣು‼️ ಡೆತ್ ನೋಟ್ ನಲ್ಲಿದೆ ಆಕೆ ಪಟ್ಟ ಆ ನೋವಿನ ಮಾತುಗಳು…

ಸುರತ್ಕಲ್: ಕೊರೊನಾಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ದಂಪತಿ ಕೊನೆ ಗಳಿಗೆಯಲ್ಲಿ ಕಮೀಷನರ್ ಗೂ ಕೊಟ್ಟಿದ್ದರು ಮಾಹಿತಿ‼️ಪೋಲಿಸರು ಲೊಕೇಷನ್ ಹುಡುಕಾಡುವ ಮೊದಲೇ ಇಬ್ಬರೂ ಸಾವಿಗೆ ಶರಣು‼️ಡೆತ್ ನೋಟ್ ನಲ್ಲಿದೆ ಆಕೆ ಪಟ್ಟ ಆ ನೋವಿನ ಮಾತುಗಳು…

ಕೋವಿಡ್ ಸೋಂಕಿನ ಭಯದಿಂದ ದಂಪತಿ ಆತ್ಮ ಹತ್ಯೆಗೆ ಶರಣಾದ ದಾರುಣ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ವ್ಯಾಪ್ತಿಯ ಚಿತ್ರಾಪುರದಲ್ಲಿ ಸಂಭವಿಸಿದೆ.
ಸಾವಿಗೆ ಶರಣಾಗುವ ಮುನ್ನ ದಂಪತಿ ಡೆತ್ ನೋಟನ್ನು ಬರೆದಿಟ್ಟಿದ್ದಾರೆ. ಜೊತೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೂ ವಾಯ್ಸ್ ಮೆಸೆಜ್ ಕಳಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್ ಆಯುಕ್ತರು ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವಿ ಮಾಡಿದ್ದಾರೆ ಮತ್ತು ಇವರ ವಿಳಾಸ ಪತ್ತೆ ಹಚ್ಚಿ ರಕ್ಷಿಸಲು ಪೋಲಿಸ್ ಸಿಬಂದಿಗಳನ್ನು ಅಲರ್ಟ್ ಮಾಡಿದ್ದಾರೆ.

ಆದರೆ ಪೋಲಿಸರು ಅಪಾರ್ಟ್ ಹುಡುಕಿ ತಲುಪುವಷ್ಟರಲ್ಲಿ ದಂಪತಿ ನೇಣಿಗೆ ಶರಣಾಗಿ ಇಹಲೋಕ ತ್ಯಜಿಸಿದ್ದಾರೆ. ಮೃತರನ್ನು ಆರ್ಯ ಮತ್ತು ಗುಣ ಸುವರ್ಣ ಎಂದು ಗುರುತಿಸಲಾಗಿದ್ದು, ಸುರತ್ಕಲ್ ಸಮೀಪದ ರಹೇಜಾ ಅಪಾರ್ಟ್‌ ಮೆಂಟ್‌ ನಲ್ಲಿ ನೇಣಿಗೆ ಶರಣಾಗಿದ್ದಾರೆ.

ದಂಪತಿ ಬರೆದ ಡೆತ್ ನೋಟ್ ಸಾರಾಂಶ ಈ ರೀತಿ ಇದೆ :
ಕಳೆದ ಒಂದು ವಾರದಿಂದ ನಮಗೆ ಕೋವಿಡ್ ಸೋಂಕಿನ ಲಕ್ಷಣ ಕಂಡುಬಂದಿದೆ. ನನ್ನ ಗಂಡನಿಗೂ ಅದೇ ರೀತಿಯ ಲಕ್ಷಣಗಳಿವೆ. ಮಾದ್ಯಮಗಳಲ್ಲಿ ಬರುವ ಸುದ್ದಿಗಳನ್ನು ನೋಡಿ ಹೆದರಿದ್ದೇವೆ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇವೆ. ನನಗೆ ಸಿಸೇರಿಯನ್ ಆಗಿ ಮಕ್ಕಳ ಸಮಸ್ಯೆ ಆಗಿದ್ದು, ಎಲ್ಲರೂ ಅದನ್ನೇ ಕೇಳುತ್ತಾರೆ, ಅದಕ್ಕಾಗಿ ಯಾರ ಜೊತೆಗೂ ಬೆರೆಯುವುದಿಲ್ಲ. ನಮ್ಮ ಅಂತ್ಯಕ್ರಿಯೆಗೆ ಒಂದು ಲಕ್ಷ ರೂ. ಇಟ್ಟಿದ್ದು ನಮ್ಮ ಅಂತ್ಯಕ್ರಿಯೆಗೆ ಬಳಸಿಕೊಳ್ಳಿ, ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸಿ.

ಶರಣ್ ಪಂಪೈಲ್ ಮತ್ತು ಸತ್ಯಜಿತ್ ಸುರತ್ಕಲ್ ಅವರೊಂದಿಗೆ ಪೊಲೀಸ್ ಆಯುಕ್ತ ಶಶಿಕುಮಾರ್ ಗೂ ಅಂತ್ಯಕ್ರಿಯೆಗೆ ಸಹಕರಿಸಲು ಮನವಿ ಮಾಡಿದ್ದಾರೆ. ಮನೆಯಲ್ಲಿದ್ದ ವಸ್ತುಗಳನ್ನು ಬಡವರಿಗೆ ನೀಡಿ ಎಂದು ಪತ್ರದಲ್ಲಿ ಬರೆಯಲಾಗಿದೆ.

More from the blog

ಗ್ರಾಮೀಣ ಪುನರ್ವಸತಿ ಕಾರ್ಯಕತರಿಗೆ ಮತದಾನ ಜಾಗೃತಿ

ಬಂಟ್ವಾಳ ತಾಲೂಕು ಪಂಚಾಯತ್, ತಾಲೂಕು ಕಚೇರಿ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಗ್ರಾಮೀಣ ಪುನರ್ವಸತಿ ಕಾರ್ಯಕತರಿಗೆ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ತಾಲೂಕು ಆಡಳಿತ ಸೌಧದಿಂದ ಹಮ್ಮಿಕೊಂಡ ಜಾಥಾ ಬಿ.ಸಿ.ರೋಡ್ ಖಾಸಗಿ ಬಸ್ ನಿಲ್ದಾಣ...

ಭಾರತೀಯ ಜನತಾ ಪಾರ್ಟಿ ಸ್ಥಾಪನಾ ದಿನದ ಅಂಗವಾಗಿ ಬಂಟ್ವಾಳ ಮಂಡಲ ಬಿಜೆಪಿ ಕಾರ್ಯಾಲಯದಲ್ಲಿ ಧ್ವಜಾರೋಹಣ

ಭಾರತೀಯ ಜನತಾ ಪಾರ್ಟಿ ಸ್ಥಾಪನಾ ದಿನದ ಅಂಗವಾಗಿ ಬಂಟ್ವಾಳ ಮಂಡಲದ ಅಧ್ಯಕ್ಷರಾದ ಆರ್ ಚೆನ್ನಪ್ಪ ಕೋಟ್ಯಾನ್ ಅವರು ಮಂಡಲ ಬಿಜೆಪಿ ಕಾರ್ಯಾಲಯದಲ್ಲಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ದೇವಪ್ಪ ಪೂಜಾರಿ,ರವೀಶ್ ಶೆಟ್ಟಿ, ಡೊಂಬಯ...

ರಾಜ್ಯದಲ್ಲಿ 60 ಮಂದಿಯ ನಾಮಪತ್ರ ತಿರಸ್ಕೃತ

ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಲ್ಲಿ 358 ಅಭ್ಯರ್ಥಿಗಳು 492 ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ 13 ಕ್ಷೇತ್ರದಲ್ಲಿ ಪರಿಶೀಲನೆ ಕಾರ್ಯ ಮುಗಿದಿದೆ. 276 ನಾಮಪತ್ರಗಳು ಕ್ರಮಬದ್ಧವಾಗಿದ್ದು, 60 ನಾಮಪತ್ರಗಳು...

ಮಂಗಳೂರು: ‘ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್’ ಸಂಸ್ಥೆಯ ಸಂಗೀತ ಕ್ಷೇತ್ರದಲ್ಲಿ ಸಂಪುಟ 2′ ರ ನೂತನ ಕೃತಿ ಲೋಕಾರ್ಪಣೆ

ಮಂಗಳೂರು: ಮಂಗಳೂರಿನ ಕುಲಶೇಖರದಲ್ಲಿರುವ 'ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್' ಸಂಸ್ಥೆಯ ಪ್ರಕಾಶನದಲ್ಲಿ ಇಂಗ್ಲಿಷ್, ಹಿಂದಿ ಮತ್ತು ಕನ್ನಡದ ಜನಪ್ರಿಯ ಹಾಡುಗಳನ್ನು ಪಾಶ್ಚಿಮಾತ್ಯ ನೊಟೇಶನ್ ಮೂಲಕ ವಯಲಿನ್, ಗಿಟಾರ್ ಮತ್ತು ಕೀಬೋರ್ಡ್ ನಲ್ಲಿ...