ಬಂಟ್ವಾಳ: ಚಿಕನ್ ಸ್ಟಾಲ್ ನ ಬಾಡಿಗೆ ನೀಡಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಅಂಗಡಿಗೆ ನುಗ್ಗಿ ಐದು ಜನರ ತಂಡವೊಂದು ಮಾಲಕನ ಮೇಲೆ ಹಲ್ಲೆ ನಡೆಸಿದೆ ಎಂಬ ದೂರಿಗೆ ಪ್ರತಿ ದೂರು ದಾಖಲಾಗಿದ್ದು ಖಾಲಿ ಇರುವ ಅಂಗಡಿಯಲ್ಲಿ ಬೀಫ್ ಮಾರಾಟದ ಶಾಪ್ ಮಾಡಲು ಬಾಡಿಗೆಗೆ ನೀಡಿಲ್ಲ ಎಂಬ ಕಾರಣಕ್ಕೆ ಮಾಲಕನ ಮೇಲೆ ಐದು ಜನರ ತಂಡ ಹಲ್ಲೆ ನಡೆಸಿದೆ ಎಂದು ದೂರು ನೀಡಿದ್ದಾರೆ.
ನಂದಾವರ ಜಂಕ್ಷನ್ ನಲ್ಲಿ ಆರೀಫ್ ಎಂಬವರು ಅಬೂಬಕರ್ ಎಂಬವರಿಗೆ ಸೇರಿದ ಕಟ್ಟಡದ ಲ್ಲಿ ಬಿಸ್ಮಲ್ಲಾ ಎಂಬ ಹೆಸರಿನ ಚಿಕನ್ ಸ್ಟಾಲ್ ನಡೆಸುತ್ತಿದ್ದು 8 ತಿಂಗಳ ಬಾಡಿಗೆ ಬಾಕಿಯಿತ್ತು.
ಬಾಡಿಗೆ ವಿಚಾರಕ್ಕೆ ಮಾಲಕರು ತಕರಾರು ಮಾಡಿದಕ್ಕೆ ಅಂಗಡಿಗೆ ನೀಡಿದ 2 ಲಕ್ಷ ಭದ್ರತಾ ಠೇವಣಿ ಯಲ್ಲಿ ಬಾಡಿಗೆ ಕಡಿತಗೊಳಿಸಿ ವಾಪಸು ಉಳಿದ ಹಣ ನೀಡಿ ಎಂದು ತಿಳಿಸಲಾಗಿತ್ತು.
ಆದರೆ ಕಟ್ಟಡದ ಮಾಲಕ ಅಬೂಬಕರ್ ಸೇರಿದಂತೆ ಲತೀಫ್ , ಇರ್ಷಾದ್, ಝಾಹೀರ್ ಹಾಗೂ ಅಬ್ದುಲ್ ರಹಮಾನ್ ಯಾನೆ ಅದ್ದು ಅವರ ಗುಂಪು ರಾತ್ರಿ 9.45 ಕ್ಕೆ ಅಂಗಡಿಗೆ ನುಗ್ಗಿ ಬಾಡಿಗೆ ವಿಚಾರಕ್ಕೆ ಹಲ್ಲೆ ನಡೆಸಿದೆ ಎಂದು ದೂರು ನೀಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಅಬೂಬಕರ್ ಎಂಬವರ ಮೇಲೆ ಇಕ್ಬಾಲ್ , ಆರೀಫ್, ಇರ್ಫಾನ್, ಶಾಕೀಬ್ ಎಂಬವರು ಮನೆಗೆ ಬಂದು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ.
ಅಬೂಬಕರ್ ಅವರಿಗೆ ಸೇರಿ ದ ಕಟ್ಟಡದಲ್ಲಿ ಖಾಲಿಯಿರುವ ಅಂಗಡಿಯ ಕೋಣೆಯಲ್ಲಿ ಬೀಫ್ ಮಾರಾಟ ದ ಅಂಗಡಿ ತೆರೆಯಲು ಅವಕಾಶ ನೀಡಬೇಕು ಒತ್ತಾಯಿಸಿದರು.
ಆದರೆ ಮಾಲಕ ಅಬೂಬಕರ್ ಅವರು ನಿರಾಕರಣೆ ಮಾಡಿದ್ದಕ್ಕೆ ಕಾಲರ್ ಹಿಡಿದು ಹಲ್ಲೆ ನಡೆಸಿದ್ದಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ದೂರು ನೀಡಲಾಗಿದೆ.
ಎರಡು ತಂಡ ನೀಡಿದ ದೂರಿನಂತೆ ಪ್ರಕರಣ ದಾಖಲು ಮಾಡಲಾಗಿದೆ.