ಬಂಟ್ವಾಳ: ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ಅವರು ಧರ್ಮ ಪತ್ನಿ ಜೊತೆಯಲ್ಲಿ ಅಗಸ್ಟ್ 3 ರಂದು ಮಂಗಳವಾರ ಶ್ರೀ ಪಣೋಲಿಬೈಲು ಕಲ್ಲುರ್ಟಿ ದೇವಸ್ಥಾನ ಕ್ಕೆ ಬೇಟಿ ನೀಡಿ ದೈವದ ಪ್ರಸಾದ ಪಡೆದುಕೊಂಡರು.
ಇವರ ಜೊತೆಯಲ್ಲಿ ಉಡುಪಿ ಜಿಲ್ಲಾ ಉಪಾಧ್ಯಕ್ಷೆ ಬಿಜೆಪಿ ಪ್ರಮುಖ ರಾದ ನಯನ ಗಣೇಶ್, ಕಾಪು ಯುವ ಮೋರ್ಚಾ ಅಧ್ಯಕ್ಷ ಸಚಿನ್ ಪಿತ್ರೋಡಿ, ಕಾಪು ಹಿಂದುಳಿದ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರವಿ ಸಾಲಿಯಾನ್, ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯ ರಮಾನಂದ ಕ್ಷೇತ್ರ ಕ್ಕೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಮ್ಮ, ಅರ್ಚಕರಾದ ವಾಸುಮೂಲ್ಯ, ನಾರಾಯಣ ಮೂಲ್ಯ ಮತ್ತು ಮೋನಪ್ಪ ಮೂಲ್ಯ , ವಿಶ್ವಹಿಂದೂಪರಿಷತ್ ತಾಲೂಕು ಉಪಾಧ್ಯಕ್ಷ ಲೋಹಿತ್ ಪಣೋಲಿಬೈಲು, ಜಯಶೆಟ್ಟಿ ಪಣೋಲಿಬೈಲು ಮತ್ತಿತರರು ಉಪಸ್ಥಿತರಿದ್ದರು.