ಬಂಟ್ವಾಳ : ಮಹಿಳೆಯರು ಪಕ್ಷದ ಬೇರೆ ಬೇರೆ ಸ್ಥರಗಳಲ್ಲಿ ಲಾಭ ಪಡೆದುಕೊಂಡಿದ್ದರೂ,ಪಕ್ಷ ಸಂಘಟನೆಯ ಕಾರ್ಯದಲ್ಲಿ ಸಕ್ರೀಯವಾಗದಿರುವುದಿಂದ ಮಹಿಳಾ ಕಾಂಗ್ರೇಸ್ ನಿರೀಕ್ಷಿತ ಯಶಸ್ಸು ಕಂಡಿಲ್ಲ, ಈ ನಿಟ್ಟಿನಲ್ಲಿ ಮಹಿಳೆಯರು ಇಚ್ಛಾಶಕ್ತಿ ಬೆಳೆಸಿಕೊಂಡು ಮುನ್ನಡೆಯಬೇಕಾಗಿದೆ ಎಂದು ಕೆಪಿಸಿಸಿಯಿಂದ ಬಂಟ್ವಾಳ ಕ್ಷೇತ್ರದ ಉಸ್ತುವಾರಿಯಾಗಿರುವ ಸವಿತಾ ರಮೇಶ್ ಹೇಳಿದ್ದಾರೆ.ಮಂಗಳವಾರ ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಆಶ್ರಯದಲ್ಲಿ 75 ನೇ ವರ್ಷದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಯೋಜಿಸಲಾದ ಬೃಹತ್ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಐದು ಹಂತಗಳಲ್ಲಿ ಪಕ್ಷವು ಸಂಘಟನೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಎಲ್ಲಾ ಮಹಿಳೆಯರ ಸಮಾನತೆ, ಸುರಕ್ಷತೆ , ಘನತೆಗೆ ಪಕ್ಷ ಒತ್ತುನೀಡುತ್ತಿದೆ,ಅವಕಾಶಗಳಿಗೆ ಕಾಯಬೇಡಿ,ತಮ್ಮ ಸ್ವಂತ ಸಾಮಥ್ರ್ಯ ದಿಂದ ಅವಕಾಶವನ್ನು ಬಳಸಿಕೊಂಡು ಕ್ರಿಯಾಶೀಲರಾಗುವಂತೆ ಅವರು ಕರೆ ನೀಡಿದರು.
ವಿಭಜನೆ ನೀತಿ:ಭವ್ಯ
ಪ್ರಧಾನ ಭಾಷಣಗೈದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಭವ್ಯ ನರಸಿಂಹ ಮೂರ್ತಿ ಅವರು ಬ್ರಿಟಿಷರು ಹಾಗೂ ಬಿಜೆಪಿ
ನಡುವೆ ಹೋಲಿಕೆಯಿದೆ. ಬ್ರಿಟಿಷರ ವಿಭಜನೆಯ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ ಎಂದು ಟೀಕಿಸಿದರು.
ಕೊರೋನಾ ದಿಂದಾಗಿ ದೇಶ ಶೋಕದಲ್ಲಿದೆ.. ಅತ್ಯಾಚಾರ, ಅನಾಚಾರ ಹೆಚ್ಚಾಗಿದೆ, ಪ್ರತಿಭಟನೆಯ ಹೆಸರಿನಲ್ಲಿ ಸಾವು. ನೋವುಗಳಾಗಿವೆ. ಇದನ್ನೆಲ್ಲಾ ಕಳಚಿ ಹೊಸತನವನ್ನು ರಾಜಕೀಯಕ್ಕೆ ನೀಡುವಂತಾಗಲು ಹೊಸ ಕ್ರಾಂತಿಯ ಅಗತ್ಯವಿದ್ದು ಈ ನಿಟ್ಟಿನಲ್ಲಿ ಮಹಿಳೆಯರು ಮನಸ್ಸು ಮಾಡಬೇಕು ಎಂದರು.
ಭೇಟಿ ಬಚಾವೋ ಭೇಟಿ ಪಡಾವೋ ಕಾಂಗ್ರೇಸ್ ಪಕ್ಷದ ಕಾರ್ಯಕ್ರಮವಾಗಿದ್ದು, ಹೆಸರು ಮಾತ್ರ ಬದಲಾಯಿಸಲಾಗಿದೆ. ಈ ಯೋಜನೆಯ ಶೇ 60 ರಷ್ಟು ಅನುದಾನ ಪ್ರಚಾರಕ್ಕೆ ಬಳಸಲಾಗುತ್ತಿದೆ ಎಂದರು. ಮೋದಿಅಲೆಯಿಂದ ಸಿಕ್ಕಗೆಲುವು ಎಂದಿಗೂ ಶಾಶ್ವತ ಅಲ್ಲ ,ಒಳ್ಳೆ ನಾಯಕತ್ವ ಇದ್ದಾಗ ಮಾತ್ರ ಜನರು ಮತ್ತೆ ಮತ್ತೆ ಆರಿಸಲ್ಪಡುತ್ತಾರೆ, ಅಂತಹ ನಾಯಕತ್ವದ ಗುಣವನ್ನು ಮಾಜಿ ಸಚಿವ ರಮಾನಾಥರೈ ಹೊಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಅವರು ಶಾಸಕರಾಗುವ ಮತ್ತು ರಾಜ್ಯ,ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿ ಮಹಿಳಾ ಕಾರ್ಯಕರ್ತೆಯರು ಸಂಘಟಿತ ಪ್ರಯತ್ನ ಮಾಡುವ ಅಗತ್ಯವಿದೆ ಎಂದರು. ಪಕ್ಷ ಸಂಘಟನೆಯ ಕುರಿತಾಗಿ ಭವ್ಯ ಅವರು ಕಾರ್ಯಕರ್ತೆಯರೊಂದಿಗೆ ಸಂವಾದವನ್ನು ನಡೆಸಿದರು.
ಭೇಟಿ ಬಚಾವೋ ಕಾರ್ಯಕ್ರಮ ವಿಫಲ: ರೈ ಅತಿಥಿಯಾಗಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ ಭೇಟಿ ಬಚಾವೋ ಕಾರ್ಯಕ್ರಮ ವಿಫಲವಾಗಿದೆ. ಬಿಜೆಪಿಯ ಸಚಿವರು, ಬಲಿಷ್ಠ ಪಟ್ಟಭದ್ರರಿಂದ ಭೇಟಿ ಬಚಾವೋ ಆಗ ಬೇಕಾಗಿದೆ. ಬಿಜೆಪಿಯಿಂದ ಮಹಿಳೆಯರ ಮೂಲಭೂತ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದ್ದು ಹೆಣ್ಣು ಮಕ್ಕಳಿಗೆ ರಕ್ಷಣೆ ಸಿಗಬೇಕಾದರೆ ಬಿಜೆಪಿ ಸರಕಾರವನ್ನು ಕಿತ್ತೊಗೆಯ ಬೇಕಾಗಿದೆ ಎಂದರು. ಕೋವಿಡ್ ಬರುವ ಮೊದಲೇ ದೇಶದ ಜಿಡಿಪಿ ಕಡಿಮೆಯಾಗಿದ್ದು ನಾಲ್ಕಕ್ಕೆ ಇಳಿದಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ ಕೊವಿಡ್ ಬರುವ ಮೊದಲೇ ದೇಶದ ಜಿಡಿಪಿ ಕಡಿಮೆಯಾಗಿದ್ದು ನಾಲ್ಕಕ್ಕೆ ಇಳಿದಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ ಎಂದ ಅವರು ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಜನಪರವಾದ ಯೋಜನೆಯನ್ನು ಜಾರಿಗೆ ತಂದಿದ್ದಲ್ಲದೆ ಉತ್ತಮ ಕೆಲಸಗಳನ್ನು ಮಾಡಿದೆ ಎಂದರು. ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಸಭಾಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸದಸ್ಯರಾದ ಮಮತಾಗಟ್ಟಿ, ವೀಣಾ ಭಟ್,ಅನಿತಾ ಹೇಮನಾಥ ಶೆಟ್ಟಿ, ಧನುಭಾಗ್ಯ ರೈ, ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ , ಮಾಜಿ ಜಿ.ಪಂ.ಸದಸ್ಯರಾದ ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ ಶೆಟ್ಟಿ, ಪದ್ಮಶೇಖರ ಜೈನ್ ,ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ,ನಿಕಟಪೂರ್ವ ತಾಪಂ ಸ್ತಾಯಿಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ 11 ಮಂದಿ ಹಿರಿಯ ಮಹಿಳಾ ಕಾಂಗ್ರೇಸ್ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿಶೇಷವಾಗಿ ಸಹೋದರತೆ ಬಾಂಧವ್ಯದ ರಕ್ಷಾಬಂಧನವನ್ನು ಆಚರಿಸಲಾಯಿತು.
ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೇಸ್ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ ಸ್ವಾಗತಿಸಿದರು.
ಬಂಟ್ವಾಳ ಮಹಿಳಾ ಕಾಂಗ್ರೇಸ್ ಸಮಿತಿ ಅಧ್ಯಕ್ಷೆ ವಿಲ್ಮಾ ಮೊರಾಸ್ ವಂದಿಸಿದರು.ಮಾಣಿ ಗ್ರಾಪಂ.ಅಧ್ಯಕ್ಷ ಬಾಲಕೃಷ್ಣ ಆಳ್ವ, ಸ್ನೇಹರಿಷಾ ಕಾರ್ಯಕ್ರಮ ನಿರೂಪಿಸಿದರು.