ಬಂಟ್ವಾಳ : ಕೃಷಿ ಉತ್ಪಾದನೆ ಹೆಚ್ಚು ಮಾಡಲು, ಸ್ವಂತ ಉದ್ಯೋಗ ಮತ್ತು ಆದಾಯದ ದಾರಿ ಕಂಡುಕೊಳ್ಳಲು ರೈತರಿಗೆ ಜೇನು ಕೃಷಿ ಹೆಚ್ಚು ಪ್ರಯೋಜನ ಎಂದು ಮಣಿನಾಲ್ಕೂರು ಸೇವಾ ಸಹಕಾರಿ ಸಂಘ ಸರಪಾಡಿ ಅಧ್ಯಕ್ಷ ರಾಧಾಕೃಷ್ಣ ಮಯ್ಯ ಹೇಳಿದರು.
ಅವರು ಆ.23ರಂದು ಸರಪಾಡಿ ದಿ| ಎನ್. ಸುಬ್ಬಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆದ ಜೇನು ಸಾಕಾಣಿಕೆ ತರಬೇತಿ ಉದ್ಘಾಟಿಸಿ ಮಾತನಾಡಿದರು.
ತೆಂಗು ಉತ್ಪಾದಕರ ಸೌಹಾರ್ದ ಸಹಕಾರಿ ನೀ.ಬಿ. ಸಿ. ರೋಡ್, ತೋಟಗಾರಿಕೆ ಇಲಾಖೆ ಬಂಟ್ವಾಳ ಆಶ್ರಯದಲ್ಲಿ ಕಾರ್ಯಕ್ರಮ ನಡೆದಿತ್ತು.
ಸೌಹಾರ್ದ ಸಹಕಾರಿ ಅಧ್ಯಕ್ಷ ರಾಜಾ ಬಂಟ್ವಾಳ್ ಸಭಾಧ್ಯಕ್ಷತೆ ವಹಿಸಿದ್ದರು.
ಜೇನು ಕೃಷಿಯಿಂದ ತೆಂಗು, ಅಡಿಕೆ ಮತ್ತು ಇತರ ಕೃಷಿ ಫಸಲು ಹೆಚ್ಚುವುದು ಎಂದರು.
ಜೇನು ಕೃಷಿ, ಅದರ ಪ್ರಯೋಜನ, ಸಹಾಯಧನ ಬಗ್ಗೆ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಜೊ ಪ್ರದೀಪ್ ಡಿಸೋಜಾ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿ ರಾಧಾಕೃಷ್ಣ ಬೆಟ್ಟಂಪ್ಪಾಡಿ ಜೇನು ಸಾಕಾಣಿಕೆ ಮಾಹಿತಿ ನೀಡಿದರು.
ಕೃಷಿ ಅಧಿಕಾರಿ ನಂದನ್ ಶೆಣೈ ಮುಂಗಾರು ಬೆಳೆ ನಮೂದು ತಾಂತ್ರಿಕ ವಿಧಾನ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಮಣಿನಾಲ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗವೇಣಿ, ಮಣಿನಾಲ್ಕೂರು ಸಹಕಾರಿ ಸಂಘದ ಉಪಾಧ್ಯಕ್ಷ ವಿಶ್ವನಾಥ್ ನಾಯ್ಕ ಮತ್ತು ನಿರ್ದೇಶಕರಾದ ದಯಾನಂದ ಶೆಟ್ಟಿ ಮುನ್ನಲಾಯಿ, ತಿಲಕ್ ಬಂಗೇರ, ಜೋಕಿಂ ಪಿಂಟೋ, ವಿಶ್ವನಾಥ ಪೂಜಾರಿ, ನಾನಿಯಪ್ಪ ಪೂಜಾರಿ, ಗಿರಿದರ ಎಸ್. ಸೌಹಾರ್ದ ಸಹಕಾರಿ ನಿರ್ದೇಶಕ ಸದಾಶಿವ ಬಂಗುಳೆ ಉಪಸ್ಥಿತರಿದ್ದರು.
ಮಣಿನಾಲ್ಕೂರು ಸಹಕಾರಿ ಸಂಘದ ನಿರ್ದೇಶಕ ಧನಂಜಯ ಶೆಟ್ಟಿ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಾಹಕ ಹೆಚ್. ಸುಧಾಕರ ಶೆಟ್ಟಿ ವಂದಿಸಿದರು. ಸೌಹಾರ್ದ ಸಹಕಾರಿ ಮುಖ್ಯ ಕಾರ್ಯನಿರ್ವಾಹಕ ಹರ್ಷಿತ್ ಕಾರ್ಯಕ್ರಮ ನಿರ್ವಹಿಸಿದರು.