ಬಂಟ್ವಾಳ : ಪ್ರೀತಿ ವಿಶ್ವಾಸದೊಂದಿಗೆ ಜನರ ಜೊತೆಗೆ ಬೆರೆತಾಗ ಪಕ್ಷದ ಬಲವರ್ಧನೆ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು.
ಬಿ.ಸಿ.ರೋಡಿನ ಗೀತಾಂಜಲಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬಂಟ್ವಾಳ ಮಂಡಲ ಬಿಜೆಪಿ ಎಸ್.ಸಿ.ಮೋರ್ಛಾದ ವಿಶೇಷ ಕಾರ್ಯಕಾರಣಿ ಸಭೆಯಲ್ಲಿ ಸಚಿವರು ಭಾಗವಹಿಸಿ ಮಾತನಾಡಿದರು. ಸಂದರ್ಭಕ್ಕನುಸಾರವಾಗಿ ಪಕ್ಷವನ್ನು ಬಲಿಷ್ಠಗೊಳಿಸುವ ದೆಸೆಯಲ್ಲಿ ಚಿಂತಿಸಬೇಕು ಎಂದ ಸಚಿವರು ಬಿಜೆಪಿ ಸರಕಾರ ಪ.ಜಾ.ಮತ್ತು ಪಂಗಡದ ಸಮುದಾಯಕ್ಕೆ ವಯಕ್ತಿಕವಾದ ಹಲವಾರು ಸವಲತ್ತು ಗಳನ್ನು ಜಾರಿಗೆ ತಂದಿದ್ದು,ಇದನ್ನು ಸಮುದಾಯದ ಜನರಿಗೆ ತಲುಪಿಸಿದಾಗ ಪಕ್ಷವು ಬೆಳೆಯುತ್ತದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ವಿಶೇಷ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ,ಎಸ್ ಸಿ ಮೋರ್ಛಾ ಸಹಿತ ವಿವಿಧ ಏಳು ಮೋರ್ಛಾಗಳು ಸಕ್ರೀಯವಾಗಿ ತೊಡಗಿಸಿಕೊಂಡು ಭಾರತೀಯ ಜನತಾ ಪಾರ್ಟಿಗೆ ಬೆಂಬಲವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಕೊರೋನಾವನ್ನು ಭಾರತವನ್ನು ಎದುರಿಸಿದ ವಿಧಾನಕ್ಕೆ ವಿಶ್ವವೇ ಬೆರಗಾಗಿದೆ. ಭಾರತದ ಸ್ವದೇಶಿ ಲಸಿಕೆಯನ್ನು ಕಂಡುಹುಡುಕಿದ್ದೇ ದೊಡ್ಡ ಸಾಧನೆ ಎಂದ ಶಾಸಕರು, ಇದು ಪ್ರಧಾನಿ ನರೇಂದ್ರ ಮೋದಿಯ ಪ್ರೇರಣೆಯಿಂದ ಸಾಧ್ಯವಾಗಿದೆ ಎಂದರು.
ಸುಳ್ಯದ ಶಾಸಕರಾದ ಅಂಗಾರರು ಸತತ ಗೆಲುವಿನೊಂದಿಗೆ ರಾಜ್ಯ ಸಚಿವರಾಗಿರುವುದು, ಇಡೀ ಸಮುದಾಯಕ್ಕೆ ಹೆಮ್ಮೆ ಮಾತ್ರವಲ್ಲ, ಭಾರತೀಯ ಜನತಾ ಪಾರ್ಟಿಗೂ ಹೆಮ್ಮೆಯ ವಿಚಾರ ಎಂದರು.
ಬಿಜೆಪಿ ಬಂಟ್ವಾಳ ಮಂಡಲ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿಯವರು ಮಾತನಾಡಿ, ಪ್ರತಿಯೋರ್ವರನ್ನೂ ಸಮಾಜದ ಮುಖ್ಯವಾಹಿನಿಗೆ ತರುವುದು ಬಿಜೆಪಿಯ ಧ್ಯೇಯವಾಗಿದ್ದು ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾಳಜಿಯಿಂದ ಕಾರ್ಯ ನಿರ್ವಹಿಸುವಂತೆ ಕರೆ ನೀಡಿದರು. ಬಂಟ್ವಾಳ ಮಂಡಲ ಬಿಜೆಪಿ ಎಸ್ಸಿ ಮೋರ್ಛಾ ಅಧ್ಯಕ್ಷ ಕೇಶವ ದೈಪಲ ಸಭಾಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ರಾಜ್ಯ ಎಸ್ಸಿ ಮೋರ್ಛಾದ ಕಾರ್ಯಕಾರಿಣಿ ಸಮಿತಿ ಸದಸ್ಯ ದಿನೇಶ್ ಅಮ್ಟೂರು,ಎಸ್ಸಿ ಮೋರ್ಛಾ ಜಿಲ್ಲಾಧ್ಯಕ್ಷ ವಿನಯ ನೇತ್ರ, ಜಿಲ್ಲಾ ಕಾರ್ಯದರ್ಶಿ ಮನೋಜ್ ಕುಮಾರ್, ಪ್ರಭಾರಿಗಳಾದ ಪುರುಷೋತ್ತಮ ಶೆಟ್ಟಿ, ಮಂಗಳಾ ಅವರು ವೇದಿಕೆಯಲ್ಲಿದ್ದರು. ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ಡೊಂಬಯ ಅರಳ, ಪ್ರಕಾಶ್ ಅಂಚನ್,ರೋನಾಲ್ಡ್ ಡಿಸೋಜ ಅಮ್ಟಾಡಿ, ಮಾದಲಾದವರು ಹಾಜರಿದ್ದರು. ರಮೇಶ್ ಕುದ್ರೆಬೆಟ್ಟು ಸ್ವಾಗತಿಸಿ, ನಿರೂಪಿಸಿದರು.ವಿಶ್ವನಾಥ ಚಂಡ್ತಿಮಾರ್ ವಂದಿಸಿದರು