ಬಂಟ್ವಾಳ: ಕಾನೂನು ಸೇವೆಗಳ ಸಮಿತಿ ಬಂಟ್ವಾಳ ವತಿಯಿಂದ ಶನಿವಾರ ಬಂಟ್ವಾಳದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮೆಗಾ ಲೋಕ್ ಅದಾಲತ್ ನಡೆಯಿತು. ಒಟ್ಟು 470 ಸಿವಿಲ್, ಕ್ರಿಮಿನಲ್ ಹಾಗೂ ಬ್ಯಾಂಕ್ ಗೆ ಸಂಬಂಧಪಟ್ಟ ದಾವೆಗಳು, ಮೋಟಾರು ವಾಹನ ಕಾಯ್ದೆಯ ಪ್ರಕರಣಗಳು ಇತ್ಯರ್ಥಗೊಳಿಸಲಾಯಿತು.
ಎಂವಿಸಿ ಕೇಸುಗಳಲ್ಲಿ 32,11,000 ರೂ ಪರಿಹಾರದ ಮೊತ್ತ, ಚೆಕ್ ಬೌನ್ಸ್ ಕೇಸುಗಳಲ್ಲಿ 9,20,288 ರೂ ವಸೂಲಿ, ಕ್ರಿಮಿನಲ್ ಪ್ರಕರಣಗಳಲ್ಲಿ 1,99,775 ರೂ ದಂಡ ವಸೂಲಿ, ಪಿ.ಎಲ್.ಸಿ. ದಾವೆಗಳಲ್ಲಿ ಒಟ್ಟು 51,73,000 ರೂಗಳನ್ನು ಬ್ಯಾಂಕುಗಳಿಗೆ ಮರುಪಾವತಿ ಮಾಡಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶರೂ ಜೆಎಂಎಫ್ ಸಿ ನ್ಯಾಯಾಧೀಶರಾದ ಬಾಲಗೋಪಾಲಕೃಷ್ಣ ಚಾಲನೆ ನೀಡಿದರು. ಈ ಸಂದರ್ಭ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ ಸಿ ನ್ಯಾಯಾಧೀಶರಾದ ರಮ್ಯಾ ಎಚ್. ಆರ್,, ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಧೀಶರಾದ ಶಿಲ್ಪಾ ಜಿ. ತಿಮ್ಮಾಪುರ್, ವಕೀಲರ ಸಂಘ ಬಂಟ್ವಾಳ ಅಧ್ಯಕ್ಷ ಗಣೇಶಾನಂದ ಸೋಮಯಾಜಿ, ಉಪಾಧ್ಯಕ್ಷ ಮೋಹನ ಪ್ರಭು, ಪ್ರಧಾನ ಕಾರ್ಯದರ್ಶಿ ವೀರೇಂದ್ರ ಎಂ.ಸಿದ್ಧಕಟ್ಟೆ ಸಹಿತ ವಕೀಲರು ಉಪಸ್ಥಿತರಿದ್ದರು.