ಇತ್ತೀಚೆಗೆ ಗೂಡಿನಬಳಿ ವಲಯ ಕಾಂಗ್ರೆಸ್ ಪಕ್ಷದ ವತಿಯಿಂದ 13 ಹಾಗೂ 14ನೇ ವಾರ್ಡಿಗೆ ನೂತನವಾಗಿ ಆಯ್ಕೆಯಾದ ಪಧಾಧಿಕಾರಿಗಳಿಗೆ ಪಕ್ಷದ ವತಿಯಿಂದ ಗೂಡಿನಬಳಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಇದೇ ವೇಳೆ 40ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ಪಕ್ಷದ ತತ್ವ ಸಿಧ್ದಾಂತ ಒಪ್ಪಿ ಪಕ್ಷಕ್ಕೆ ಸೇರ್ಪಡೆಗೊಂಡರು.ನೂತನವಾಗಿ ಸೇರ್ಪಡೆಗೊಂಡ ಸರ್ವರಿಗೂ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ನೂತನವಾಗಿ ಆಯ್ಕೆಯಾದ ಪಧಾಧಿಕಾರಿಗಳಿಗೆ ಪಕ್ಷದ ಧ್ವಜ ನೀಡಿ ಶಾಲು ಹೊದಿಸಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಸಮಾರಂಭದಲ್ಲಿ ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ,ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಆಲಿ,ಲೋಲಾಕ್ಷ,ಮೊಹಮ್ಮದ್ ನಂದಾವರ,ಸ್ವಾಲಿಹ್,ಇಸ್ಮಾಯಿಲ್ ಹಾಗೂ ಯುವ ನಾಯಕರಾದ ನವಾಝ್ ಬಡಕಬೈಲು,ಅರ್ಶದ್ ಸರವು ಉಪಸ್ಥಿತರಿದ್ದರು.
ವಲಯ ಗೌರವಾಧ್ಯಕ್ಷರಾದ ಚಾಚಾ ಖಾದರ್,ವಲಯ ಅಧ್ಯಕ್ಷರಾದ ರಝಕ್ ಟಿ,ಬೂತ್ ಅಧ್ಯಕ್ಷರಾದ ಖಾಸಿಂ ಎಂಕೆ,ಸತ್ಯ ನಾರಾಯಣ್ ರಾವ್ ಹಾಗೂ ಪಧಾಧಿಕಾರಿಗಳಾದ ಫ್ರಾನ್ಸಿಸ್,ಹಸನಾಕ,ರಹೀಂ,ಅಲೀಂ,ಪ್ರದೀಪ್ ಕಿನ್ನಿ ಮತ್ತು ಸ್ಥಳೀಯ ಯುವ ಕಾಂಗ್ರೆಸ್ ನಾಯಕರಾದ ರಿಝ್ವಾನ್ ,ಅಮೀನ್ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.