Friday, April 5, 2024

ಕೊರೊನಾದಿಂದ ಮೃತಪಟ್ಟ ಎಸ್.ಸಿ.ಎಸ್.ಟಿ. ಕುಟುಂಬಕ್ಕೆ ಪುರಸಭೆ ಏನು‌ ನೀಡಿದೆ? 

ಬಂಟ್ವಾಳ: ಪುರಸಭಾ‌ ವ್ಯಾಪ್ತಿಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕುಂದುಕೊರತೆಗಳ ಸಭೆ ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್ ಅವರ ಅಧ್ಯಕ್ಷ ತೆಯಲ್ಲಿ ಪುರಸಭೆಯ ಸಭಾಂಗಣದಲ್ಲಿ ನಡೆಯಿತು.

ಕೊರೊನಾದಿಂದ ಮೃತಪಟ್ಟ ಕುಟುಂಬಗಳ ಮನೆಗೆ ಪುರಸಭೆಯ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳುವ ಕನಿಷ್ಟ ಕೆಲಸವನ್ನಾದರೂ ಮಾಡಿದ್ದೀರಾ ಎಂದು ಸಭೆಯಲ್ಲಿ ಭಾಗವಹಿಸಿದ ಪ್ರಮುಖರು ಪ್ರಶ್ನಿಸಿದರು.

ಕೊರೊನಾ ಪಾಸಿಟಿವ್ ಪ್ರಕರಣಗಳು ಬಂದಿರುವ ಕಡೆಗಳಿಗೆ ಹೋಗಿ ಸೀಲ್ ಡೌನ್ ಮಾಡಿದ ಸಾಧನೆ ಬಿಟ್ಟರೆ ಮನೆಯವರ ಪರಿಸ್ಥಿತಿ ಯ ಬಗ್ಗೆ ತಿಳಿದುಕೊಂಡಿದ್ದೀರಾ ಎಂದು ವಿಶ್ವನಾಥ ಚೆಂಡ್ತಿಮಾರ್ ಪ್ರಶ್ನಿಸಿದರು.

ಎಸ್.ಸಿ.ಎಸ್.ಟಿ. ಕುಂದುಕೊರತೆಗಳ ಸಭೆ ಯಲ್ಲಿ ಚರ್ಚಿಸಿದ ವಿಷಯಗಳು ಸಾಮಾನ್ಯ ಸಭೆಯ ಅಜೆಂಡಾ ದಲ್ಲಿ ನಮೂದಿಸಿ ಎಂದು ಒತ್ತಾಯ ಮಾಡಿದ ಅವರು ನಿರ್ಣಯ ಮಾಡುವಂತೆ ಒತ್ತಾಯಿಸಿದರು.

ಕೋವಿಡ್ ವಿಚಾರದಲ್ಲಿ ಹೆಚ್ಚಿನ ಚರ್ಚೆ ಈ ಸಭೆಯಲ್ಲಿ ನಡೆಯಬೇಕಾಗಿತ್ತು.ಅದರೆ ಸಭೆಯಲ್ಲಿ ಪುರಸಭಾ ಆರೋಗ್ಯ ಅಧಿಕಾರಿ ಯೇ ಗೈರು ಹಾಜರಾಗಿದ್ದು ಸರಿಯೇ ? ಎಂಬ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು ಅವರು ಕೋವಿಡ್ ಪರೀಕ್ಷೆ ನಡೆಸುವ ಸಲುವಾಗಿ ಪೀಲ್ಡ್ ಗೆ ಹೋಗಿದ್ದಾರೆ ಎಂದರು.

ಮನೆ ರಿಪೇರಿಗೆ ಪುರಸಭಾ ಇಲಾಖೆ 25 ಹಣ ನೀಡುತ್ತಿದ್ದು ಇದು ಸಾಕಾಗುವುದಿಲ್ಲ ಅದನ್ನು ಹೆಚ್ಚು ಮಾಡುವಂತೆ ಸಭೆಯಲ್ಲಿ ಒತ್ತಾಯಿಸಿದರು.

ಎಸ್.ಸಿ.ಎಸ್.ಟಿ. ಅವರ ಆರೋಗ್ಯ ರಕ್ಷಣೆ ಗೆ ಸಂಬಂಧಿಸಿದಂತೆ 30 ಸಾವಿರ ರೂ ವಿಮಾ ವ್ಯವಸ್ಥೆ ಮಾಡಿದ್ದು ಇದರಿಂದ ಪ್ರಯೋಜನ ಪಡೆಯಲು ಸಾಧ್ಯ ವಿಲ್ಲ , ವಿಮಾ ಮೊತ್ತವನ್ನು 1 ಲಕ್ಷದ ವರಗೆ ಏರಿಸಬೇಕು ಎಂದು ಒತ್ತಾಯಿಸಿದರು.

ಎಸ್.ಸಿ.ಎಸ್.ಟಿ.ಯವರ ಸಮಸ್ಯೆಯನ್ನು ಕತ್ತಲೆಯಲ್ಲಿಟ್ಟು ಗೌಪ್ಯ ಸಭೆಯಾ? ಎಂದು ವಿಶ್ವನಾಥ್ ಚೆಂಡ್ತಿಮಾರ್ ಪುರಸಭಾ ಅಧ್ಯಕ್ಷ ರನ್ನು ಪ್ರಶ್ನಿಸಿದ್ದಾರೆ.

ಕುಂದುಕೊರತೆಗಳ ಸಭೆಗೆ ಮಾಧ್ಯಮ ವರನ್ನು ಹೊರಗಿಟ್ಟು ಸಭೆ ನಡೆಸುವ ನಿಮ್ಮ ಯೋಚನೆಯಾದರೂ ಯಾಕೆ? ಎಂದು ಅವರು ಪ್ರಶ್ನಿಸಿದ್ದಾರೆ.

ಇತರ ಎಲ್ಲಾ ಕಡೆಗಳಲ್ಲಿ ಮಾಧ್ಯಮ ದವರಿಗೆ ಮಾಹಿತಿ ನೀಡುತ್ತಾರೆ ಆದರೆ ಇಲ್ಲಿ ಮಾತ್ರ ಯಾಕೆ ಕರೆದಿಲ್ಲ, ಅದರ ಉದ್ದೇಶ ಏನು ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ಮಹಮ್ಮದ್ ಶರೀಫ್ ಅವರು ಮುಂದಿನ ದಿನಗಳಲ್ಲಿ ಈಗಾಗದಂತೆ ನೋಡಿಕೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಉಪಸ್ಥಿತರಿದ್ದರು.

ಚರ್ಚೆ ಯಲ್ಲಿ ಗಂಗಾದರ ಪರಾರಿ, ಜನಾರ್ದನ ಚೆಂಡ್ತಿಮಾರ್, ಕೇಶವ ದೈಪಲ, ಸುರೇಶ್ ಅರ್ಬಿಗುಡ್ಡೆ ಮೊದಲಾದವರು ಪಾಲ್ಗೊಂಡರು.

More from the blog

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...

ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಭೇಟಿ

ಬಂಟ್ವಾಳ ತಾಲೂಕಿನ ಶಕ್ತಿಕೇಂದ್ರವಾದ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಬಿಜೆಪಿ...

ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್ “ಹೋಟೆಲ್ ಅನ್ನಪೂರ್ಣ” ಶುಭಾರಂಭ

ಬಂಟ್ವಾಳ ತಾಲೂಕಿನ ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ಅರುಣ್ ಕುಮಾರ್, ಮಹೇಶ್ ಕುಮಾರ್, ಜನಾರ್ಧನ್ ಪೊಸೊಳಿಗೆ ಮಾಲಕತ್ವದ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್. "ಹೋಟೆಲ್ ಅನ್ನಪೂರ್ಣ" ಶುಭಾರಂಭಗೊಂಡಿತು. ಶ್ರೀ...

ನಂದನಹಿತ್ಲು ವೈದ್ಯನಾಥ, ಅರಸು, ಜುಮಾದಿ ಬಂಟ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ

ಬಂಟ್ವಾಳ: ಇಲ್ಲಿನ ಪೇಟಯಲ್ಲಿರುವ ನಂದನಹಿತ್ಲು ವೈದ್ಯನಾಥ,ಅರಸು,ಜುಮಾದಿ ಬಂಟ ದೈವಸ್ಥಾನದಲ್ಲಿ ಕಾಲವಧಿಯ ನೇಮೋತ್ಸವವು ಗುರುವಾರ ಬೆಳಗ್ಗೆ ಸಂಪನ್ನಗೊಂಡಿತು. ಕ್ಷೇತ್ರದ ತಂತ್ರಿಗಳಾದ ಪೊಳಲಿ ಗಿರಿಪ್ರಕಾಶ್ ತಂತ್ರಿವರ ನೇತೃತ್ವದಲ್ಲಿ‌ ನಡೆದ ವಿವಿಧ ವೈಧಿಕ ವಿಧಿವಿಧಾನಗಳ ಬಳಿಕ ಮೊದಲದಿನ ಶ್ರೀ...