ಬಂಟ್ವಾಳ: ಬ್ಯಾಂಕ್ ಕಳವಿಗೆ ಯತ್ನಿಸಿದ ಮೂವರು ಆರೋಪಿಗಳನ್ನು ವಿಟ್ಲ ಪೋಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಎಚ್.ವಿ. ಅವರ ನೇತೃತ್ವದ ತಂಡ ಸಕಲೇಶಪುರ ದಲ್ಲಿ ಬಂಧಿಸಿದ್ದಾರೆ.
ಆರೋಪಿಗಳಾದ ಆನೆ ಮಹಲ್ ಸಕಲೇಶಪುರ ನಿವಾಸಿ
ಎಂ . ಅಲ್ತಾಫ್ ಹುಸೈನ್ , ಆನೆ ಮಹಲ್ ಸಕಲೇಶಪುರ ನಿವಾಸಿ ಮೊಹಮ್ಮದ್ ಆಶೀದ್ , ಆನೆ ಮಹಲ್ ಸಕಲೇಶಪುರ ನಿವಾಸಿ ಮಾರುತಿ ಎಂಬವರು ಬಂಧಿತ ಆರೋಪಿಗಳು.
ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದದಲ್ಲಿರುವ ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿಗೆ ಜುಲೈ 16 ರ ಸಂಜೆ 5.45 ಬಳಿಕ ಜುಲೈ 17 ರ ಮದ್ಯಾವಧಿಯಲ್ಲಿ ಬ್ಯಾಂಕಿನ ಮಹಡಿಯ ಹಂಚನ್ನು ತೆಗೆದು ಕಳ್ಳರು ಕಳವು ಮಾಡುವು ಉದ್ದೇಶದಿಂದ ತೆಗೆದು ಒಳಗಡೆ ಬಂದು ಕಚೇರಿಯ ಕಪಾಟಿನ ಬಾಗಿಲು ತೆಗೆದು ಹುಡುಕಾಡಿದ್ದು ಕಳವಿಗೆ ಪ್ರಯತ್ನಿಸಿದ್ದು , ಈ ಬಗ್ಗೆ ಬ್ಯಾಂಕಿನ ವ್ಯವಸ್ಥಪಕರಾದ ಶೇಖರ ಪೂಜಾರಿ ಕೆ ರವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು.
ಈ ಪ್ರಕರಣದ ತನಿಖೆ ನಡೆಸಿ ಕಳವಿಗೆ ಪ್ರಯತ್ನಿಸಿದ ಆರೋಪಿಗಳನ್ನು ವಿಟ್ಲ ಪೋಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಪೋಲೀಸರ ತಂಡ ಬಂಧಿಸಿದ್ದಾರೆ.
ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರ , ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧಿಕ್ಷಕರ ಮಾರ್ಗದರ್ಶನದಲ್ಲಿ ವಿಟ್ಲ ಠಾಣಾ ಪೊಲೀಸ್ ನಿರೀಕ್ಷಕರಾದ ನಾಗಾರಾಜ ಹೆಚ್.ಇ. ಪೊಲೀಸ್ ಉಪನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿ , ಪ್ರೊಬೇಷನರಿ ಪಿಎಸ್‌ಐ ಮಂಜುನಾಥ ಟಿ . ಸಿಬ್ಬಂದಿಗಳಾದ ಜಯರಾಮ ಕೆ.ಟಿ. , ಪ್ರಸನ್ನ ಕುಮಾರ್ , ಪ್ರತಾಪ್ ರೆಡ್ಡಿ , ಹೇಮರಾಜ್ , ವಿನಾಯಕ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ .